ಏ.10ರಿಂದ ಮೈಸೂರಲ್ಲಿ ಹೋಟೆಲ್ ತಿಂಡಿ-ಊಟದ ದರ ಶೇ.5ರಷ್ಟು ಹೆಚ್ಚಳ
ಮೈಸೂರು

ಏ.10ರಿಂದ ಮೈಸೂರಲ್ಲಿ ಹೋಟೆಲ್ ತಿಂಡಿ-ಊಟದ ದರ ಶೇ.5ರಷ್ಟು ಹೆಚ್ಚಳ

April 5, 2022

ಮೈಸೂರು,ಏ.4- ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ರಾಜ್ಯಾದ್ಯಂತ ಹೋಟೆಲ್ ಮಾಲೀ ಕರು ಊಟ, ತಿಂಡಿ ದರವನ್ನು ಹೆಚ್ಚಳ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಊಟ, ತಿಂಡಿ ಹಾಗೂ ಕಾಫಿ-ಟೀ ದರವನ್ನು ಶೇ.10ರಷ್ಟು ಹೆಚ್ಚಳ ಮಾಡಲು ತೀರ್ಮಾನ ಕೈಗೊಂಡಿರುವುದಾಗಿಯೂ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.

ಇತ್ತ ಮೈಸೂರಿನಲ್ಲಿ ಏಪ್ರಿಲ್ 10ರಿಂದ ಊಟ, ತಿಂಡಿ. ಹಾಗೂ ಕಾಫಿ-ಟೀ ದರವನ್ನು ಶೇ.5ರಷ್ಟು ಹೆಚ್ಚಿಸಲು ಹೋಟೆಲ್ ಮಾಲೀ ಕರ ಸಂಘ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ತಿಳಿಸಿದ್ದಾರೆ. ಎಲ್ಲಾ ತರಹದ ದಿನಸಿ ಪದಾರ್ಥ, ಅಡುಗೆ ಎಣ್ಣೆ, ಅನಿಲ ಸಿಲಿಂಡರ್, ಪ್ಯಾಕಿಂಗ್ ಮೆಟೀರಿಯಲ್ಸ್ ಹಾಗೂ ನೌಕರರ ವೇತನ ಶೇ.25ರಷ್ಟು ಹೆಚ್ಚಾಗಿದೆ. ನಂದಿನಿ ತುಪ್ಪ ಲೀಟರೊಂದಕ್ಕೆ 30 ರೂ., ಕಾಫಿ-ಟೀ ಪೌಡರ್ ಶೇ. 30 ರಷ್ಟು. ಸಾಂಬಾರ ಪದಾರ್ಥಗಳು ಶೇ. 33ರಷ್ಟು ಹೆಚ್ಚಳವಾಗಿದೆ. ಟ್ರೇಡ್ ಲೈಸೆನ್ಸ್ ಶುಲ್ಕವು ಕೂಡ ಶೇ.20ರಷ್ಟು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ಹೋಟೆಲ್ ಉದ್ಯಮ
ಕಳೆದ 2 ವರ್ಷಗಳಿಂದ ಸಂಪೂರ್ಣವಾಗಿ ನೆಲಕಚ್ಚಿದೆ. ಮೈಸೂರಿನಲ್ಲಿ ಪ್ರವಾ ಸೋದ್ಯಮವು ಕೂಡ ಕುಂಠಿತವಾಗಿದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೋಟೆಲ್ ಉದ್ಯಮದ ಸಮಸ್ಯೆ ಹೇಳ ತೀರದಂತಾಗಿದೆ. ಈ ಎಲ್ಲಾ ಕಾರಣಗಳಿಂದ ಊಟ, ತಿಂಡಿ ಬೆಲೆಯನ್ನು ಶೇ.10ರಷ್ಟು ಹೆಚ್ಚಿಸಲೇಬೇಕಾಗಿದೆ.ಎಂದಿರುವ ಅವರು ಈ ಸಂಬಂಧ ಇಂದು ಸಂಜೆ ಸಂಘದ ತುರ್ತು ಕಾರ್ಯಕಾರಿ ಸಮಿತಿ ಸಭೆಯನ್ನು ಕರೆದು, ಗ್ರಾಹಕರಿಗೂ ಹೊರೆಯಾಗದಂತೆ ಊಟ-ತಿಂಡಿ ಬೆಲೆಯನ್ನು ಏಪ್ರಿಲ್ 10ರಿಂದ ಶೇ. 10ರಷು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Translate »