ರಾಜ್ಯದಲ್ಲಿ ಕೊರೊನಾ ಅಟ್ಟಹಾಸ: ಸರ್ವಪಕ್ಷ ಸಭೆಗೆ ಹೆಚ್ಕೆಪಿ ಆಗ್ರಹ
ಮೈಸೂರು

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ: ಸರ್ವಪಕ್ಷ ಸಭೆಗೆ ಹೆಚ್ಕೆಪಿ ಆಗ್ರಹ

July 5, 2020

ಬೆಂಗಳೂರು, ಜುಲೈ 4 (ಕೆಎಂಶಿ)-ರಾಜ್ಯದಲ್ಲಿ ಕೋವಿಡ್ -19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರ ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು ಹಾಗೂ ರಾಜ್ಯದ ಎಲ್ಲಾ ಜನರಿಗೆ ಕೋವಿಡ್ ವಿಮೆ ಮಾಡಿಸಬೇಕು ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆಗ್ರಹಿಸಿದರು.

ಇಟಲಿ ಪರಿಸ್ಥಿತಿ ಬರುವ ಮುನ್ನ ಸಭೆ ಕರೆದು ಪ್ರತಿಪಕ್ಷಗಳ ಸಲಹೆಗಳನ್ನು ಪಡೆಯಬೇಕು. ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಲವು ಸಲಹೆ ನೀಡಿದೆ. ಆ ಸಲಹೆಗಳನ್ನು ಪಾಲಿಸಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.

ಕೊರೊನಾ ಪಾಸಿಟಿವ್ ಬಂದವರಿಗೆ 2ರಿಂದ 5 ಲಕ್ಷ ರೂ. ಆರ್ಥಿಕ ಸಹಾಯ ಸಿಗುವಂತೆ ಇನ್ಷ್ಯೂ ರೆನ್ಸ್ ಸರ್ಕಾರ ಮಾಡಬೇಕು. ರಾಜ್ಯದ ಎಲ್ಲಾ ಜನ ರನ್ನು ವಿಮೆ ವ್ಯಾಪ್ತಿಗೆ ತರಬೇಕು. ಹೆಚ್ಚೆಂದರೆ 2 ಸಾವಿರ ಕೋಟಿ ಹಣ ಖರ್ಚಾಗಲಿದೆ. ಕೋವಿಡ್-19 ಕರ್ನಾಟಕವನ್ನು ಸಂಪೂರ್ಣವಾಗಿ ತಲ್ಲಣಗೊಳಿ ಸಿದೆ. ರಾಜ್ಯ ಸರ್ಕಾರ ಅತ್ಯಂತ ಬೇಜವಾಬ್ದಾರಿ ಯಿಂದ ವರ್ತಿಸುತ್ತಿದೆ. ಯುದ್ಧೋಪಾದಿಯಲ್ಲಿ ಕೆಲಸ ಆಗಬೇ ಕಿತ್ತು. ಅದರಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ಟೆಸ್ಟ್ ಹೆಚ್ಚು ಮಾಡುವಂತೆ ಮನವಿ ಮಾಡಿದ್ದೆವು. ವಿಧಾನಸಭೆ ಒಳಗೆ ಮತ್ತು ಹೊರಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.

40 ಸಾವಿರ ಸ್ಯಾಂಪಲ್ ತೆಗೆದುಕೊಂಡಿದ್ದರು ಇನ್ನೂ ಕೊರೊನಾ ಪರೀಕ್ಷಾ ಫಲಿತಾಂಶಗಳು ಬಂದಿಲ್ಲ ಎಂದು ಆರೋಪಿಸಿದರು. ಭ್ರಷ್ಟರಿಗೆ ಸರಿಯಾದ ಎಚ್ಚರಿಕೆ ಕೊಡಬೇಕು. ಭ್ರಷ್ಟಾಚಾರ ಮುಚ್ಚಿಹಾಕುವ ಪ್ರಯತ್ನ ಬೇಡ. ಆಂಬುಲೆನ್ಸ್ ಖರೀದಿಗೆ ಯಾವ ತೊಂದರೆ ಯಿದೆ. ವಾರ್ಡ್‍ಗೆ ಎರಡು ಆಂಬುಲೆನ್ಸ್ ಕೊಡು ತ್ತೇವೆ ಅಂತಾರೆ, ಯಾವಾಗ ಕೊಡ್ತಾರೆ? ಇಟಲಿ ಪರಿ ಸ್ಥಿತಿ ಬರದಂತೆ ಗಮನಹರಿಸಿ. ಅಂತ್ಯಕ್ರಿಯೆ ಮಾಡೋಕೂ ಕಷ್ಟವಾಗಲಿದೆ. ಮುತುವರ್ಜಿ ವಹಿಸಿ ಏನಾದರೂ ಮಾಡಿದ್ದೀರಾ? ದೊಡ್ಡ ಸಂಖ್ಯೆಯಲ್ಲಿ ಜನ ಸಾವಿಗೀಡಾಗುತ್ತಿದ್ದಾರೆ. ಪರಿಹಾರದ ಮಾತು ದೂರ, ನಾಲ್ಕು ಕಿಟ್ ಹಂಚಿದರೆ ಸಾಲದು. ಪಕ್ಷದ ಕಾರ್ಯಕರ್ತರಿಗೆ ಕೊಟ್ಟು ಸಮಸ್ಯೆ ಸೃಷ್ಟಿಸಿದರು ಎಂದು ಹೆಚ್.ಕೆ.ಪಾಟೀಲ್ ಆರೋಪಿಸಿದರು.

