ಮೈಸೂರು ಸಮಗ್ರ ಅಭಿವೃದ್ಧಿ ಭರವಸೆ
ಮೈಸೂರು

ಮೈಸೂರು ಸಮಗ್ರ ಅಭಿವೃದ್ಧಿ ಭರವಸೆ

April 29, 2022

ಪಾಲಿಕೆಯಲ್ಲಿ 6.11 ಕೋಟಿ ಉಳಿತಾಯ ಬಜೆಟ್

ಹಣಕಾಸು-ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ
ಎಂ.ಎಸ್.ಶೋಭಾ ಬಜೆಟ್ ಮಂಡಿಸಿದರು.
ಮೈಸೂರು,ಏ.೨೮(ಆರ್‌ಕೆ)-ಮೈಸೂರು ಸಮಗ್ರ ಅಭಿವೃದ್ಧಿ ಭರವಸೆಯೊಂದಿಗೆ ಮೈಸೂರು ಮಹಾ ನಗರ ಪಾಲಿಕೆಯಲ್ಲಿ ೨೦೨೨-೨೩ನೇ ಸಾಲಿಗೆ ೬.೧೧ ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ ಯಾಗಿದೆ. ಪಾಲಿಕೆ ಪ್ರಧಾನ ಕಚೇರಿಯ ಕೌನ್ಸಿಲ್ ಸಭಾಂಗಣದಲ್ಲಿ ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ತೆರಿಗೆ ನಿರ್ಧರಣಾ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಎಸ್. ಶೋಭಾ ಅವರು ಮಂಡಿಸಿದ ಆಯವ್ಯಯಕ್ಕೆ ಸಭೆಯು ಅನುಮೋದನೆ ನೀಡಿತು.

ಇದೇ ಮೊದಲು ಒಂದೇ ಅವಧಿಯಲ್ಲಿ ಹಣ ಕಾಸು ಸ್ಥಾಯಿ ಸಮಿತಿ ಅಧ್ಯಕ್ಷರು ಎರಡು ಬಾರಿ ಬಜೆಟ್ ಮಂಡಿಸಿದ ದಾಖಲೆಗೆ ಶೋಭಾ ಪಾತ್ರ ರಾಗಿದ್ದಾರೆ. ಇದರೊಂದಿಗೆ ಮೈಸೂರು ನಗರ ಪಾಲಿಕೆ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ನಾಂದಿಯಾಗಿದೆ. ಅಭಿವೃದ್ಧಿ, ತಂತ್ರಜ್ಞಾನ ಬಳಕೆ, ಹಸಿರೀಕರಣಕ್ಕೆ ಒತ್ತು ನೀಡಿ ಮಂಡಿಸಿರುವ ೧,೦೦೦ ಕೋಟಿ ಗಾತ್ರದ ಪ್ರಾಯೋಗಿಕ ಆಯವ್ಯಯಕ್ಕೆ ಪಾಲಿಕೆಯಲ್ಲಿನ ಎಲ್ಲಾ ಪಕ್ಷಗಳ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಆರಂಭ ಶಿಲ್ಕು ೪೦,೮೮೮.೯೨ ಲಕ್ಷ ರೂ. ಜಮೆ ೫೯,೦೬೭.೪೩ ಲಕ್ಷ ರೂ. ಸೇರಿ ಒಟ್ಟು ೯೯,೯೫೬.೩೫ ಲಕ್ಷ ರೂ.ಗಳು ಸಂದಾಯ ವಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ವಿವಿಧ ಬಾಬತ್ತಿಗೆ ೯೯,೩೪೫. ೩೪ ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಲಾಗಿದೆ. ಅದರಂತೆ ೬೧೧.೦೧ ಲಕ್ಷ ರೂ.ಗಳ ಉಳಿಕೆ ಬಜೆಟ್ ಪ್ರಸಕ್ತ ಸಾಲಿನಲ್ಲಿ ಮಂಡಿತವಾಗಿದೆ. ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸಿ, ಮೈಸೂರು ನಗರವನ್ನು ಸುವ್ಯವಸ್ಥಿತವಾಗಿ ನಿರ್ವಹಿಸಲು ಹಣಕಾಸಿನ ಅಗತ್ಯವಿರುವುದರಿಂದ ತೆರಿಗೆ, ವಿವಿಧ ಶುಲ್ಕ ಸಂಗ್ರಹ ಸೇರಿದಂತೆ ಹಲವು ಮೂಲಗಳಿಂದ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ನಗರ ಪಾಲಿಕೆ ತಯಾರಿ ನಡೆಸಿದೆ.
ಆಸ್ತಿ ತೆರಿಗೆ :ಆಸ್ತಿ ತೆರಿಗೆ, ಖಾತಾ ವರ್ಗಾವಣಾ ಶುಲ್ಕ ಹಾಗೂ ಖಾತಾ ಪ್ರತಿಗಳ ಶುಲ್ಕ ಸೇರಿದಂತೆ ವಿವಿಧ ಬಾಬ್ತಿನಲ್ಲಿ ಕಂದಾಯ ಶಾಖೆಯಿಂದ ಪ್ರಸಕ್ತ ಸಾಲಿನಲ್ಲಿ ೧೬,೮೨೦ ಲಕ್ಷ ರೂ.ಗಳು ಸಂಗ್ರಹವಾಗಬಹುದೆAದು ನಿರೀಕ್ಷಿಸಲಾಗಿದೆ.

