ಮುಡಾ ಆಸ್ತಿ ಕಬಳಿಕೆ ಪತ್ತೆಗೆ ಲ್ಯಾಂಡ್ ಆಡಿಟ್
ಮೈಸೂರು

ಮುಡಾ ಆಸ್ತಿ ಕಬಳಿಕೆ ಪತ್ತೆಗೆ ಲ್ಯಾಂಡ್ ಆಡಿಟ್

April 5, 2022

ಮೈಸೂರು, ಏ.4(ಆರ್‍ಕೆ)- ಕಬಳಿಕೆ ಯಾಗಿದೆ ಎನ್ನಲಾದ ಸಾವಿರಾರು ಕೋಟಿ ರೂ. ತನ್ನ ಆಸ್ತಿ ಪತ್ತೆ ಮಾಡಿ, ಅದನ್ನು ರಕ್ಷಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು ‘ಲ್ಯಾಂಡ್ ಆಡಿಟ್’ ನಡೆಸಲು ಮುಂದಾಗಿದೆ.

ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಲ್ಯಾಂಡ್ ಆಡಿಟ್ ನಡೆಸಿ ಕಬ ಳಿಕೆಯಾಗಿರುವ ಮುಡಾ ಭೂಮಿಯನ್ನು ವಶಕ್ಕೆ ಪಡೆಯಲು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 1 ಕೋಟಿ ರೂ. ಅನುದಾನ ವನ್ನು ಮೀಸಲಿಡಲಾಗಿದೆ ಎಂದರು.

ವಸತಿ ಬಡಾವಣೆ ಅಭಿವೃದ್ಧಿಪಡಿಸಲು ವಶಪಡಿಸಿಕೊಂಡಿರುವ ನೂರಾರು ಎಕರೆ ಭೂಮಿಗೆ ಪರಿಹಾರ ವಿತರಿಸಿದ್ದರೂ, ಕೆಲವು ಭೂಮಿ ಅನ್ಯರ ವಶದಲ್ಲಿರುವುದು ಕಂಡು ಬಂದಿದೆ. ಅಂತಹ ನೂರಾರು ಕೋಟಿ ರೂ ಬೆಲೆಬಾಳುವ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ನಂತರ ಬಡಾವಣೆ ನಿರ್ಮಾ ಣಕ್ಕೆ ಬಳಕೆಯಾಗಿರುವ ಬಗ್ಗೆ ಲ್ಯಾಂಡ್ ಆಡಿಟ್ ಮಾಡಿದಲ್ಲಿ ಪ್ರಾಧಿಕಾರಕ್ಕೆ ಆ ಆಸ್ತಿ ಪ್ರಾಪ್ತವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭ ದಾಖಲಾತಿಗಳನ್ನು ಪರಿ ಶೀಲಿಸಿ, ಸ್ಥಳಕ್ಕೆ ತೆರಳಿ ಭೌತಿಕವಾಗಿ ಪರಿ ಶೀಲಿಸಲು 20 ಮಂದಿ ಪರವಾನಗಿ ಪಡೆದ ಭೂ ಮಾಪಕರು, ಇಬ್ಬರು ನಿವೃತ್ತ ಸರ್ವೆ ಸೂಪರ್‍ವೈಸರ್‍ಗಳು ಹಾಗೂ ಇಬ್ಬರು ನಿವೃತ್ತ ಶಿರಸ್ತೇದಾರರನ್ನು ನೇಮಿಸಿ ಕೊಂಡು ಲ್ಯಾಂಡ್ ಆಡಿಟ್ ಮಾಡಿಸಲು ನಿರ್ಧರಿಸ ಲಾಗಿದ್ದು, ಅದಕ್ಕಾಗಿ ಪ್ರಾಧಿಕಾರವು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 100 ಲಕ್ಷ ರೂ. ಗಳನ್ನು ಮೀಸಲಿರಿಸಿದೆ ಎಂದು ತಿಳಿಸಿದರು.

