5000 ಯುವ ಮತದಾರರ ಸೇರ್ಪಡೆ
ಮೈಸೂರು

5000 ಯುವ ಮತದಾರರ ಸೇರ್ಪಡೆ

April 11, 2023

ಮೈಸೂರು, ಏ.10(ಆರ್‍ಕೆ)- ಭಾರತದ ಚುನಾವಣಾ ಆಯೋಗವು ಕಟ್ ಆಫ್ ಡೇಟ್ ಅನ್ನು 2023ರ ಜನವರಿ 1ರ ಬದ ಲಾಗಿ ಏ.1ಕ್ಕೆ ವಿಸ್ತರಣೆ ಮಾಡಿದ್ದರಿಂದ ಮೈಸೂರು ಜಿಲ್ಲೆಯಲ್ಲಿ 18 ವರ್ಷ ತುಂಬಿದ ಸುಮಾರು 5,000 ಯುವ ಮತದಾರರು ಈ ಬಾರಿಯ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹತೆ ಗಳಿಸಿ ಕೊಂಡಿದ್ದಾರೆ.

2023ರ ಏ.1ಕ್ಕೆ 18 ವರ್ಷ ಪೂರೈಸಿದ ಯುವಕ-ಯುವತಿಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಿಕೊಳ್ಳಲು ನಾಳೆ (ಏ.11)ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈಗಾಗಲೇ ಮೈಸೂರು ಜಿಲ್ಲೆಯಲ್ಲಿ 4,670 ಮಂದಿ ಯುವಕ-ಯುವತಿಯರು ನಮೂನೆ 6 ಅನ್ನು ಭರ್ತಿ ಮಾಡಿ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿ ಕೊಂಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿ ಚುನಾವಣಾ ಶಾಖೆ ಹಾಗೂ ನಜರ್‍ಬಾದಿನ ತಹಸೀ ಲ್ದಾರ್ ಕಚೇರಿ ಚುನಾವಣಾ ಶಾಖೆಯಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯ ಹೊಸ ಮತದಾರರ ಅರ್ಜಿಗಳನ್ನು ಪರಿಶೀಲಿಸು ತ್ತಿರುವ ಅಧಿಕಾರಿಗಳು ದಾಖಲಾತಿ ಸರಿ ಇದ್ದರೆ ಮತದಾರರ ಪಟ್ಟಿಗೆ ಯುವ ಮತ ದಾರರ ಹೆಸರು ಸೇರಿಸಿ, ಮತದಾರರ ಗುರುತಿನ ಚೀಟಿಯನ್ನು ಸಿದ್ಧಪಡಿಸುತ್ತಿದ್ದಾರೆ. ಅಂತಹ ಯುವ ಮತದಾರರು (ಮೊದಲ ಬಾರಿ ಮತ ಚಲಾಯಿಸುತ್ತಿರುವವರು) ಮೇ 10 ರಂದು ನಡೆಯಲಿರುವ 2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗುತ್ತಾರೆ. ಇದೀಗ ಹೊಸ ಮತದಾರರಿಗೆ ವಿನೂತನ ಮಾದರಿಯ ಅತ್ಯಾಕರ್ಷಕ ಬಣ್ಣ ಬಣ್ಣದ ಮತದಾರರ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ. ಅದೇ ರೀತಿ 80 ವರ್ಷ ಮೇಲ್ಪಟ್ಟ, ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಹಿರಿಯ ನಾಗರಿಕರಿಗೆ ಮತ ಚಲಾಯಿಸಲು ಅವಕಾಶ ನೀಡುವ ಸಲು ವಾಗಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮೈಸೂರು ಜಿಲ್ಲಾಡಳಿ ತವು 12-ಡಿ ನಮೂನೆಗಳನ್ನು ವಿತರಿಸು ತ್ತಿದ್ದು, ಚುನಾವಣೆ ದಿನ ಅಂಚೆ ಮತದಾನ ಮಾಡಿಸಲು ಪ್ರಕ್ರಿಯೆ ಕೈಗೊಂಡಿದೆ. ಜಿಲ್ಲೆ ಯಲ್ಲಿ 84,967 ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿದ್ದಾರೆ. ಬೂತ್ ಮಟ್ಟದ ಅಧಿಕಾರಿ (ಃಐಔ) ಗಳ ಮೂಲಕ ಅವರ ಮನೆಗೆ ಭೇಟಿ ನೀಡಿ 12-ಡಿ ನಮೂನೆ ಭರ್ತಿ ಮಾಡಿಸುತ್ತಿದ್ದು, ಮತದಾನ ದಿನದಂದು ಬ್ಯಾಲೆಟ್ ಪೇಟರ್‍ನೊಂದಿಗೆ ತೆರಳಿ ಅಂಚೆ ಮತದಾನ ಮಾಡಿಸಿ ಪ್ರಕ್ರಿಯೆಯನ್ನು ವಿಡಿಯೋ ಮಾಡಿಸಿ, ತಂದು ಆಯಾಯ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ (ಖಔ) ಗಳಿಗೆ ಬಿಎಲ್‍ಓಗಳು ತಲುಪಿಸಲು ಸಕಲ ಸಿದ್ಧತೆ ಮಾಡಲಾಗಿದೆ. ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶ ಹೊಂದಿರುವ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಜಿಲ್ಲೆಯಾದ್ಯಂತ ಯುವ ಮತದಾರರು ಮತದಾರರ ಪಟ್ಟಿಗೆ ಕೊನೆಗಳಿಗೆವರೆಗೂ ಹೆಸರು ಸೇರಿಸುವುದರೊಂದಿಗೆ, ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ಸಾಧ್ಯವಾಗದ 80 ವರ್ಷ ಮೇಲ್ಪಟ್ಟ ಹಿರಿಯರಿಗೂ ಮನೆಯಲ್ಲೇ ಮತದಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ.

Translate »