ನೀರಿನ ತೆರಿಗೆ : ನೀರಿನ ತೆರಿಗೆ ಹಾಗೂ ಒಳಚರಂಡಿ ನಿರ್ವಹಣಾ ಶುಲ್ಕವಾಗಿ ಈ ವರ್ಷ ೬,೩೩೫ ಲಕ್ಷ ರೂ. ವಸೂಲಿ ಮಾಡುವ ಗುರಿ ಹೊಂದಿದ್ದು, ಕಳೆದ ಸಾಲಿನಲ್ಲಿ ೬,೭೪೬.೫೧ ಲಕ್ಷ ರೂ. ಕ್ರೋಢೀಕರಿಸಲಾಗಿತ್ತು.

ನಗರ ಯೋಜನೆ ಶಾಖೆಯಿಂದ: ಕಟ್ಟಡ ಪರವಾನಗಿ ಶುಲ್ಕ, ನೆಲ ಬಾಡಿಗೆ, ರಸ್ತೆ ಅಗೆತ, ನೀರಿನ ಸಂಪರ್ಕ, ಕಟ್ಟಡ ಪೂರ್ಣಗೊಂಡ ವರದಿ (ಸಿಆರ್), ದಂಡ, ಒಳಚರಂಡಿ ಶುಲ್ಕ ಸೇರಿದಂತೆ ನಗರ ಯೋಜನೆ ಸಂಬAಧಿಸಿದ ಇತರ ಮೂಲಗಳಿಂದ ಒಟ್ಟು ೯೯೦.೫೦ ಲಕ್ಷ ರೂ. ಉದ್ದಿಮೆ ಪರವಾನಗಿಯಿಂದ ೧೨೦೦ ಲಕ್ಷ ರೂ. ಪಾಲಿಕೆಯ ವಾಣ ಜ್ಯ ಸಂಕೀರ್ಣಗಳು, ಮಾರುಕಟ್ಟೆ ಬಾಡಿಗೆ ಹಾಗೂ ಗರುಡ ಮಾಲ್ ನೆಲಗುತ್ತಿಗೆ ಬಾಡಿಗೆಯಿಂದ ೫೨೧.೯೩ ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.

ಸರ್ಕಾರದ ಅನುದಾನ: ರಾಜ್ಯ ಹಣಕಾಸು ಆಯೋಗದ ಮುಕ್ತ ನಿಧಿಯಿಂದ ೧೯೮೮ ಲಕ್ಷ ರೂ., ಬೀದಿ ದೀಪ, ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ಲುಗಳಿಗಾಗಿ ಪ್ರಸಕ್ತ ಸಾಲಿನಲ್ಲಿ ೯೧೮೮ ಲಕ್ಷ ರೂ., ಅಧಿಕಾರಿ, ಸಿಬ್ಬಂದಿ ವೇತನಕ್ಕೆ ೭೪೧೧ ಲಕ್ಷ ರೂ., ೧೫ನೇ ಹಣಕಾಸು ಆಯೋಗದ ಅನುದಾನದಿಂದ ೫೧೫೫ ಲಕ್ಷ ರೂ., ಸಂಸದರು, ಶಾಸಕರುಗಳ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಿಂದ ೧೨೫ ಲಕ್ಷ ರೂ., ಮುಖ್ಯಮಂತ್ರಿಗಳ ವಿಶೇಷ ಅನುದಾನ ೫೦೦ ಲಕ್ಷ ರೂ. ಅನುದಾನ ಬರಬಹುದೆಂದು ನಿರೀಕ್ಷಿಸಲಾಗಿದೆ. ಮೈಸೂರು ನಗರವು ದಿನೇ ದಿನೆ ಪ್ರವಾಸಿಗರನ್ನು ಸೆಳೆಯುತ್ತಿರುವು ದಲ್ಲದೆ, ಜನಸಂಖ್ಯೆಯೂ ಹೆಚ್ಚುತ್ತಿರುವುದರಿಂದ ನಾಗರಿಕರಿಗೆ ಮೂಲಸೌಲಭ್ಯ ಒದಗಿಸಲು ವಿವಿಧ ಮೂಲಗಳಿಂದ ಬರುವ ಸಂಪನ್ಮೂಲದಲ್ಲಿ ೯೯,೩೪೫.೩೪ ಲಕ್ಷ ರೂ. ವೆಚ್ಚವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ.

ರಸ್ತೆ, ವೃತ್ತಗಳ ಅಭಿವೃದ್ಧಿ: ಶಾಂತವೇರಿ ಗೋಪಾಲಗೌಡ ಸರ್ಕಲ್‌ನಿಂದ ಡೈರಿ ವೃತ್ತದವರೆಗೆ ಕಿರಿದಾಗಿರುವ ರಸ್ತೆ, ಥಿಯೋಬಾಲ್ಡ್ ರಸ್ತೆ, ಕೃಷ್ಣರಾಜ ಬುಲೇವಾರ್ಡ್ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೊಳಿಸಲು ಉದ್ದೇಶಿಸಿ ಈ ಸಾಲಿನ ಆಯವ್ಯಯ ದಲ್ಲಿ ೫ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಉಪಮೇಯರ್ ಅನ್ವರ್ ಬೇಗ್, ಪಾಲಿಕೆ ಆಯುಕ್ತ ಜಿ. ಲಕ್ಷಿö್ಮಕಾಂತರೆಡ್ಡಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರೂ ಸೇರಿದಂತೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಬಜೆಟ್ ಮೇಲೆ ಸುದೀರ್ಘ ಚರ್ಚೆ ನಡೆಸಿ ಯೋಜನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವಂತೆ ಸಲಹೆ ನೀಡಿದರು.

