ವನ್ಯಜೀವಿ ಸಪ್ತಾಹ ಸ್ಪರ್ಧೆ ವಿಜೇತರಿಗೆ ಪರಿಸರ ಅಧ್ಯಯನ ಶಿಬಿರ
ಮೈಸೂರು

ವನ್ಯಜೀವಿ ಸಪ್ತಾಹ ಸ್ಪರ್ಧೆ ವಿಜೇತರಿಗೆ ಪರಿಸರ ಅಧ್ಯಯನ ಶಿಬಿರ

November 16, 2021

ಮೈಸೂರು, ನ.೧೫(ಎಂಟಿವೈ)- ವನ್ಯಜೀವಿ ಸಪ್ತಾಹದ ಹಿನ್ನೆಲೆಯಲ್ಲಿ ವೈಲ್ಡ್ಲೈಫ್ ಕನ್ಸರ್ವೇಷನ್ ಫೌಂಡೇಷನ್ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ೧೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಪರಿಸರ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡು ವನ್ಯ ಜೀವಿಗಳ ಸಂರಕ್ಷಣೆಯ ಮಹತ್ವ ಅರಿತರು.

ಜಾಗತಿಕ ತಾಪಮಾನದಲ್ಲಿನ ಏರುಪೇರು, ನೀರಿನ ಮಹತ್ವ, ವನ್ಯಜೀವಿ ಸಂರಕ್ಷಣೆಯಿAದ ಪರಿಸರ ಸಮ ತೋಲನ ಕಾಪಾಡಿಕೊಳ್ಳುವ ಕುರಿತಂತೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂ ಡಿದ್ದರು. ಅದರಲ್ಲಿ ವಿಜೇತರಾದ ೨೦ ವಿದ್ಯಾರ್ಥಿಗಳಲ್ಲಿ ೧೫ ಮಂದಿ ವಿದ್ಯಾರ್ಥಿಗಳು ಬಂಡೀಪುರ ಕ್ಯಾಂಪಸ್ ನಲ್ಲಿ ವೈಲ್ಡ್ಲೈಫ್ ಕನ್ಸರ್ವೇಷನ್ ಫೌಂಡೇಷನ್ ಆಯೋ ಜಿಸಿದ್ದ ಪರಿಸರ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡು ಬಹುಮಾನ ವಿತರಿಸಿದರು. ಎರಡು ದಿನಗಳ ಶಿಬಿರ ದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಸಫಾರಿಗೆ ಕರೆದೊಯ್ಯ ಲಾಯಿತು. ಸಫಾರಿ ವೇಳೆ ಹುಲಿ, ಚಿರತೆ, ಆನೆ, ಸಾಂಬರ, ಕಾಡೆಮ್ಮೆ, ಜಿಂಕೆ ಸೇರಿದಂತೆ ಇನ್ನಿತರ ಪ್ರಾಣ -ಪಕ್ಷಿ ಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು ಮೊದಲ ಬಾರಿಗೆ ಸಫಾರಿ ಅನುಭವವನ್ನು ಆನಂದಿಸಿದರು.

