ಮೈಸೂರಲ್ಲಿ ಸೋರುತಿಹವು ಜ್ಞಾನ ದೇಗುಲಗಳು…!
ಮೈಸೂರು

ಮೈಸೂರಲ್ಲಿ ಸೋರುತಿಹವು ಜ್ಞಾನ ದೇಗುಲಗಳು…!

November 16, 2021

ಮೈಸೂರು, ನ.೧೫- ಸಾಂಸ್ಕೃತಿಕ ನಗರಿ ಯಲ್ಲಿ ಸೋರುತ್ತಿವೆ ಅಕ್ಷರ ದೇವಾಲಯ ಗಳು… ಜ್ಞಾನ ವೃದ್ಧಿಸುವ ಗ್ರಂಥಗಳಿಗೂ ಗಂಡಾAತರ…!
ಗ್ರAಥಾಲಯಗಳು ಅರಿವಿನ ದೀವಿಗೆ ಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೆ ಎಂಬ ಮಾತಿಗೆ ಮೈಸೂರಿನಲ್ಲಿರುವ ಗ್ರಂಥಾಲಯಗಳ ಸ್ಥಿತಿ ತದ್ವಿರುದ್ಧವಾಗಿದೆ. ಸೋರುತ್ತಿರುವ ಗ್ರಂಥಾ ಲಯ ಕಟ್ಟಡಗಳು, ಸಿಬ್ಬಂದಿಯ ಕೊರತೆ, ಅಭಿವೃದ್ಧಿಗೆ ಬಾರದ ಅನುದಾನ, ಅಧಿಕಾರಿ ಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷö್ಯತೆ ಯಿಂದ ಗ್ರಂಥಾಲಯಗಳು ಹಾಳಾಗುತ್ತಿರು ವುದು ಓದುಗರನ್ನು ಚಿಂತೆಗೆ ನೂಕಿದೆ.

ಮೈಸೂರು ನಗರದಲ್ಲಿ ೩೩ ಗ್ರಂಥಾಲಯ ಗಳಿದ್ದು, ಕುವೆಂಪುನಗರ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಗ್ರಂಥಾಲಯ, ನಜರ್‌ಬಾದ್‌ನ ಪೀಪಲ್ಸ್ ಪಾರ್ಕ್, ಸಯ್ಯಾಜಿರಾವ್ ರಸ್ತೆಯ ಆಯುರ್ವೇದಿಕ್ ವೃತ್ತ ಹಾಗೂ ಹೆಬ್ಬಾಳ ದಲ್ಲಿರುವ ಗ್ರಂಥಾಲಯ ಕಟ್ಟಡಗಳು ಮತ್ತು ಅವುಗಳ ನಿರ್ವಹಣೆ ಸಾರ್ವಜನಿಕ ಗ್ರಂಥಾ ಲಯ ಇಲಾಖೆಗೆ ಸೇರಿದೆ. ಜಯಲಕ್ಷಿö್ಮಪುರಂ ಹಾಗೂ ಗಾಂಧಿನಗರದ ಬಾಡಿಗೆ ಗ್ರಂಥಾ ಲಯ ಕಟ್ಟಡಗಳ ಜೊತೆಗೆ ಜಿಲ್ಲಾ ಕೇಂದ್ರ ಕಾರಾಗೃಹ, ಕೆಎಸ್‌ಆರ್‌ಪಿ(ಕರ್ನಾಟಕ ರಾಜ್ಯ ಸಶಸ್ತç ಮೀಸಲು ಪಡೆ), ಡಿಎಆರ್ (ಜಿಲ್ಲಾ ಸಶಸ್ತç ಮೀಸಲು ಪಡೆ), ಸಿಎಆರ್ (ನಗರ ಸಶಸ್ತç ಮೀಸಲು ಪಡೆ)ನಲ್ಲಿರುವ ಸೇವಾ ಗ್ರಂಥಾಲಯಗಳು ಇಲಾಖೆ ವ್ಯಾಪ್ತಿಗೆ ಬರಲಿವೆ.
ಮೊಬೈಲ್ ಲೈಬ್ರರಿ(ಕುವೆಂಪು ಸಂಚಾರಿ ಗ್ರಂಥಾಲಯ), ಸಮುದಾಯ ಮಕ್ಕಳ ಕೇಂದ್ರ (ನಜರ್‌ಬಾದ್ ಪೀಪಲ್ಸ್ ಪಾರ್ಕ್) ಗ್ರಂಥಾ ಲಯ ಹಾಗೂ ಮುಡಾ(ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ)ಗೆ ಸೇರಿದ ಸಿದ್ದಾರ್ಥ ನಗರ ಮತ್ತು ಬೃಂದಾವನ ಬಡಾವಣೆಯಲ್ಲಿ ೨ ಕಟ್ಟಡಗಳಲ್ಲಿ ನಡೆಯುತ್ತಿರುವ ಗ್ರಂಥಾ ಲಯಗಳನ್ನು ಹೊರತುಪಡಿಸಿ ಉಳಿದ ೧೭ ಗ್ರಂಥಾಲಯ ಕಟ್ಟಡಗಳು ಮೈಸೂರು ಮಹಾ ನಗರಪಾಲಿಕೆ ವ್ಯಾಪ್ತಿಗೆ ಸೇರಿವೆ. ಸಂಚಾರಿ ಗ್ರಂಥಾಲಯ ಸೇರಿದಂತೆ ಹೊಸ ಐದಾರು ಗ್ರಂಥಾಲಯ ಕಟ್ಟಡಗಳನ್ನು ಹೊರತು ಪಡಿಸಿ ದರೆ ಇನ್ನುಳಿದ ಬಹುತೇಕ ಗ್ರಂಥಾಲಯ ಗಳಲ್ಲಿ ಮಳೆ ನೀರು ಸೋರಿಕೆಯಾಗುತ್ತಿರು ವುದು ಓದುಗರ ಆತಂಕ ಹೆಚ್ಚಿಸಿದೆ.