ಬಜೆಟ್‌ನಲ್ಲಿ ಬಂಪರ್ ಘೋಷಣೆ
ಯೋಗ ಮಂಟಪ, ನಗರ ಪಾಲಿಕೆ ಭವನ, ಅಂತಾರಾಷ್ಟಿçÃಯ ಮಟ್ಟದ ಸ್ಕೇಟಿಂಗ್ ರಿಂಗ್, ಮಿಯಾವಾಕಿ ಪಾರ್ಕ್, ಎಲೆಕ್ಟಿçಕ್ ಆಟೋ ಟಿಪ್ಪರ್
ಮೈಸೂರು: ಪಾರಂಪರಿಕ ನಗರಿಯ ಸಮಗ್ರ ಅಭಿವೃದ್ಧಿಗಾಗಿ ಪಾಲಿಕೆ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳ ಪ್ರಸ್ತಾಪದೊಂದಿಗೆ ಅನುದಾನ ಮೀಸಲಿರಿಸಲಾಗಿದೆ.
ಮಹಾನಗರ ಪಾಲಿಕೆ ಭವನ: ನಗರ ಪಾಲಿಕೆಯಿಂದ ಕಾರ್ಯಕ್ರಮ ಆಯೋಜಿಸಲು ಫಂಕ್ಷನ್ ಹಾಲ್‌ಗಳನ್ನು ಬಾಡಿಗೆಗೆ ಪಡೆಯುವುದನ್ನು ತಪ್ಪಿಸಲು ನಗರದ ಹೃದಯ ಭಾಗದಲ್ಲಿ ಸುಸಜ್ಜಿತ `ಮಹಾನಗರ ಪಾಲಿಕೆ ಭವನ’ ನಿರ್ಮಿಸಲು ಬಜೆಟ್‌ನಲ್ಲಿ ೫ ಕೋಟಿ ರೂ. ಕಾಯ್ದಿರಿಸಲಾಗಿದೆ.

ಯೋಗ ಮಂಟಪ: ವರನಟ ಡಾ.ರಾಜಕುಮಾರ್ ೯೩ನೇ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿರುವ ಡಾ.ರಾಜಕುಮಾರ್ ಉದ್ಯಾನವನದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ೩೦ ಲಕ್ಷ ರೂ. ವೆಚ್ಚದ ಯೋಗ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದೆ.

ಸ್ಕೇಟಿಂಗ್ ರಿಂಗ್: ಯುವ ಜನಾಂಗಕ್ಕೆ ಕ್ರೀಡೆಯನ್ನು ಪ್ರೋತ್ಸಾಹಿಸಲು ವಿಜಯನಗರ ೨ನೇ ಹಂತದಲ್ಲಿ ೧೬೦೦ ಚದರ ಮೀಟರ್ ಪ್ರದೇಶದ ಅಂತಾರಾಷ್ಟಿçÃಯ ಮಟ್ಟದ `ಸ್ಕೇಟಿಂಗ್ ರಿಂಗ್’ ನಿರ್ಮಿಸಲು ೩.೫ ಕೋಟಿ ರೂ. ಮೀಸಲಿರಿಸಲಾಗಿದೆ.

ಮಿಯಾವಾಕಿ ಪಾರ್ಕ್: ೨ ಉದ್ಯಾನವನಗಳಲ್ಲಿ ಸ್ಥಳೀಯ ಸಸ್ಯ ಪ್ರಬೇಧಗಳನ್ನು ಬೆಳೆಸಿ, ಕಿರು ಅರಣ ್ಯÃಕರಣದ ಮಾದರಿ ಯಲ್ಲಿ ಮಿಯಾವಾಕಿ ಪಾರ್ಕ್ ಮಾಡಲು ದ್ದೇಶಿಸಿ ೩ ಕೋಟಿ ರೂ. ಕಾಯ್ದಿರಿಸಲಾಗಿದೆ. ವಾರ್ಡ್ಗೊಂದು ಉದ್ಯಾನವನ್ನು ಸೋಷಿ ಯಲ್ ಫಾರೆಸ್ಟ್ ಮಾಡುವುದು, ೧೫೦ ಉದ್ಯಾನವನಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ.
ಇ-ಆಫೀಸ್: ಪಾಲಿಕೆ ಆಡಳಿತ, ಕಡತಗಳ ತ್ವರಿತ ವಿಲೇವಾರಿಗಾಗಿ ಇ-ಆಫೀಸ್ ಸಾಫ್ಟ್ ವೇರ್ ತಂತ್ರಾAಶ ಅಳವಡಿಸಿ ಪೇಪರ್ ರಹಿತವಾಗಿ ಕಾರ್ಯ ನಿರ್ವ ಹಿಸಲು ನಿರ್ಧರಿಸಲಾಗಿದೆ. ಪಾಲಿಕೆಯ ಎಲ್ಲಾ ವಲಯ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ೧೦೦೦ ಲಕ್ಷ ರೂ. ಮೀಸಲಿರಿಸಲಾಗಿದೆ.

ನೀರಿನ ತೆರಿಗೆಗೆ ಸಾಫ್ಟ್ವೇರ್: ಕುಡಿಯುವ ನೀರಿನ ತೆರಿಗೆ ಸಂಗ್ರಹಿಸಲು ರೆವಿನ್ಯೂ ಮ್ಯಾನೇಜ್‌ಮೆಂಟ್ ಸಾಫ್ಟ್ವೇರ್ ಪದ್ಧತಿ ಅಳವಡಿಸಿ, ಬಿಲ್ಲಿಂಗ್ ವ್ಯವಸ್ಥೆಗೆ ಖರ್ಚಾಗುತ್ತಿದ್ದ ೮೦ ಲಕ್ಷ ರೂ. ಹಣ ಉಳಿಸಲು ಯೋಜನೆ ರೂಪಿಸಲಾಗಿದೆ. ಇಡಿಸಿ ಮೆಷಿನ್ ಮೂಲಕ ನೀರು ಬಳಕೆ ದಾರರ ಮನೆ ಬಾಗಿಲಲ್ಲೇ ಹಣ ಪಾವತಿಸಿ ಕೊಂಡು, ರಶೀದಿ ನೀಡಬಹುದು.

ಇ-ಆಟೋ ಟಿಪ್ಪರ್: ವಾಯುಮಾಲಿನ್ಯ ತಡೆಗಟ್ಟಿ, ವೆಚ್ಚ ತಗ್ಗಿಸುವ ಸಲುವಾಗಿ ಇ-ತ್ಯಾಜ್ಯ ಸಂಗ್ರಹಣೆಗಾಗಿ ಎಲೆಕ್ಟಾçನಿಕ್ ಆಟೋ ಟಿಪ್ಪರ್‌ಗಳನ್ನು ಖರೀದಿಸಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.

ಕಟ್ಟಡ ತ್ಯಾಜ್ಯ ಘಟಕ: ಮೈಸೂರಲ್ಲಿ ನಿತ್ಯ ಉತ್ಪತ್ತಿಯಾಗುತ್ತಿರುವ ೧೦೦೦ ಟಿಡಿಪಿ ಕಟ್ಟಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇ ವಾರಿ ಮಾಡಲು ಹಂಚ್ಯಾ-ಸಾತಗಳ್ಳಿಯ ೯.೦೫ ಎಕರೆ ಪ್ರದೇಶದಲ್ಲಿ ೧೦೦ ಟನ್ ಸಾಮರ್ಥ್ಯದ ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಪಾಲಿಕೆ ಮುಂದಾಗಿದೆ. ಸೀವೇಜ್ ಫಾರಂನಲ್ಲಿ ಸಂಗ್ರಹವಾಗಿರುವ ೩.೦೮ ಲಕ್ಷ ಟನ್ ಘನ ತ್ಯಾಜ್ಯವನ್ನು ಬಯೋ ಮೈನಿಂಗ್/ರೆಮಿಡಿಯೇಷನ್ ಪದ್ಧತಿ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ.

ಪೆಟ್ರೋಲ್ ಬಂಕ್: ಸ್ಥಳಾಭಾವವಿರುವ ಕಾರಣ ಪಾಲಿಕೆ ಕಚೇರಿ ಆವರಣದಲ್ಲಿರುವ ಪೆಟ್ರೋಲ್ ಬಂಕ್ ತೆರವುಗೊಳಿಸಿ ರಾಯನ ಕೆರೆ, ಕೆಸರೆ ಮತ್ತು ಸೀವೇಜ್ ಫಾರಂನಲ್ಲಿ ಒಂದೊAದು ಪೆಟ್ರೋಲ್ ಬಂಕ್ ಮತ್ತು ವಾಹನ ರಿಪೇರಿಗೆ ಸರ್ವೀಸ್ ಸ್ಟೇಷನ್ ನಿರ್ಮಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಕ್ರೀಡಾಂಗಣ ಅಭಿವೃದ್ಧಿ: ಕುಂಬಾರ ಕೊಪ್ಪಲಿನ ಕೆಂಪೇಗೌಡ ಕ್ರೀಡಾಂಗಣ (೨ ಕೋಟಿ ರೂ.) ಅಭಿವೃದ್ಧಿ, ಪಾಲಿಕೆ ವ್ಯಾಪ್ತಿಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸುಸಜ್ಜಿತ ಫುಟ್‌ಬಾಲ್, ಟೆನ್ನಿಸ್, ಬ್ಯಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಕ್ರಿಕೆಟ್ ಕ್ರೀಡಾ ಸಂಕೀರ್ಣ, ನಾರಾಯಣ ಹೃದಯಾಲಯದ ಹಿಂಭಾಗದ ಆಟದ ಮೈದಾನದಲ್ಲಿ ಸುಸಜ್ಜಿತ ಕ್ರೀಡಾಂ ಗಣ, ಕುವೆಂಪುನಗರ `ಕೆ’ ಬ್ಲಾಕ್ ಕ್ರೀಡಾಂಗಣದ ಅಭಿವೃದ್ಧಿಗೂ ತಲಾ ೨ ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.

ಎಂಆರ್‌ಐ, ಸಿಟಿ ಸ್ಕಾö್ಯನಿಂಗ್: ಪಾಲಿಕೆ ವ್ಯಾಪ್ತಿಯ ಬಡವರಿಗೆ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಒದಗಿಸಲು ಸಹಾಯ ವಾಗುವಂತೆ ಖಾಸಗಿ ಸಹಭಾಗಿತ್ವದಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕಾö್ಯನಿಂಗ್ ಘಟಕ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಹೆಲ್ತ್ ವೆಲ್‌ನೆಸ್ ಸೆಂಟರ್, ಪಾಲಿ ಕ್ಲಿನಿಕ್‌ಗಳನ್ನು ಆರಂಭಿಸಿ ವೈದ್ಯಕೀಯ ಸೇವೆ ಒದಗಿಸಲು ಉದ್ದೇಶಿಸಲಾಗಿದೆ.

ನೀರು ಸರಬರಾಜು ಟ್ಯಾಂಕರ್ ಖರೀದಿ: ಅಭಾವವಿರುವ ಕಡೆಗೆ ಕುಡಿಯುವ ನೀರು ಸರಬರಾಜು ಮಾಡಲು ಪಾಲಿಕೆಯಿಂದಲೇ ೧೦ ಟ್ಯಾಂಕರ್‌ಗಳನ್ನು ಖರೀದಿಸಲು ೩ ಕೋಟಿ ರೂ. ಮೀಸಲಿರಿಸಿದ್ದು, ಇದರಿಂದ ಪಾಲಿಕೆಗೆ ವರ್ಷಕ್ಕೆ ೪೦ ಲಕ್ಷ ರೂ ಹಣ ಉಳಿತಾಯ ವಾಗಲಿದೆ ಎಂದು ಅಭಿಪ್ರಾಯಿಸಲಾಗಿದೆ.

ರಾಘವೇಂದ್ರನಗರ ಸ್ಮಶಾನದಲ್ಲಿ ಅನಿಲ, ವಿದ್ಯುತ್ ಚಿತಾಗಾರ, ಪರಿಶಿಷ್ಟ ಜಾತಿ, ವರ್ಗಗಳು, ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ, ಆರೋಗ್ಯ ಸಹಾಯ ಧನ, ಜ್ಞಾನ ಸಿರಿ ಯೋಜನೆ, ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಮುಂದುವ ರಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

Translate »