ಮೈಸೂರಲ್ಲಿ `ಉದ್ಯಮಿಯಾಗು-ಉದ್ಯೋಗ ನೀಡು’ ಕಾರ್ಯಾಗಾರ: ಉದ್ದಿಮೆ ಆರಂಭಿಸಲು ಛಲವಿದ್ದರೆ ಸಾಕು…!
ಮೈಸೂರು

ಮೈಸೂರಲ್ಲಿ `ಉದ್ಯಮಿಯಾಗು-ಉದ್ಯೋಗ ನೀಡು’ ಕಾರ್ಯಾಗಾರ: ಉದ್ದಿಮೆ ಆರಂಭಿಸಲು ಛಲವಿದ್ದರೆ ಸಾಕು…!

April 29, 2022

ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ ಆರ್. ನಿರಾಣ ವಿಶ್ವಾಸ
ಕಾರ್ಯಾಗಾರದಲ್ಲಿ ಸಾವಿರಕ್ಕೂ ಹೆಚ್ಚು ಭಾವಿ ಉದ್ಯಮಿಗಳು, ವಿದ್ಯಾರ್ಥಿಗಳು ಭಾಗಿ

ಮೈಸೂರಿನ ಕರಾಮುವಿ ಆವರಣದಲ್ಲಿ ಭಾವಿ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣ ಸಂವಾದ ನಡೆಸಿದರು. ಚಿತ್ರದಲ್ಲಿ ಸಚಿವ
ಎಂಟಿಬಿ ನಾಗರಾಜ್, ಶಾಸಕ ಎಲ್.ನಾಗೇಂದ್ರ ಇನ್ನಿತರರನ್ನು ಕಾಣಬಹುದು.

ಮೈಸೂರು,ಏ.೨೮(ಆರ್‌ಕೆಬಿ)-ಉದ್ದಿಮೆ ಮಾಡಲು ಹಣವೇ ಮುಖ್ಯವಲ್ಲ. ಛಲ ಒಂದಿದ್ದರೆ ಏನು ಬೇಕಾ ದರೂ ಸಾಧಿಸಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ ಆರ್. ನಿರಾಣ ಯುವ ಜನರಲ್ಲಿ ಉತ್ಸಾಹ ತುಂಬಿದ್ದಾರೆ.

ಕೈಗಾರಿಕಾ ಮತ್ತು ವಾಣ ಜ್ಯ ಇಲಾಖೆ, ಕರ್ನಾ ಟಕ ಉದ್ಯೋಗ ಮಿತ್ರ ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಘಟಿಕೋತ್ಸವ ಭವನ ದಲ್ಲಿ ಭಾವಿ ಉದ್ಯಮಿಗಳು ಹಾಗೂ ವಿದ್ಯಾರ್ಥಿ ಗಳಿಗಾಗಿ ಆಯೋಜಿಸಿದ್ದ `ಉದ್ಯಮಿಯಾಗು -ಉದ್ಯೋಗ ನೀಡು’ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಸರ್ಕಾರಿ ಕೆಲಸವೇ ಬೇಕು ಎಂಬುದನ್ನು ಬಿಡಿ, ಸ್ವಂತ ಉದ್ದಿಮೆ ಪ್ರಾರಂಭಿಸುವತ್ತ ಗಮನ ನೀಡಿ ಎಂದು ಭಾವಿ ಉದ್ಯಮಿಗಳಿಗೆ ಕರೆ ನೀಡಿದ ಅವರು, ನನ್ನ ಬಳಿ ಜ್ಞಾನ ಇದೆ. ಆದರೆ ಹಣ ಇಲ್ಲ ಎನ್ನುವವರು ಸ್ವಯಂ ಉದ್ಯಮಿಯಾಗಲು ಸಾಧ್ಯವಾಗುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ರೂಪಿಸಿದ್ದಾರೆ ಎಂದರು.