Knowledge Temples Lost in Mysore

ಮಳೆಗೆ ಹಾನಿಯಾಗಿರುವ ಕಟ್ಟಡಗಳು: ಪಾಲಿಕೆ ವ್ಯಾಪ್ತಿಗೆ ಸೇರಿದ ಸುಭಾಷ್‌ನಗರ ಬಡಾವಣೆಯ ನಗರ ಕೇಂದ್ರ ಗ್ರಂಥಾಲಯ, ಬಸವೇಶ್ವರ ರಸ್ತೆ ಶಾಖೆ, ಚಾಮರಾಜಪುರಂ, ಗಾಯತ್ರಿಪುರಂ ೧ನೇ ಹಂತ ಹಾಗೂ ವಿಶ್ವ ಮಾನವ ಜೋಡಿ ರಸ್ತೆಯ ಶ್ರೀ ಕುವೆಂಪು ಜ್ಞಾನ ತಾಣದ ಮೇಲ್ಛಾವಣ ಶಿಥಿಲ ಗೊಂಡು ಮಳೆ ನೀರು ಸೋರಿಕೆಯಾಗು ತ್ತಿದೆ. ಪುಸ್ತಕ, ಪೀಠೋಪಕರಣಗಳ ಮೇಲೆ ಮಳೆ ನೀರು ಸೋರುತ್ತಿದ್ದು, ಬೆಲೆ ಬಾಳುವ ಪುಸ್ತಕಗಳು ಹಾಳಾಗುತ್ತಿವೆ.
೨೦ ಕೋಟಿ ಬಾಕಿ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಂದ ವಸೂಲಿ ಮಾಡುವ ಸ್ಥಳೀಯ ಆಸ್ತಿ ತೆರಿಗೆಯಲ್ಲಿ ಶೇ.೬ ರಷ್ಟು ಸೆಸ್ ಅನ್ನು ಗ್ರಂಥಾಲಯಗಳ ನಿರ್ವ ಹಣೆಗೆ ‘ಗ್ರಂಥಾಲಯ ಉಪಕರ’ ರೂಪದಲ್ಲಿ ನೀಡಬೇಕಾಗಿದೆ. ಅದರಂತೆ ಮೈಸೂರು ನಗರ ಪಾಲಿಕೆ ನಗರದಲ್ಲಿನ ಗ್ರಂಥಾ ಲಯಗಳ ನಿರ್ವಹಣೆಗೆ ಪ್ರತಿವರ್ಷ ಸುಮಾರು ೫-೬ ಕೋಟಿ ರೂ. ನೀಡ ಬೇಕು. ಆದರೆ ನಗರಪಾಲಿಕೆ ಗ್ರಂಥಾ ಲಯಗಳ ನಿರ್ವಹಣೆ, ಅಭಿವೃದ್ಧಿಗೆ ನೀಡ ಬೇಕಾದ ‘ಗ್ರಂಥಾಲಯ ಉಪಕರ’ ೨೦ ಕೋಟಿ ರೂ.,ಗಳನ್ನು ನೀಡದೆ ಬಾಕಿ ಉಳಿಸಿ ಕೊಂಡಿದೆ. ಗ್ರಂಥಾಲಯಗಳ ನಿರ್ವಹಣೆ, ಅಭಿವೃದ್ಧಿಗೆ ಮೀಸಲಾಗಿರುವ ಹಣ ನೀಡದೆ ಅಭಿವೃದ್ಧಿ ಹೇಗೆ ಸಾಧ್ಯ? ಸೋರಿಕೆಯಿಂದ ಗ್ರಂಥಾಲಯದಲ್ಲಿನ ಪುಸ್ತಕಗಳು ಹಾಳಾದರೂ ಅಥವಾ ಗ್ರಂಥಾ ಲಯ ಕಟ್ಟಡವೇ ಕುಸಿದು ಬಿದ್ದರೂ ಇವರಿ ಗೇನಾಗಬೇಕು ಎಂದು ಪ್ರಜ್ಞಾವಂತ ನಾಗರಿಕರು, ಓದುಗರು ಕಿಡಿಕಾರಿದ್ದಾರೆ.

ಸಿಬ್ಬಂದಿ ಕೊರತೆ: ಶಿಥಿಲಗೊಂಡಿರುವ ಕಟ್ಟಡಗಳ ಕತೆ ಒಂದು ಕಡೆಯಾದರೆ ಸಿಬ್ಬಂದಿ ಕೊರತೆ ಓದುಗರನ್ನು ಮತ್ತಷ್ಟು ಕೆರಳಿಸಿದೆ. ನಗರದಲ್ಲಿರುವ ೩೩ ಗ್ರಂಥಾಲಯಗಳಲ್ಲಿ ಖಾಯಂ ನೌಕರರಿರುವುದು ಕೇವಲ ೧೭ ಮಂದಿ ಮಾತ್ರ. ೫೫ ಮಂದಿ ನೌಕರರನ್ನು ಗೌರವಧನ ಆಧಾರದ ಮೇಲೆ ನೇಮಿಸಿಕೊಂಡಿ ದ್ದರೂ ಚಿಕ್ಕ ಗ್ರಂಥಾಲಯಕ್ಕೆ ೩ ಮಂದಿ ಯಂತೆ ಹಂಚಿಕೆ ಮಾಡಿದರೂ ಸಾಕಾಗುವು ದಿಲ್ಲ. ಕೋಟ್ಯಾಂತರ ರೂ. ಮೌಲ್ಯದ ಪುಸ್ತಕ ಗಳು, ಪೀಠೋಪಕರಣಗಳು ಕಳವಾದರೆ ಯಾರು ಜವಾಬ್ದಾರರು? ಅಕಸ್ಮಾತ್ ಗ್ರಂಥಾಲಯಕ್ಕೆ ಓದಲು ಬಂದವರೇ ಪುಸ್ತಕಗಳನ್ನು ಯಾರಿಗೂ ತಿಳಿಯದಂತೆ ತೆಗೆದುಕೊಂಡರೆ ಯಾರನ್ನು ದೂರು ವುದು ಎಂದು ಸಾರ್ವಜನಿಕ ಗ್ರಂಥಾ ಲಯ ಇಲಾಖೆಯ ಅಧಿಕಾರಿಯೊಬ್ಬರು ತಮ್ಮ ಅಸಹಾಯಕತೆಯನ್ನು ‘ಮೈಸೂರು ಮಿತ್ರ’ನಲ್ಲಿ ತೋಡಿಕೊಂಡರು.

ಮೋಹನ್ ಕಾಯಕ

Translate »