ಬAಡೀಪುರದ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಅಧ್ಯಯನ ಶಿಬಿರದಲ್ಲಿ ವೈಲ್ಡ್ಲೈಫ್ ಕನ್ಸರ್ವೇಷನ್ ಫೌಂಡೇಷನ್ ನಿರ್ದೇಶಕ ಡ್ಯಾನಿಯೆಲ್ ಸುಕುಮಾರ್ ದಾಸ್ ಪ್ರಾತ್ಯಕ್ಷಿಕೆ ಮೂಲಕ ಪರಿಸರ ಸಂರಕ್ಷಣೆಯ ಮಹತ್ವ ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಅರಣ್ಯ ಸಂಪತ್ತಿನ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಇದರಿಂದಲೇ ಹವಾಮಾನ ವೈಪರೀತ್ಯ ಉಂಟಾಗು ತ್ತಿದೆ. ಅಕಾಲಿಕ ಮಳೆ, ಬಿರು ಬಿಸಿಲು ಸೇರಿದಂತೆ ಬದಲಾದ ವಾತಾವರಣ ಜನಜೀವನವನ್ನು ಅಸ್ತವ್ಯಸ್ತ ಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ವೈಲ್ಡ್ಲೈಫ್ ಕನ್ಸರ್‌ವೇಷನ್ ಫೌಂಡೇಷನ್ ಮುಖ್ಯಸ್ಥ ರಾಜ್‌ಕುಮಾರ್ ದೇವರಾಜೇಅರಸ್ ಮಾತನಾಡಿ, ಕೆಲವು ಅರಣ್ಯ ಪ್ರದೇಶದಲ್ಲಿ ಕೆಲವೊಂದು ಪ್ರಾಣ ಗಳ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಅರಣ್ಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಉದಾಹರಣೆಗೆ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ ಸೇರಿದಂತೆ ಇನ್ನಿತರೆಡೆಗಳಲ್ಲಿ ಹುಲಿ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದಲೇ ಹುಲಿ ಯೋಜನೆ ಜಾರಿಗೆ ತರಲಾಗಿದೆ. ಮತ್ತೆ ಕೆಲವೆಡೆ ಆನೆ ಯೋಜನೆ ಯನ್ನು ಅನುಷ್ಠಾನಗೊಳಿಸಿ ಆ ಮೂಲಕ ಅರಣ್ಯ ಸಂಪತ್ತಿನ ರಕ್ಷಣೆ ಮಾಡಲಾಗುತ್ತಿದೆ. ಹುಲಿ ಸಂರಕ್ಷಣೆಯಿAದ ಹಲವು ನದಿಗಳು ಪುನರ್ ಜೀವ ಪಡೆದಿವೆ ಎಂದರು.ಮAಗಲ ಗ್ರಾಮಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದು ವನ್ಯಜೀವಿ ಮತ್ತು ಮಾನವ ಸಂಘರ್ಷ ಹಾಗೂ ಅದನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮ, ಕಾಡಂ ಚಿನ ಗ್ರಾಮಗಳಲ್ಲಿ ರೈತರು ನಿರಾತಂಕವಾಗಿ ಕೃಷಿ ಚಟುವಟಿಕೆ ನಡೆಸಲು ವೈಲ್ಡ್ಲೈಫ್ ಕನ್ಸರ್ವೇಷನ್ ಫೌಂಡೇಷನ್ ವತಿಯಿಂದ ಸೋಲಾರ್ ಬೇಲಿ ಅಳ ವಡಿಸಿರುವುದನ್ನು ತೋರಿಸಿ ವಿವರಣೆ ನೀಡಿದರು.

ಚಾರಣ ಗ ಪಿ.ಕೆ.ಅನಿಲ್‌ಕುಮಾರ್ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿ ಪಕ್ಷಿ ವೀಕ್ಷಣೆಗೆ ಬಗ್ಗೆ ಮಾಹಿತಿ ನೀಡಿ ದರು. ಅಲ್ಲದೆ ಹುಲ್ಲುಗಾವಲಿನ ಅನಿವಾರ್ಯತೆ, ಯಾವ ಪ್ರದೇಶದಲ್ಲಿ ಯಾವ ಬಗೆಯ ಗಿಡ-ಮರ ಬೆಳೆಯುತ್ತದೆ. ಹವಾಮಾನದ ಸಮತೋಲನ ಕಾಪಾಡಲು ಗಿಡ ಮರಗಳ ಪಾತ್ರ ವಿವರಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಎಂ.ಟಿ.ಯೋಗೇಶ್ ಕುಮಾರ್, ರೋಟರಿ ಶಿಕ್ಷಕಿ ಮೇಘನಾ, ಉಪನ್ಯಾಸಕಿ ಕಾವ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »