ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್, ಸಿಲಿಂಡರ್ ಆಯ್ತು, ಈಗ ಕರೆಂಟ್ ಶಾಕ್
News

ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್, ಸಿಲಿಂಡರ್ ಆಯ್ತು, ಈಗ ಕರೆಂಟ್ ಶಾಕ್

April 5, 2022

ಬೆಂಗಳೂರು,ಏ.4(ಕೆಎಂಶಿ)-ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರತಿ ಯುನಿಟ್‍ಗೆ ಸರಾಸರಿ 35 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಏ.1ರಿಂದ ಪೂರ್ವಾನ್ವಯವಾಗುವಂತೆ ಪರಿ ಷ್ಕøತ ದರ ಜಾರಿಗೆ ಬರಲಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋ ಗದ ಹಂಗಾಮಿ ಅಧ್ಯಕ್ಷ ಮಂಜುನಾಥ್ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಲ್ಲದೆ, ವಿದ್ಯುತ್ ಕಂಪನಿಗಳು ಸರಸರಿ 1.85 ರೂ. ಹೆಚ್ಚಳಕ್ಕೆ ಅನು ಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದವು. ವಿದ್ಯುತ್ ಪೂರೈಕೆಯ ವ್ಯವಹಾರವನ್ನು ವಿದ್ಯುತ್ ಸರಬ ರಾಜು ಕಂಪನಿಗಳು ಸುಲಲಿತವಾಗಿ ನಡೆಸಲು ಅನುವು ಮಾಡಿಕೊಡುವ ಸಲುವಾಗಿ ವಿದ್ಯುತ್ ಪೂರೈಕೆ ಹೆಚ್ಚಳ ಅನಿವಾರ್ಯವೆಂದು ಆಯೋಗ ಸಮರ್ಥಿಸಿಕೊಂಡಿದೆ. 10 ಹೆಚ್‍ಪಿವರೆಗಿನ ಕೃಷಿ ಪಂಪ್‍ಸೆಟ್‍ಗಳಿಗೆ ಎಂದಿನಂತೆ ಉಚಿತ ವಿದ್ಯುತ್ ಸೌಲಭ್ಯ ಹಾಗೂ ಭಾಗ್ಯ ಜ್ಯೋತಿ ವಿದ್ಯುತ್ ಪೂರೈಕೆ ಯಥಾಸ್ಥಿತಿ ಮುಂದುವರೆದಿದೆ. ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಕೋವಿಡ್-19ರ ದುಷ್ಪರಿ ಣಾಮಗಳಿಂದ ಚೇತರಿಸಿ ಕೊಳ್ಳಲು ಆಯೋಗವು 1 ವರ್ಷದವರೆಗೆ ಮಾಸಿಕ ಇಂಧನ ಬಳಕೆಯಲ್ಲಿ ಪ್ರತಿ ಯೂನಿಟ್‍ಗೆ 50 ಪೈಸೆ ರಿಯಾಯ್ತಿ ನೀಡಲು ನಿರ್ಧರಿಸಿದೆ. ಅದೇ ರೀತಿ ಋತು ಕಾಲಿಕ ಕೈಗಾರಿಕೆಗಳಾದ ಮಂಜುಗಡ್ಡೆ ಉತ್ಪಾ ದನಾ ಘಟಕ, ಶಿಥಲೀಕರಣ ಘಟಕಗಳಿಗೆ ಪ್ರತಿ ಯುನಿಟ್‍ಗೆ ಒಂದು ರೂ. ರಿಯಾಯ್ತಿ ದೊರೆಯಲಿದೆ ಗ್ರಾಹಕರು ಮತ್ತು ಕಂಪನಿಗಳ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಈ ಪ್ರಮಾಣದಲ್ಲಿ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. ಕಂಪನಿಗಳಿಗೆ 2159 ಕೋಟಿ ರೂ. ಕೊರತೆ ನೀಗಿಸಲು ಪ್ರತಿ ಯೂನಿಟ್‍ಗೆ ಐದು ಪೈಸೆ ಇಂಧನ ಶುಲ್ಕ ಹಾಗೂ ಹೆಚ್‍ಪಿ/ ಕಿ.ವ್ಯಾ/ ಕೆ.ವಿ.ಎಗೆ 10ರಿಂದ 30 ರೂ.ವರೆಗೆ ನಿಗದಿತ ಶುಲ್ಕಗಳ ಹೆಚ್ಚಳವನ್ನು ಅನುಮೋದಿಸಿದೆ. ಕೋವಿಡ್ 19ರ ಸಾಂಕ್ರಾಮಿಕ ರೋಗ ಹಾಗೂ ಇತರೆ ಕಾರಣಗಳಿಂದಾಗಿ ಆಯೋಗವು 2021ರ ಆರ್ಥಿಕ ವರ್ಷದ ಪರಿಷ್ಕರಣೆ ಆದೇಶವನ್ನು 2020ರ ನವೆಂಬರ್‍ನಿಂದ ಜಾರಿಗೊಳಿ ಸಿದೆ. ಗ್ರಾಹಕರಿಗೆ ವಿದ್ಯುತ್ ದರದ ಹೆಚ್ಚಳದ ಹೊರೆ ತಪ್ಪಿಸಲು ನಿಯಂತ್ರಕ ಸ್ವತ್ತನ್ನು ರಚಿಸಿ ಪರಿಷ್ಕøತ ದರವನ್ನು 2020ರ ನವೆಂಬರ್ ಒಂದರಿಂದ ಅನ್ವಯಗೊಳಿಸಿದೆ.

Translate »