ಕಾರ್ಮಿಕರ ಬದುಕನ್ನು ಬೀದಿಗೆ ತಂದಿದ್ದೀರಿ. ಮುಂದೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಆಸ್ಪತ್ರೆ ಬೆಡ್ ಕೊರತೆ ಅಂತ ಹೇಳುತ್ತಿದ್ದಾರೆ. ಮನೆಯಲ್ಲೇ ಕ್ವಾರಂ ಟೈನ್ ಆಗಿ ಅಂತಾರೆ ಎಂದು ವಾಗ್ದಾಳಿ ನಡೆಸಿದರು.

ನಾವು ಮೊದಲೇ ಸಾಕಷ್ಟು ಸಲಹೆಗಳನ್ನು ನೀಡಿ ದ್ದೆವು. ಹಾಸ್ಟೆಲ್, ಹೊಟೇಲ್ ವಶಕ್ಕೆ ತೆಗೆದುಕೊಳ್ಳು ವಂತೆ ಹೇಳಿದ್ದೆವು. ಆದರೆ ಇಂದಿಗೂ ಏನೂ ಆಗಿಲ್ಲ, ಬೀದಿ ಬೀದಿಗಳಲ್ಲಿ ಜನ ಸಾಯುವ ಪರಿಸ್ಥಿತಿ ಎದು ರಾಗಲಿದೆ ಎಂದು ಆರೋಪಿಸಿದರು.

ಎಸ್.ಎಂ.ಫಾರ್ಮಾಸ್ಯೂಟಿಕಲ್ ಕಂಪನಿಯು ಸರಿಯಾದ ಗುಣಮಟ್ಟದ ಸ್ಯಾನಿಟೈಸರ್ ಕೊಡುತ್ತಿಲ್ಲ ಎಂಬ ದೂರು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಬಂದಿದೆ. ಇವರು ಸರಬರಾಜು ಮಾಡುವ ಸ್ಯಾನಿಟೈಸರ್ ಬಗ್ಗೆ ಸರ್ಕಾರಿ ಲ್ಯಾಬ್‍ನಲ್ಲಿ ನಕಾರಾತ್ಮಕ ರಿಪೋರ್ಟ್ ಬಂದಿದೆ ಎಂಬ ಆರೋಪವಿದೆ. ಇಂತಹ ಕಂಪನಿಗೆ ಈಗ ನಮ್ಮ ಸರ್ಕಾರ ಸ್ಯಾನಿ ಟೈಸರ್ ಕೊಡಲು ಆರ್ಡರ್ ಕೊಟ್ಟಿದೆ.ಈ ದೂರಿನ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲನೆ ಮಾಡಲಿದೆ ಎಂದು ಪಾಟೀಲ್ ಆರೋಪಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದ ರಾಮಯ್ಯ ಅವರು ಸರ್ಕಾರದ ಭ್ರಷ್ಟಾಚಾರ ಯಾವ ಪ್ರಮಾಣದಲ್ಲಿ ಆಗಿದೆ ಎಂದು ವಿವರಣೆ ನೀಡಿದ್ದಾರೆ. ಪಿಎಸಿ ಸಭೆಯಿಂದ ಹಲವು ಸೂಚನೆ ಕೊಟ್ಟಿದ್ದೇವೆ. ಎಲ್ಲಾ ದಾಖಲೆಗಳನ್ನು ನೀಡಬೇಕು ಎಂದು ಆರೋಗ್ಯ ಇಲಾಖೆಗೆ ಹೇಳಿದ್ದೇವೆ ಎಂದರು.

Translate »