ಸೋಂಕಿತರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಮಾಡಿಕೊಳ್ಳಿ
ಮೈಸೂರು

ಸೋಂಕಿತರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಮಾಡಿಕೊಳ್ಳಿ

July 5, 2020

ಮೈಸೂರು, ಜು. 4(ಆರ್‍ಕೆ)- ದಿನ ದಿಂದ ದಿನಕ್ಕೆ ಕೋವಿಡ್-19 ಪ್ರಕರಣ ಗಳು ಹೆಚ್ಚಾಗುತ್ತಿರುವುದರಿಂದ ಸೋಂಕಿತ ರಿಗೆ ಚಿಕಿತ್ಸೆ ನೀಡಲು ಸಕಲ ರೀತಿಯಲ್ಲಿ ಸಜ್ಜಾಗುವಂತೆ ಆರೋಗ್ಯ ಇಲಾಖೆ ಅಧಿ ಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸೂಚನೆ ನೀಡಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇ ರಿಯ ಡಿ.ದೇವರಾಜ ಅರಸು ಸಭಾಂಗಣ ದಲ್ಲಿ ಶನಿವಾರ ಸಭೆ ನಡೆಸಿದ ಅವರು, ಈಗಾಗಲೇ ಎರಡು ಕಡೆಗಳಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸುತ್ತಿದ್ದು, ಆಯುರ್ವೇದ ಪಂಚಕರ್ಮ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಪ್ರಯೋಗಾಲಯ ಆರಂಭಿಸಲು ಮುಂದೆ ಬಂದಿರುವ ಸಿಎಫ್‍ಟಿಆರ್‍ಐನೊಂದಿಗೆ ಕೈಜೋಡಿಸಿ ಶೀಘ್ರ ಪರೀಕ್ಷೆ ಆರಂಭಿಸಲು ನೆರವಾಗಿ ಎಂದು ಡಿಸಿ ತಿಳಿಸಿದರು.

ಸೋಂಕಿತರ ಸಂಖ್ಯೆಗನುಗುಣವಾಗಿ ಕೋವಿಡ್ ಆಸ್ಪತ್ರೆಗಳ ವ್ಯವಸ್ಥೆ ಮಾಡ ಬೇಕಾಗಿರುವುದರಿಂದ ಗುರ್ತಿಸಿರುವ ಕಟ್ಟಡ ಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಿ, ಆಂಬು ಲೆನ್ಸ್‍ಗಳು ಲಭ್ಯವಾಗುವಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿ ದರು. ಪಿಪಿಇ ಕಿಟ್, ರೋಗಿಗಳಿಗೆ ಆಹಾರ ಪೂರೈಕೆ, ಸ್ಯಾನಿಟೈಸ್ ಮಾಡಲು ಸಕಲ ಸಿದ್ಧತೆ ಮಾಡಿಕೊಂಡು ಯಾವುದೇ ಕೊರತೆ ಯಾಗದಂತೆ ಎಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ಟಿಬಿ ಅಧಿಕಾರಿ ಡಾ.ಪಿ.ರವಿ ಸೇರಿದಂತೆ ಹಲವರು ಸಭೆ ಯಲ್ಲಿ ಹಾಜರಿದ್ದರು

Translate »