ಮೈಸೂರು, ಮೇ 27- ಲಾಕ್‍ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿ ಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿರುವ ಸಹಾಯಧನ ಕ್ಕಾಗಿ ಮೈಸೂರು ಯುವ ಬಳಗ ಹಾಗೂ ನಗರಾಭಿವೃದ್ಧಿ ಸದಸ್ಯ ನವೀನ್‍ಕುಮಾರ್ ನೇತೃತ್ವದಲ್ಲಿ ನಗರದ ಸದ್ವಿದ್ಯಾ ವೃತ್ತದ ಆನ್‍ಲೈನ್ ಕೇಂದ್ರದಲ್ಲಿ ಹಲವಾರು ಆಟೋ ಹಾಗೂ ಕ್ಯಾಬ್ ಚಾಲಕರಿಂದ ಸಾಮೂಹಿಕ ವಾಗಿ ಆನ್‍ಲೈನ್ ಅರ್ಜಿ ಸಲ್ಲಿಸಲಾಯಿತು.
ಈ ವೇಳೆ ನಗರಾಭಿವೃದ್ಧಿ ಸದಸ್ಯ ನವೀನ್ ಕುಮಾರ್ ಮಾತನಾಡಿ, ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಘೋಷಿ ಸಿರುವ ಲಾಕ್‍ಡೌನ್‍ನಿಂದಾಗಿ ರಾಜ್ಯದ ಲಕ್ಷಾಂತರ ಕಾರ್ಮಿಕರು, ಚಾಲಕರು ಸೇರಿ ದಂತೆ ಶ್ರಮಿಕ ವರ್ಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಮನಗಂಡು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲಾ ವರ್ಗಕ್ಕೆ ಆರ್ಥಿಕ ಸಹಾಯದ ಪ್ಯಾಕೇಜ್ ಘೋಷಣೆ ಮಾಡಿ ದುಡಿಯುವ ವರ್ಗದ ಪರವಾಗಿ ನಿಂತಿದ್ದಾರೆ ಎಂದರು.
ಸರ್ಕಾರ ಘೋಷಿಸಿರುವ ಸಹಾಯ ಧನದ ನೈಜ ಫಲಾನುಭವಿಗಳಿಗೆ ಈ ಸೌಲಭ್ಯ ದೊರಕಿ ಅಲ್ಪ ಮಟ್ಟದ ಸಹಾಯ ವಾಗಲಿ ಎಂಬ ಉದ್ದೇಶದಿಂದ ಚಾಲಕ ರನ್ನು ಒಗ್ಗೂಡಿಸಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದ ಎಲ್ಲಾ ಶ್ರಮಿಕ ವರ್ಗ ಇದರ ಲಾಭ ಪಡೆಯುವಂತೆ ಅವರು ಮನವಿ ಮಾಡಿದರು. ಈ ವೇಳೆ ಹಲವಾರು ಚಾಲಕರು ತಮ್ಮ ದಾಖಲೆ ಯೊಂದಿಗೆ ಅರ್ಜಿ ಸಲ್ಲಿಸಿದರು.