ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸದ್ಯದಲ್ಲೇ ಸಂಪುಟ ಸೇರ್ಪಡೆ
News

ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸದ್ಯದಲ್ಲೇ ಸಂಪುಟ ಸೇರ್ಪಡೆ

December 21, 2022

ಬೆಂಗಳೂರು, ಡಿ.20 (ಕೆಎಂಶಿ)- ಭ್ರಷ್ಟಾಚಾರ ಹಾಗೂ ಲೈಂಗಿಕ ಪ್ರಕ ರಣದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನ ತೊರೆದಿದ್ದ ಕೆ.ಎಸ್.ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಮತ್ತೆ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆಯಿತ್ತಿದ್ದಾರೆ.
ಆರೋಪದಿಂದ ಮುಕ್ತರಾದ ನಮ್ಮನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಿ. ಇಲ್ಲದಿದ್ದರೆ, ನಮ್ಮ ಮುಂದಿನ ಹೋರಾಟದ ನಡೆ ನೋಡಿ ಎಂದು ಉಭಯ ನಾಯಕರು ಪಕ್ಷದ ವರಿಷ್ಠರಿಗೆ ಮತ್ತು ಮುಖ್ಯಮಂತ್ರಿಯ ವರಿಗೆ ನಿನ್ನೆಯಷ್ಟೇ ಎಚ್ಚರಿಕೆ ನೀಡಿದ್ದರು. ಈಶ್ವರಪ್ಪ ಎಚ್ಚರಿಕೆ ನೀಡುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿಯವರು ಇಂದು ಮುಂಜಾನೆ ಉಭಯ ನಾಯಕರನ್ನು ಸಂಪರ್ಕಿಸಿ, ವರಿಷ್ಠ ರೊಟ್ಟಿಗೆ ಸಮಾಲೋಚಿಸಿ, ಮಂತ್ರಿಮಂಡಲ ವಿಸ್ತರಿಸಿ ತಮ್ಮನ್ನು ಸೇರ್ಪಡೆ ಮಾಡಿಕೊಳ್ಳುವ ಭರವಸೆ ಇತ್ತರು. ಮುಖ್ಯಮಂತ್ರಿ ಹಾಗೂ ವರಿಷ್ಠರ ವಿರುದ್ಧ ಹರಿಹಾಯಲು ಕರೆದಿದ್ದ ಪತ್ರಿಕಾಗೋಷ್ಠಿ ಕೇವಲ ಮೋದಿ ಸರ್ಕಾರವನ್ನು ಹಾಡಿ ಹೊಗಳಲು ಸೀಮಿತವಾಯಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದ ನನ್ನ ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಮತ್ತೆ ಮಂತ್ರಿಮಂಡ ಲಕ್ಕೆ ಸೇರ್ಪಡೆ ಮಾಡಿಕೊಳ್ಳುವ ಭರವಸೆ ಮುಖ್ಯ ಮಂತ್ರಿಯವರಿಂದ ದೊರೆತಿದೆ ಎಂದರು. ಸಚಿವ ಸ್ಥಾನ ಬಯಸಿ ಪ್ರತಿಭಟನೆ ಮಾಡಿದ್ದು ನಿಜ. ಮುಖ್ಯಮಂತ್ರಿ ಮತ್ತು ವರಿಷ್ಠರ ಭರವಸೆ ದೊರೆತ ನಂತರ ನಾನು ಬೆಳಗಾವಿಯಲ್ಲಿ ಜರುಗುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಬಗ್ಗೆ ರಾತ್ರಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. ಪಕ್ಷದ ರಾಷ್ಟ್ರೀಯ ನಾಯಕರು ಪ್ರಕರಣದಲ್ಲಿ ಕ್ಲೀನ್‍ಚಿಟ್ ಲಭಿಸಿದರೆ ಮರಳಿ ಸಂಪುಟಕ್ಕೆ ತೆಗೆದುಕೊಳ್ಳುವ ಭರವಸೆ ಕೊಟ್ಟಿದ್ದರು. ಇದೀಗ ನನಗೆ ಕ್ಲೀನ್‍ಚಿಟ್ ಲಭಿಸಿದೆ. ಮಂತ್ರಿಯಾಗುವ ಅವಕಾಶ ಒದಗಿ ಬಂದಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕೆ.ಜೆ.ಜಾರ್ಜ್ ಅವರ ಮೇಲೆ ಆರೋಪ ಬಂದಾಗ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ಎದುರಿಸಿ, ಕ್ಲಿನ್‍ಚಿಟ್ ಪಡೆದು, ಮತ್ತೆ ಸಚಿವರಾದರು.

