ಮೈಸೂರು, ಮೇ 30(ಎಂಟಿವೈ)- ಮೈಸೂರು ತಾಲೂಕು ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವರಕೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ಗೆ ಭಾನುವಾರ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರೊಂದಿಗೆ ಸಮಾಲೋಚಿಸಿ, ಆತ್ಮಸ್ಥೈರ್ಯ ತುಂಬಿದರು.
ಕೊರೊನಾ ಸೋಂಕು ಗ್ರಾಮೀಣ ಪ್ರದೇಶ ದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆ ಯಲ್ಲಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿರುವ ಬಗ್ಗೆ ಅವಲೋಕಿಸುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ವರಕೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಆಡಳಿತ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ಗೆ ತೆರಳಿ ಪರಿಶೀಲಿಸಿದರು.
ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಪುರುಷ ಹಾಗೂ ಮಹಿಳಾ ಸೋಂಕಿತರು ಇರುವ ಕಟ್ಟಡದ ಮುಂದೆ ನಿಂತು ಸೋಂಕಿ ತರ ಕುಶಲೋಪರಿ ವಿಚಾರಿಸಿದರು. ಔಷಧ, ಊಟೋಪಚಾರ ಸೇರಿದಂತೆ ಇನ್ನಿತರÀ ಮಾಹಿತಿಯನ್ನು ಪಡೆದರು. ಕೊರೊನಾ ಸೋಂಕಿಗೆ ತುತ್ತಾಗಿರುವವರು ಭಯಪಡುವ ಅಗತ್ಯವಿಲ್ಲ. ವೈದ್ಯರು ಹೇಳಿದಂತೆ ಸರಿಯಾಗಿ ಔಷಧ ಸೇವಿಸಬೇಕು. ಭಯಪಡದೆ ಲವಲವಿಕೆ ಯಿಂದ ಇರುವ ಮೂಲಕ ಶೀಘ್ರವೇ ಗುಣ ಮುಖರಾಗುವಂತೆ ಆಶಿಸಿದರು.
ಪರಿಶೀಲನೆ ಬಳಿಕ ಸಚಿವ ಎಸ್.ಟಿ. ಸೋಮಶೇಖರ್ ಪತ್ರಕರ್ತರೊಂದಿಗೆ ಮಾತನಾಡಿ, ಕೋವಿಡ್ ಕೇರ್ ಸೆಂಟರ್ ನಿರ್ವಹಣೆ ಅಚ್ಚುಕಟ್ಟಾಗಿದೆ. ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕ ಬ್ಲಾಕ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಊಟದ ವ್ಯವಸ್ಥೆ, ಚಿಕಿತ್ಸೆ ಗುಣಮಟ್ಟ ಉತ್ತಮವಾಗಿರುವ ಬಗ್ಗೆ ಸೋಂಕಿತರೇ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಉದ್ದೇಶ ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಬೇಕೆಂಬುದೇ ಆಗಿದೆ. ಆ ನಿಟ್ಟಿನಲ್ಲಿ ಸೋಂಕಿತರ ಹಿತ ಕಾಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮನೋರಂಜನೆಗೂ ಆದÀ್ಯತೆ: ಕೋವಿಡ್ ಕೇರ್ ಸೆಂಟರ್‍ನಲ್ಲಿ ಅಗತ್ಯ ಔಷಧ ದಾಸ್ತಾನು, ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ನೋಡಲ್ ಅಧಿಕಾರಿಗಳು ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ. ಸೋಂಕಿತರ ಮನ ದಲ್ಲಿರುವ ದುಗುಡ ನಿವಾರಿಸಲು ಸಂಜೆ ವೇಳೆ ಸೋಂಕಿತರಿಗೆ ವಾಯುವಿಹಾರ ಮಾಡುವುದು, ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮನರಂಜನಾತ್ಮಕ ಕಾರ್ಯ ಕ್ರಮಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಿಂದ ಸೋಂಕಿತರು ಸದಾ ಚಟುವಟಿಕೆ ಯಿಂದ ಕೂಡಿದ್ದಾರೆ. ಸೋಂಕಿತ ಮಹಿಳೆ ಯರು ತಾವು ಖುಷಿಯಿಂದ ಇರುವು ದಾಗಿ ಹೇಳಿಕೊಂಡಿದ್ದಾರೆ ಎಂದರು.
ಈ ಕೇಂದ್ರದಲ್ಲಿ ವೈದ್ಯರಾಗಿ ಡಾ.ರಶ್ಮಿ, ಡಾ.ಮಂಜುನಾಥ್, ಶುಶ್ರೂಷಕರಾಗಿ ಮಂಜುಳಾ, ಎಸ್.ಸುಮಿತ್ರ, ಎಂ.ಎನ್. ಪವಿತ್ರ, ಅರುಣಾಕ್ಷಿ, ಸುನಂದ ಹಾಗೂ ಸತೀಶ್ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರು ತಹಶೀಲ್ದಾರ್ ರಕ್ಷಿತ್ ಮಾರ್ಗದರ್ಶನ ದಲ್ಲಿ ವರುಣಾ ನಾಡಕಚೇರಿಯ ಉಪತಹ ಶೀಲ್ದಾರ್ ನಂದಕಿಶೋರ್ ಉಸ್ತುವಾರಿ ಯಲ್ಲಿ ಈ ಕೋವಿಡ್ ಕೇರ್ ಸೆಂಟರ್‍ಗೆ ಸಾಯಿಪ್ರಕಾಶ್ ನೋಡಲ್ ಅಧಿಕಾರಿ ಯಾಗಿದ್ದಾರೆ. ಪರಿಶೀಲನೆ ವೇಳೆ ಸಂಸದ ಪ್ರತಾಪ್ ಸಿಂಹ, ಜಿ.ಪಂ ಸಿಇಓ ಎ.ಎಂ. ಯೋಗೀಶ್, ತಹಶೀಲ್ದಾರ್ ರಕ್ಷಿತ್ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.