ಯಶಸ್ವಿ ಎಸ್.ಸೋಮಶೇಖರ್ ಮುಡಾ ನೂತನ ಅಧ್ಯಕ್ಷ
ಮೈಸೂರು

ಯಶಸ್ವಿ ಎಸ್.ಸೋಮಶೇಖರ್ ಮುಡಾ ನೂತನ ಅಧ್ಯಕ್ಷ

December 21, 2022

ಮೈಸೂರು, ಡಿ.20(ಎಸ್‍ಬಿಡಿ)- ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ (ಮುಡಾ)ದ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡರೂ ಆದ ಹೆಸರಾಂತ ಉದ್ಯಮಿ ಯಶಸ್ವಿ ಎಸ್.ಸೋಮಶೇಖರ್ ಅವರನ್ನು ನೇಮಕ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಹಲವು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವ ಹಿಸಿದ್ದಾರೆ. ಕೊನೆಗೂ ಭಾರೀ ಪೈಪೋಟಿ ನಡೆಯುತ್ತಿದ್ದ ಮುಡಾ ಅಧ್ಯಕ್ಷ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದು, ನಾಳೆ (ಡಿ.21) ಬೆಳಗ್ಗೆ 11ಕ್ಕೆ ಅಧಿಕಾರ ಸ್ವೀಕರಿ ಸಲಿದ್ದಾರೆ. ಈ ಬಗ್ಗೆ `ಮೈಸೂರು ಮಿತ್ರ’ ನಲ್ಲಿ ಸಂತಸ ಹಂಚಿಕೊಂಡ ಅವರು, ಹಲವು ವರ್ಷಗಳಿಂದ ಬಿಜೆಪಿಯ ವಿವಿಧ ಜವಾಬ್ದಾರಿ ನಿರ್ವಹಿಸುವ ಮೂಲಕ ಪಕ್ಷದ ಸಂಘಟನೆಗೆ ಶ್ರಮಿಸಿದ್ದೇನೆ. ಚಾಮರಾಜ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರರ ವರು ಹಾಗೂ ನಾನು 1983ರಲ್ಲಿ ಬಿಜೆಪಿ ಸೇರಿದೆವು. ಅಂದಿನಿಂದ ಈವರೆಗೂ ಪಕ್ಷದ ಕೆಲಸದಲ್ಲಿ ಸಕ್ರಿಯರಾಗಿದ್ದೇವೆ ಎಂದರು. ಮಾಜಿ ಶಾಸಕರಾದ ತೋಂಟದಾರ್ಯ ಹಾಗೂ ಮಾರುತಿರಾವ್ ಪವಾರ್ ಅವರು ನಗರ ಘಟಕ ಅಧ್ಯಕ್ಷರಾಗಿದ್ದ ವೇಳೆ ನಾನು ನಗರ ಪ್ರಧಾನ ಕಾರ್ಯ ದರ್ಶಿಯಾಗಿ ಕೆಲಸ ಮಾಡಿದ್ದೇನೆ. ಯುವ ದಸರಾ ಸಮಿತಿಯ ಅಧ್ಯಕ್ಷನಾಗಿ ನಾಡಹಬ್ಬ ದಸರಾ ಉತ್ಸವದಲ್ಲೂ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ಹೋಟೆಲ್ ಉದ್ಯಮದ ಜೊತೆಗೆ `ನಿರೀಕ್ಷೆ’ ವಿಶೇಷಚೇತನರ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ, ರೋಟರಿ ಮೈಸೂರು ಉತ್ತರ ಸಹಾಯಕ ರಾಜಪಾಲರಾಗಿ ಕಾರ್ಯ ನಿರ್ವಹಿಸಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ಸರ್ಕಾರ ಮುಡಾ ಅಧ್ಯಕ್ಷನನ್ನಾಗಿ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು. ನಮ್ಮ ತಾತ ಮೈಸೂರು ಅರಮನೆಯಲ್ಲಿ ಸಿಪಾಯಿ ಆಗಿದ್ದರು. ನಮ್ಮ ತಂದೆ ಗುತ್ತಿಗೆದಾರರಾಗಿ ಜನಮನ್ನಣೆ ಗಳಿಸಿದ್ದರು. ಅವರಿಬ್ಬರ ಆಶೀರ್ವಾದ, ಪ್ರೇರಣೆಯಿಂದ ನಾನೂ ಸಮಾಜ ಸೇವೆಯಲ್ಲಿ ತೊಡಗಿದೆ. ಸದ್ಯ ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ, ಸಮರ್ಪಕವಾಗಿ ನಿರ್ವಹಿಸುವ ಮೂಲಕ ಸರ್ಕಾರ ಹಾಗೂ ಪಕ್ಷದ ಹಿರಿಯರ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು.

ಕಳೆದ ಜುಲೈನಲ್ಲಿ ಒಟ್ಟು 47 ನಿಗಮ ಮಂಡಳಿಗಳ ಪೈಕಿ 22ರ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿತ್ತು. ಅದೇ ಮಾಸಾಂತ್ಯದಲ್ಲಿ ಮುಡಾ ಹೊರತಾಗಿ ಮೈಲ್ಯಾಕ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೃಗಾಲಯ, ಕಾಡಾ, ಜಂಗಲ್ ಲಾಡ್ಜಸ್ ಸೇರಿದಂತೆ ಹಲವು ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರ ನೇಮಕ ಮಾಡಲಾಗಿತ್ತು. ಹೆಚ್.ವಿ.ರಾಜೀವ್ ಅವರ ನಂತರ ಸದ್ಯ ಯಶಸ್ವಿ ಎಸ್.ಸೋಮಶೇಖರ್ ಅವರನ್ನು ಮುಡಾ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸತೀಶ್ ಕಬಾಡಿ ಆದೇಶ ಹೊರಡಿಸಿದ್ದಾರೆ.

Translate »