ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ

ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

April 5, 2022

ಪಾಂಡವಪುರ,ಏ.4- ಕನಗನಮರಡಿ ಹೊರವಲಯದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸ್ಥಗಿತ ಗೊಳಿಸುವಂತೆ ಒತ್ತಾಯಿಸಿ ತಾಲೂಕಿನ ಕನಗನ ಮರಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ಗ್ರಾಮಸ್ಥರು ರಸ್ತೆ ತಡೆದು ಗಣಿ ಮಾಲೀಕರು ಹಾಗೂ ಪೊಲೀಸ್ ಅಧಿಕಾರಿ ಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಕನಗನಮರಡಿ ಗ್ರಾಮದ ಹೊರವಲ ಯದ ಅರಣ್ಯ ಪ್ರದೇಶದ ಪಕ್ಕದಲ್ಲಿ ಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದೆ. ಇಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಜನರಿಗೆ ಅನಾನುಕೂಲದ ಜತೆಗೆ ಪ್ರಾಕೃತಿಕ ಸಂಪತ್ತು ಲೂಟಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಣಿ ಮಾಲೀಕರು ಕಲ್ಲು ಸಿಡಿಸಲು ಮೆಗ್ಗರ್, ರಿಗ್ ಬೋರ್ ಬ್ಲಾಸ್ಟಿಂಗ್ ಮಾಡುತ್ತಿದ್ದಾರೆ. ಇದರಿಂದಾಗಿ ಮನೆಗಳು, ದೇವಸ್ಥಾನ ಗೋಡೆ ಗಳು ಬಿರುಕು ಬಿಡುತ್ತಿವೆ. ಜತೆಯಲ್ಲಿ ಗ್ರಾಮ ದಲ್ಲಿ ವಿಶ್ವೇಶ್ವರಯ್ಯ ನಾಲೆಯ ಅಕ್ವಡೆಟ್ (ನಾಲೆಯ ಮೇಲ್ಸೇತುವೆ) ಹೋಗಿದೆ. ಬ್ಲಾಸ್ಟಿಂಗ್ ಶಬ್ಧಕ್ಕೆ ನಾಲೆಗೂ ಸಹ ಅಪಾಯ ಎದುರಾಗಿದೆ. ಇಲ್ಲಿಗೆ ಸಮೀಪವೇ ವಿಸಿ ನಾಲೆಯ ಸುರಂಗವಿದ್ದು ಅದಕ್ಕೂ ಸಹ ಅಪಾಯ ಎದುರಾಗಿದೆ. ರಾತ್ರಿಯ ವೇಳೆ ಯಲ್ಲಿ ಬ್ಲಾಸ್ಟಿಂಗ್ ಮಾಡುವುದರಿಂದ ಮನೆ ಯಲ್ಲಿ ಮಲಗುವ ಮಕ್ಕಳು, ವೃದ್ಧರು ಬೆಚ್ಚಿ ಬೀಳುತ್ತಿದ್ದಾರೆ ಎಂದು ಆರೋಪಿಸಿದರು. ಕಲ್ಲು ಗಣಿಗಾರಿಕೆಯ ಜತೆಗೆ ಕ್ರಷರ್ ಗಳಿಂದ ಧೂಳು ಹಾಗೂ ಶಬ್ದ ಹೆಚ್ಚಾಗಿದೆ. ಕಲ್ಲಿನ ಧೂಳು ಜಮೀನು ಹಾಗೂ ಕೆರೆಕಟ್ಟೆಗಳ ಮೇಲೆ ಬೀಳುತ್ತಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ, ಜತೆಗೆ ಜನರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಇನ್ನೂ ಜಾನುವಾರುಗಳು ಮೇವಿಗೂ ಸಾಕಷ್ಟು ಅನಾನುಕೂಲ ಉಂಟಾಗಿದೆ ಎಂದು ಕಿಡಿಕಾರಿದರು.

ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ: ತಾಲೂಕಿನ ಸರ್ಕಲ್ ಇನ್ಸ್‍ಪೆಕ್ಟರ್ ಪ್ರಭಾಕರ್ ಅವರು ಗಣಿ ಮಾಲೀಕ ಅಶೋಕ್ ಪಾಟೀಲ್ ಕೈಬೊಂಬೆಯಂತೆ ಕುಣಿಯು ತ್ತಿದ್ದಾರೆ. ಗ್ರಾಮದ ರೈತರು ಕಲ್ಲು ಗಣಿಗಾರಿಕೆ ಯಿಂದ ತೊಂದರೆಯಾಗುತ್ತಿದೆ ಎಂದು ಕ್ರಷರ್ ಬಳಿ ಹೋಗಿ ಕೇಳಿದ್ದಕ್ಕೆ ಗಣಿ ಮಾಲೀಕ ಅವರ ವಿರುದ್ದ ಪೊಲೀಸರರಿಗೆ ದೂರು ನೀಡಿದ್ದಾರೆ. ಅದಕ್ಕೆ ಪೊಲೀಸರು ರೈತರನ್ನು ಬಂಧಿಸಲು ಬಂದಿದ್ದಾರೆ. ಅದೇ ರೈತರು, ಸ್ಥಳೀಯರು, ಗ್ರಾಮಸ್ಥರು ಗಣಿ ಮಾಲೀಕನ ವಿರುದ್ಧ ದೂರು ನೀಡಿದರೆ ನಮ್ಮ ದೂರನ್ನು ಸ್ವೀಕರಿಸೋದೆ ಇಲ್ಲ. ಗಣಿ ಮಾಲೀಕರು ಹೇಳಿದ ಹಾಗೆ ಸರ್ಕಲ್ ಇನ್ಸ್‍ಪೆಕ್ಟರ್ ಕುಣಿಯುತ್ತಿದ್ದಾರೆ. ಪೊಲೀಸ್ ವ್ಯವಸ್ಥೆಯೇ ಹೀಗಾದರೆ ಹೇಗೆ ಎಂದು ಆಕ್ರೋಶ ಹೊರಹಾಕಿದರು. ಅವರು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆಯ ಎದುರೇ ಪ್ರತಿಭಟನೆ ನಡೆಸಬೇಕಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು. ಇಲ್ಲಿನ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸು ವಂತೆ ಜಿಲ್ಲಾಧಿಕಾರಿ, ಎಸಿ, ತಹಸೀಲ್ದಾರ್, ಗಣಿ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಹೀಗಿದ್ದರೂ ಸಹ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಹೀಗೆಯೇ ನಮ್ಮ ಬದುಕಿಗೆ ತೊಂದರೆಯಾಗುತ್ತಿದ್ದರೆ ಇಡೀ ಗ್ರಾಮಸ್ಥ ರೆಲ್ಲ ಮುಂದಿನ ದಿನಗಳಲ್ಲಿ ಉಗ್ರವಾದ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಮೈಷುಗರ್ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮುಖಂಡರಾದ ಕೃಷಮೂರ್ತಿ, ಜೆ.ಗಿರೀಶ್, ಚಿಕ್ಕಣ್ಣೇಗೌಡ, ಉಮೇಶ್, ಅಂಕೇಗೌಡ, ಶಂಕರೇಗೌಡ, ನಾಗರಾಜು, ಸುರೇಶ್, ಗುರುವಯ್ಯ, ತಮ್ಮಣ್ಣ ಸೇರಿದಂತೆ ಹಲವರು ಇದ್ದರು.

Translate »