ಅದೇ ಮಾದರಿಯನ್ನೇ ತಮಗೂ ಅನುಸರಿಸುವುದಾಗಿ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಕ್ಲಿನ್‍ಚಿಟ್ ದೊರೆತು ನಾಲ್ಕು ತಿಂಗಳು ಕಳೆದರೂ ಮಂತ್ರಿಯಾಗುವ ಅವಕಾಶ ದೊರೆತಿರಲಿಲ್ಲ. ನಾನು ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲೆಲ್ಲ ಇಂದು, ನಾಳೆ ಎನ್ನುತ್ತಿದ್ದರು. ರಾಜಕೀಯ ಅಂತಿಮ ಕ್ಷಣದಲ್ಲಿ ಆರೋಪ ಹೊತ್ತು, ನಾನು ಜನರ ಮುಂದೆ ಹೋಗಬಾರದೆಂಬ ಉದ್ದೇಶಕ್ಕಾಗಿ ಕೆಲವು ಕಠಿಣ ತೀರ್ಮಾನ ಕೈಗೊಳ್ಳಬೇಕಾಯಿತು.

ಮುಖ್ಯಮಂತ್ರಿಯವರು ಇಂದು ಬೆಳಗ್ಗೆ ದೆಹಲಿಯ ಖಾಸಗಿ ಚಾನಲ್‍ವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮನ್ನು ಮಂತ್ರಿ ಮಾಡುವುದಾಗಿಯೂ ಹೇಳಿ ದ್ದಾರೆ. ಅಷ್ಟೇ ಅಲ್ಲ ತಮ್ಮೊಂದಿಗೂ ಮಾತನಾಡಿದ್ದಾರೆ. ಅವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳುವುದಾಗಿ ತಿಳಿಸಿದರು.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದರು. ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರು ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸದೇ ಇರುವುದು ಬಹಿಷ್ಕಾರವಲ್ಲ. ತಮ್ಮ ಮೇಲಿದ್ದ ಪ್ರಕರಣಗಳಲ್ಲಿ ಮುಕ್ತರಾದ ಮೇಲೆ ಮತ್ತೊಮ್ಮೆ ಸಂಪುಟಕ್ಕೆ ಸೇರಬೇಕೆನ್ನುವ ಅವರ ಚಿಂತನೆ ಸರಿಯಿದೆ. ಅವರ ವಿಚಾರವನ್ನು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚೆ ಮಾಡಿದ್ದೇನೆ. ಅವರೂ ಕೂಡ ಸಕಾರಾತ್ಮಕ ವಾಗಿದ್ದಾರೆ. ಮಿಕ್ಕ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು. ಸಿಬಿಐ ದಾಳಿ ಬಗ್ಗೆ ಡಿ.ಕೆ.ಶಿವ ಕುಮಾರ್ ಅವರ ಹೇಳಿಕೆಗೆ ಉತ್ತರಿಸಿ ಸಂವಿಧಾನಾತ್ಮಕವಾಗಿ ಸ್ವಾಯತ್ತವಾಗಿರುವ ಸಂಸ್ಥೆ ಅವರ ಬಳಿ ಇರುವ ಪುರಾವೆ ಆಧರಿಸಿ ಕ್ರಮ ಕೈಗೊಳ್ಳುತ್ತಾರೆ. ಇದು ಡಿ.ಕೆ.ಶಿವಕುಮಾರ್ ಅವರಿಗೂ ತಿಳಿದಿರುವ ವಿಚಾರ ಎಂದರು.

Translate »