ಬದಲಿ ನಿವೇಶನ ಅಕ್ರಮ
ಹಂಚಿಕೆಯಾದ ಮೂಲ ನಿವೇಶನಕ್ಕೆ ಪರ್ಯಾಯವಾಗಿ ಬದಲಿ ನಿವೇಶನ ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಅಧ್ಯಯನ ನಡೆಸಲು ವಿಶೇಷ ಸಮಿತಿ ರಚಿಸಲಾಗು ವುದು ಎಂದರು. ಬೇರೆ ಬೇರೆ ಕಾರಣ ಗಳಿಗಾಗಿ ಬದಲಿ ನಿವೇಶನ ನೀಡಿದ್ದರೂ, ಮಂಜೂರಾಗಿದ್ದ ಮೂಲ ನಿವೇಶನಗಳು ಹಂಚಿಕೆದಾರರ ಹೆಸರಿನಲ್ಲೇ ಮುಂದುವರಿದು, ಅವು ಅನ್ಯರ ಪಾಲಾಗುತ್ತಿರುವ ಹಲವು ಪ್ರಕ ರಣಗಳು ಬೆಳಕಿಗೆ ಬಂದಿರುವುದರಿಂದ ಸಮಗ್ರ ಅಧ್ಯಯನ ನಡೆಸಿ ಮೂಲ ನಿವೇ ಶನ ರದ್ದತಿಯಾಗಿ ಪ್ರಾಧಿಕಾರದ ವಶದಲ್ಲಿ ರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ತಯಾ ರಿಸಿದಲ್ಲಿ ಮುಡಾಗೆ ನೂರಾರು ಕೋಟಿ ರೂ. ಬೆಲೆಬಾಳುವ ನಿವೇಶನಗಳು ಲಭ್ಯವಾಗು ತ್ತವೆ ಎಂಬ ಉದ್ದೇಶದಿಂದ ವಿಶೇಷ ತಂಡ ರಚಿಸಲು ನಿರ್ಧರಿಸಲಾಗಿದೆ ಎಂದರು.

ಅದಕ್ಕಾಗಿ ಮುಡಾ ಕಾರ್ಯದರ್ಶಿ ನೇತೃತ್ವದಲ್ಲಿ ಇಬ್ಬರು ನಿವೃತ್ತ ತಹಸೀಲ್ದಾರ್ ಮಟ್ಟದ ಅಧಿಕಾರಿಗಳನ್ನು ನೇಮಿಸಿ ಕಾರ್ಯ ಯೋಜನೆ ಜಾರಿಗೆ ತರಲು ಈ ವರ್ಷದ ಆಯವ್ಯಯದಲ್ಲಿ 50 ಲಕ್ಷ ರೂ.ಗಳನ್ನು ಮೀಸ ಲಿರಿಸಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರು ಯೋಜನೆ
ಬಿದರಗೂಡು ಕುಡಿಯುವ ನೀರಿನ ಯೋಜನೆಯನ್ನು 60 ಎಂಎಲ್‍ಡಿಯಿಂದ 120 ಎಂಎಲ್‍ಡಿ ಸಾಮಥ್ರ್ಯಕ್ಕೇರಿಸಲು 150 ಕೋಟಿ ರೂ.
ಹಣ ಖರ್ಚು ಮಾಡುತ್ತಿದೆ. ಈ ಯೋಜನೆಗೆ 50 ಕೋಟಿ ರೂ. ಗಳನ್ನು ಜಲಜೀವನ್ ಮಿಷನ್‍ನಿಂದ ಭರಿಸಬೇಕೆಂದು ಉದ್ದೇಶಿಸಲಾಗಿತ್ತಾದರೂ, ಜಿಲ್ಲಾ ಉಸ್ತುವಾರಿ ಸಚಿವ, ನಗರಾಭಿವೃದ್ಧಿ ಸಚಿವರ ನಿರ್ದೇಶನದಂತೆ ಪೂರ್ಣ ಹಣವನ್ನು ಪ್ರಾಧಿಕಾರವೇ ಭರಿಸಲು ನಿರ್ಧರಿಸಲಾಗಿದೆ ಎಂದು ರಾಜೀವ್ ನುಡಿದರು.

