ಲಾಟರಿ ಮೂಲಕ ವಿವಿಗಳ ಕುಲಪತಿ ಆಯ್ಕೆ ಕಾಲ ಬಂದರೂ ಬರಬಹುದು…!
ಮೈಸೂರು

ಲಾಟರಿ ಮೂಲಕ ವಿವಿಗಳ ಕುಲಪತಿ ಆಯ್ಕೆ ಕಾಲ ಬಂದರೂ ಬರಬಹುದು…!

April 5, 2022

ಮೈಸೂರು, ಏ.4(ಎಸ್‍ಬಿಡಿ)- ವ್ಯವಸ್ಥೆ ಸರಿಹೋಗದಿದ್ದರೆ ಮುಂದಿನ ದಿನಗಳಲ್ಲಿ ಲಾಟರಿ ಮೂಲಕ ವಿಶ್ವವಿದ್ಯಾನಿಲಯ ಗಳಿಗೆ ಕುಲಪತಿಗಳ ಆಯ್ಕೆ ಮಾಡಬಹುದು ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ವಿಷಾದ ವ್ಯಕ್ತಪಡಿಸಿದರು.

ಮೈಸೂರಿನ ಮಾನಸಗಂಗೋತ್ರಿ ಪರಿಸರ ಅಧ್ಯ ಯನ ವಿಭಾಗ ಅಧ್ಯಯನ ಮಂಡಳಿಯ ಅಧ್ಯ ಕ್ಷರೂ ಆದ ಎಂಟೆಕ್ ಇನ್ ಮೆಟಿರಿಯಲ್ಸ್ ಸೈನ್ಸ್ ಸಂಯೋಜಕ ಪ್ರೊ.ಎಸ್.ಶ್ರೀಕಂಠಸ್ವಾಮಿ ಅವರು ಲಂಡನ್‍ನ ಪ್ರತಿಷ್ಠಿತ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ(ಎಫ್‍ಆರ್‍ಎಸ್‍ಸಿ) ಫೆಲೋಗೆ ಭಾಜನರಾಗಿರುವ ಹಿನ್ನೆಲೆಯಲ್ಲಿ ವಿಜ್ಞಾನ ಭವನ ಸಭಾಂಗಣದಲ್ಲಿ ಸೋಮ ವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಪಿ(ನಕಲು) ಮಾಡಿದವರು, ಮಾಡಿಸಿದವರು, ಸೇವೆಯಿಂದ ಅಮಾನತ್ತಾದವರು ವಿವಿಗಳ ಕುಲಪತಿ, ಕುಲಸಚಿವ ಹಾಗೂ ನಿರ್ದೇಶಕರಾಗುವ ದುಃಸ್ಥಿತಿ ಬಂದೊಂದ ಗಿದೆ. ಅರ್ಹರು ಕಣ್ಮರೆಯಾಗುತ್ತಿ ದ್ದಾರೆ. ಮುಂದಿನ ದಿನಗಳಲ್ಲಿ ಲಾಟರಿ ಮೂಲಕ ಕುಲಪತಿಯನ್ನು ಆಯ್ಕೆ ಮಾಡಿ ದರೂ ಆಶ್ಚರ್ಯವಿಲ್ಲ. ನಾನು ಗಮನಿಸಿರು ವುದರಿಂದ ಅತ್ಯಂತ ನೋವಿನಿಂದ ಅನಿವಾರ್ಯವಾಗಿ ಹೇಳುತ್ತಿದ್ದೇನೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಅಧೋಗತಿಗೆ ಹೋಗುತ್ತಿದೆ. ಬುದ್ದಿವಂತರು ಮಾತ್ರ ಸಂಶೋಧನಾ ಪ್ರಬಂಧ ಪ್ರಕಟಿಸಲು ಸಾಧ್ಯ. ನನ್ನ ಮಾರ್ಗದರ್ಶನದಲ್ಲಿ ಪಿ.ಹೆಚ್‍ಡಿ ಮಾಡಿದ 60ರಲ್ಲಿ 40 ಮಂದಿ ವಿದೇಶಗಳಲ್ಲಿದ್ದಾರೆ. ಪ್ರತಿಭಾವಂತರಾದರೂ ಇಲ್ಲಿ ನೆಲೆ ಸಿಗದ ಕಾರಣಕ್ಕೆ ಬೇರೆ ದೇಶಗಳಿಗೆ ತೆರಳಿದ್ದಾರೆ. ನಿನ್ನೆ ಎಂಎಸ್ಸಿ ಪದವಿ ಮುಗಿಸಿದವರಿಗೂ ಶಿಫಾರಸ್ಸಿನ ಮೇಲೆ ಬೋಧನೆ ಮಾಡುತ್ತಿದ್ದಾರೆ. ಭಾರತ ದಲ್ಲಿ ಶ್ರೇಷ್ಠ ಸಂಸ್ಕøತಿ ಹಾಗೂ ಹೆಚ್ಚು ಬುದ್ದಿವಂತರಿದ್ದಾರೆ. ಬೇರೆ ದೇಶಗಳಲ್ಲೂ ಸಾಕಷ್ಟು ಮಂದಿ ಪ್ರತಿಭಾನ್ವಿತರಾಗಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತಿಭಾವಂತರಿಗೆ ಅವಕಾಶ ಸಿಗುತ್ತಿಲ್ಲ. ಆದರೆ ಇಂತಹವರಿಗೆ ಖಾಸಗಿ ಸಂಸ್ಥೆಗಳಲ್ಲಿ ಪ್ರೋತ್ಸಾಹ ಸಿಗುತ್ತಿದೆ. ಹಾಗಾಗಿ ಖಾಸಗೀಕರಣ ಮಾಡಿದರೆ ಒಳ್ಳೆಯದು ಎನ್ನಿಸುತ್ತದೆ. 80 ಜನ ವಿಶ್ರಾಂತ ಕುಲಪತಿಗಳನ್ನೊಳಗೊಂಡ ಸಂಘದ ಅಧ್ಯಕ್ಷನಾಗಿ ನಾನು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದೆ. ಆದರೆ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ನಮ್ಮಲ್ಲಿರುವ ಬುದ್ದಿವಂತ ರಿಗೆ ಪ್ರಾಶಸ್ತ್ಯ ನೀಡಬೇಕು. ವಿದ್ವತ್ತನ್ನು ಗೌರವಿಸಿ, ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಅರ್ಹರನ್ನು ಬೆಂಬಲಿಸಬೇಕು ಎಂದು ಆಶಯ ವ್ಯಕ್ತಪಡಿಸಿದ ಪ್ರೊ.ಕೆ.ಎಸ್.ರಂಗಪ್ಪ, ಯಾವ ಸರ್ಕಾರವಾದರೂ ಸ್ವಾಮೀಜಿಗಳ ಮಾತನ್ನು ತಳ್ಳಿ ಹಾಕುವುದಿಲ್ಲ. ಹಾಗಾಗಿ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ಸರ್ಕಾರವನ್ನು ಆಗ್ರಹಿಸಬೇಕೆಂದು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಲ್ಲಿ ಮನವಿ ಮಾಡಿಕೊಂಡರು.

Translate »