ಕೈಗಾರಿಕೆಗಳನ್ನು ಆರಂಭಿಸಬೇಕೆAಬ ಮಹ ದಾಸೆ ಹೊಂದಿರುವವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶೇ.೪೦ರಷ್ಟು ಸಬ್ಸಿಡಿ, ಜವಳಿ ಉದ್ಯಮ ಕೈಗೊಳ್ಳುವವರಿಗೆ ಶೇ.೪೦ ಸಬ್ಸಿಡಿ, ಶೇ.೬೦ರಷ್ಟು ಬ್ಯಾಂಕ್ ಸಾಲ ಸಿಗುವ ವ್ಯವಸ್ಥೆ ಮಾಡಿದ್ದಾರೆ. ಎಥೆನಾಲ್ ಯೋಜನೆಗೆ ಶೇ.೯೫ ರಷ್ಟು ಸಾಲ ಕೊಟ್ಟರೆ, ೫ ವರ್ಷಗಳವರೆಗೆ ಸಬ್ಸಿಡಿ ಇದೆ. ಭೂಮಿ ಇದ್ದರೆ ಸಾಕು. ಎಥೆನಾಲ್ ಕಾರ್ಖಾನೆ ಮಾಡಬಹುದು. ಇದಕ್ಕೆ ಸಾಕಷ್ಟು ಮಾರ್ಗದರ್ಶನವನ್ನೂ ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ಹೇಳಿದರು.

ಯಾರಿಗೆ ಯಾವ ವಲಯದ ಬಗ್ಗೆ ಆಸಕ್ತಿ ಇದೆಯೋ ಅಂಥವರು ಕನಿಷ್ಠ ೩೦ ಮಂದಿ ನೋಂದಣ ಮಾಡಿಕೊಂಡು ಬಂದರೆ ಅವರಿಗೆ ತರಬೇತಿ ನೀಡಿ, ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಲು ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ವನ್ನು ಸರ್ಕಾರ ನೀಡಲಿದೆ ಎಂದರು.

ಕೈಗಾರಿಕೋದ್ಯಮಿಯಾಗಲು ಆಸಕ್ತಿ ಹೊಂದಿ ರುವವರು ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಭೇಟಿ ನೀಡಿ, ಅಧ್ಯ ಯನ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳಿ. ನಾನೂ ಕೈಗಾರಿಕೋದ್ಯಮಿ ಆಗಬೇಕು, ಒಂದಷ್ಟು ಜನರಿಗೆ ನಾವೇ ಏಕೆ ಉದ್ಯೋಗ ನೀಡಬಾರದು ಎಂಬುದನ್ನು ನೀವೇ ತೀರ್ಮಾನಿಸಿ, ದೂರದೃಷ್ಟಿ ಇಟ್ಟು ಕೊಂಡು ಕೆಲಸ ಮಾಡಿದರೆ ಯಶಸ್ವಿ ಉದ್ಯಮಿಯಾಗಿ ಹೊರÀ ಹೊಮ್ಮಲು ಸಾಧ್ಯವಿದೆ ಎಂದು ನಿರಾಣ ತಿಳಿಸಿದರು.

ಈ ಕಾರ್ಯಾಗಾರದಲ್ಲಿ ಭಾಗವಹಿಸಿರುವ ೨ ಸಾವಿರ ಜನರ ಪೈಕಿ ಶೇ.೨ರಷ್ಟು ಮಂದಿ ಉದ್ಯಮಿಗಳಾದರೆ ಉಳಿದ ಶೇ.೯೮ರಷ್ಟು ಮಂದಿಗೆ ನೀವೇ ಕೆಲಸ ನೀಡಬಹುದು. ಇಂತಹ ಕಾರ್ಯಾಗಾರಗಳನ್ನು ಮಾಡಿ ಅಷ್ಟಕ್ಕೇ ಕೈ ಬಿಡುವುದಿಲ್ಲ. ಯಾರಿಗೆ ಯಾವ ವಲಯದಲ್ಲಿ ಆಸಕ್ತಿ ಇದೆಯೋ ಅಂತಹ ವಲಯದಲ್ಲಿ ಡಿಪಿಆರ್ ಮಾಡಿ, ಬ್ಯಾಂಕ್ ಸಾಲ ಕೊಡಿಸಿ, ಕಾರ್ಖಾನೆ ಆರಂಭಿಸಲು ನೆರವಾಗುವುದಾಗಿ ತಿಳಿಸಿದರು.

ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಗಳ ಸಚಿವ ಎಂಟಿಬಿ ನಾಗರಾಜು ಮಾತನಾಡಿ, ಇನ್ಫೋ ಸಿಸ್‌ನ ಸುಧಾಮೂರ್ತಿ, ನಾರಾಯಣಮೂರ್ತಿ ಅವರು ಶೂನ್ಯ ಬಂಡವಾಳದಿAದ ಆರಂಭಿಸಿದ ಕಂಪನಿ ಇಂದು ವಿಶ್ವಾದ್ಯಂತ ಶಾಖೆಗಳನ್ನು ವಿಸ್ತರಿಸಿದೆ. ಸಚಿವ ಮುರುಗೇಶ್ ನಿರಾಣ ಅವರೂ ಸಹ ಸಣ್ಣ ಉದ್ಯಮವಾಗಿ ಸಕ್ಕರೆ ಕಾರ್ಖಾನೆ ಆರಂಭಿಸಿ, ಇಂದು ಅವರು ಬೃಹತ್ ಉದ್ಯಮಿಯಾಗಿ ಸಹಸ್ರಾರು ಮಂದಿಗೆ ಉದ್ಯೋಗ ನೀಡಿದ್ದಾರೆ ಎಂದರು.

ನಾನೂ ಸಹ ಸಣ್ಣ ಉದ್ಯಮಿ. ೧೯೬೮ರಲ್ಲಿ ಕಾರ್ಖಾನೆಯೊಂದರಲ್ಲಿ ೨ ವರ್ಷ ಕೆಲಸ ಮಾಡಿ, ನಂತರ ಸಣ್ಣ ಇಟ್ಟಿಗೆ ಕಾರ್ಖಾನೆ ಮಾಡಿ, ೫೦೦ ಜನರಿಗೆ ಉದ್ಯೋಗ ನೀಡಿ, ಈ ರಾಜ್ಯದಲ್ಲಿಯೇ ದೊಡ್ಡ ಇಟ್ಟಿಗೆ ಕಾರ್ಖಾನೆ ಮಾಡಿದ್ದೇನೆ. ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದೇನೆ ಎಂದು ಸಚಿವರು ತಮ್ಮನ್ನೇ ನಿದರ್ಶನ ನೀಡಿದರು. ಪ್ರತಿಯೊಬ್ಬರಿಗೂ ಗುರಿ ಇರಬೇಕು. ಆ ಗುರಿ ಮುಟ್ಟಲು ಸಾಧನೆ ಮಾಡಿದರೆ ಅದಕ್ಕೆ ಖಂಡಿತ ಪ್ರತಿಫಲ ಸಿಕ್ಕೇ ಸಿಗುತ್ತದೆ. ಆದರೆ ಗುರಿಯ ಜೊತೆಗೆ ಶ್ರದ್ಧೆ ಮತ್ತು ಶ್ರಮವೂ ಇರಬೇಕು ಎಂದು ಸಲಹೆ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಸ್ತಿçà ಸ್ವಸಹಾಯ ಸಂಘಗಳು ಸಹ ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಿ, ಯಶಸ್ವಿ ಉದ್ದಿಮೆಗಳನ್ನು ನಡೆಸುತ್ತಿದ್ದಾರೆ. ಸಣ್ಣ ಪ್ರಮಾಣದಲ್ಲಿ ಕೈಗಾರಿಕೆಯನ್ನು ಮಾಡಿ ನೂರಾರು ಜನರಿಗೆ ಉದ್ಯೋಗ ನೀಡಬಹುದು. ಸಣ್ಣ ಕೈಗಾರಿಕೆಗಳಿಂದ ಜನರ ಜೀವನ ಭದ್ರವಾಗುತ್ತದೆ. ಇದಕ್ಕೆ ಸರ್ಕಾರದ ಪ್ರೋತ್ಸಾಹವೂ ಇದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸಾವಿರಕ್ಕೂ ಹೆಚ್ಚು ಆಸಕ್ತ ಭಾವಿ ಉದ್ಯಮಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಮೈಸೂರು, ಮಂಡ್ಯ, ಚಾ.ನಗರ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ನೂರಾರು ಯುವ ಉದ್ಯಮಿಗಳು ಆನ್‌ಲೈನ್ ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಕಾಂಪೋಸ್ಟ್ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣ Ãಶ್, ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಎನ್.ಶಿವಲಿಂಗಯ್ಯ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್.ಆರ್.ಕೃಷ್ಣೇಗೌಡ, ಕೈಗಾರಿಕೆ ಮತ್ತು ವಾಣ ಜ್ಯ ಇಲಾಖೆ ಕೈಗಾರಿಕಾಭಿವೃದ್ಧಿ ಆಯುಕ್ತ ಗುಂಜನ್ ಕೃಷ್ಣ, ನಿರ್ದೇಶಕ (ಎಂಎಸ್‌ಎAಇ) ಅರ್.ವಿನೋತ್ ಪ್ರಿಯಾ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್, ಕೆಐಎಡಿಬಿ ಸಿಇಓ ಡಾ.ಎನ್.ಶಿವಶಂಕರ್, ಕೈಗಾರಿಕೆ ಮತ್ತು ವಾಣ ಜ್ಯ ಇಲಾಖೆ ಅಪರ ನಿರ್ದೇಶಕ ಎಚ್.ಎಂ.ಶ್ರೀನಿವಾಸ್, ಜಿಲ್ಲಾ ಕೈಗಾರಿಕಾ ಕೇಂದ್ರದ ಅಪರ ನಿರ್ದೇಶಕ ಸಿ.ಟಿ.ಮುದ್ದುಕುಮಾರ್ ಇನ್ನಿತರರು ಉಪಸ್ಥಿತರಿದ್ದರು. ತಾಂತ್ರಿಕ ಕಾರ್ಯಾ ಗಾರದಲ್ಲಿ `ಉದ್ಯಮಿ-ಭಯವಿಲ್ಲದೆ ಭವಿಷ್ಯ’ ಕುರಿತು ಧಾರವಾಡದ ಕನೆಕ್ಟ್ ನಿರ್ದೇಶಕ ಮಾನವ ಮನಸ್ಸು ತರಬೇತುದಾರ ಮಹೇಶ್ ಮಸಲ್, `ವಲಯದ ಅವಕಾಶಗಳು ಆಹಾರ ಸಂಸ್ಕರಣೆ’ ಕುರಿತು ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ಯೋಜನೆಯ ತರಬೇತುದಾರ ಎಸ್.ವಿ.ರಾಘವೇಂದ್ರ, `ಪ್ರೇರಣೆ ಮತ್ತು ವ್ಯಕ್ತಿತ್ವ ಅಭಿವೃದ್ಧಿ’ ಕುರಿತು ಮೈಸೂರಿನ ಸಕ್ಸೆಸ್ ಕೋಚ್ ಆರ್.ಎ.ಚೇತನ್‌ರಾಮ್, `ಐಟಿ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪರಿಚಯ’ ಕುರಿತು ಭಾರತ ಸರ್ಕಾರದ ನಾವೀನ್ಯತೆಯ ರಾಷ್ಟಿçÃಯ ತಜ್ಞ ಸಲಹಾ ಸಮಿತಿಯ ಸಿಇಓ ಸುಹಾಸ್ ಗೋಪಿನಾಥ್ ಮಾಹಿತಿ ನೀಡಿದರು.

 

Translate »