ಜಲ ಸಂಗ್ರಹಾಗಾರ: ಹಳೇ ಉಂಡವಾಡಿ ಮತ್ತು ಬಿದರಗೂಡು ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಮುಡಾ ಬಡಾವಣೆಗಳಿಗೆ ನೀರು ವಿತರಣಾ ವ್ಯವಸ್ಥೆಗಾಗಿ 6 ಕಡೆ ಎಂಬಿಆರ್ ಜಲ ಸಂಗ್ರಹಾಗಾರಗಳನ್ನು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಬ್ ಸ್ಟೇಷನ್ ನಿರ್ಮಾಣ: ಮುಡಾ ನಿರ್ಮಿಸಿರುವ ಆರ್.ಟಿ.ನಗರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ ಬಡಾವಣೆಗಳಲ್ಲಿ ಕೆಪಿಟಿಸಿಎಲ್ ಮೂಲಕ ಉಪ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ಪ್ರಸಕ್ತ ಸಾಲಿನಲ್ಲಿ ಪ್ರಾಧಿಕಾರವು ಅಗತ್ಯ ಅನುದಾನ ಮೀಸಲಿರಿಸಿದೆ ಎಂದು ಮುಡಾ ಅಧ್ಯಕ್ಷ ರಾಜೀವ್ ತಿಳಿಸಿದರು.

ಕೆರೆಗಳ ಅಭಿವೃದ್ಧಿ: ಮುಡಾ ವ್ಯಾಪ್ತಿಯಲ್ಲಿರುವ 8 ಕೆರೆಗಳನ್ನು 9 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಅವು ಮಲೀನವಾಗದಂತೆ ಸಂರಕ್ಷಿಸಲು ಉದ್ದೇಶಿಸಲಾಗಿದೆ. ಎಸ್‍ಟಿಪಿ ಸ್ಥಾಪಿಸುವುದು, ಒಳಚರಂಡಿ ನೀರು ಕೆರೆಗಳಿಗೆ ಸೇರದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು, ಪ್ರೋ ಬಯೋಟೆಕ್ ಎಂಜಿಮ್ ಟೋಜಿಂಗ್ ಟೆಕ್ನಾಲಜಿ ಮೂಲಕ ಕೆರೆ ನೀರಿನ ಶುದ್ಧೀಕರಣ ಮಾಡಲು 150 ಲಕ್ಷ ರೂ.ಗಳನ್ನು ಕಾಯ್ದಿರಿಸುವುದಾಗಿ ತಿಳಿಸಿದರು.

ಟಾಸ್ಕ್‍ಫೋರ್ಸ್: ನಿವೇಶನ, ಭೂಮಿ, ಕಟ್ಟಡದಂತಹ ಸ್ಥಿರಾಸ್ತಿಯನ್ನು ಅನಧಿಕೃತ ವಾಗಿ ಪಡೆದು ಸ್ವಾಧೀನಾನುಭವದಲ್ಲಿದ್ದರೆ, ಸಮಗ್ರವಾಗಿ ಪರಿಶೀಲಿಸಿ ವಶಪಡಿಸಿಕೊಳ್ಳಲು ಟಾಸ್ಕ್‍ಫೋರ್ಸ್ ರಚಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಅಗತ್ಯವಿರುವ ಸಿಬ್ಬಂದಿ, ಸಲಕರಣೆಗಳನ್ನು ಒದಗಿಸಲು ಸಹ ಮುಡಾ ತೀರ್ಮಾನಿಸಿದೆ ಎಂದು ತಿಳಿಸಿದರು. ಮುಡಾ ಆಯುಕ್ತ ಡಾ. ಡಿ.ಬಿ. ನಟೇಶ್, ಸದಸ್ಯರಾದ ನವೀನ್‍ಕುಮಾರ್, ಲಕ್ಷ್ಮೀದೇವಿ, ನಿಂಗಣ್ಣ, ಸೂಪರಿಂಟೆಂಡಿಂಗ್ ಇಂಜಿನಿಯರ್ ಶಂಕರ್, ನಗರ ಯೋಜಕ ಸದಸ್ಯ ಜಯಸಿಂಹ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »