ಪಾಂಡವಪುರದಲ್ಲಿ ಬೈಕ್‍ಗಳ ಡಿಕ್ಕಿ: ಓರ್ವ ಸಾವು
ಮಂಡ್ಯ

ಪಾಂಡವಪುರದಲ್ಲಿ ಬೈಕ್‍ಗಳ ಡಿಕ್ಕಿ: ಓರ್ವ ಸಾವು

April 5, 2022

ಪಾಂಡವಪುರ, ಏ.4- ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಆರು ಮಂದಿ ಯುವಕರು ತೀವ್ರವಾಗಿ ಗಾಯಗೊಂಡಿ ರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.

ಮೈಸೂರಿನ ನಂಜುಮಳಿಗೆ ನಿವಾಸಿ ರವಿ ಮೃತಪಟ್ಟ ಯುವಕ. ಉಳಿದಂತೆ ಪ್ರಜ್ವಲ್, ಭಾಸ್ಕರ್, ಗಿರೀಶ, ಶರತ್, ಹರೀಶ್ ಹಾಗೂ ಶಂಭು ಎಂಬುವವರು ತೀವ್ರವಾಗಿ ಗಾಯ ಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ.

ಘಟನೆ ವಿವರ: ಮೃತ ರವಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೈಕ್‍ನಲ್ಲಿ ಪಾಂಡವ ಪುರ ಪಟ್ಟಣದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ರೈಲ್ವೆ ನಿಲ್ದಾಣದಿಂದ ಪಾಂಡವಪುರಕ್ಕೆ ಆಗಮಿಸುತ್ತಿದ್ದ ಎರಡು ಬೈಕ್‍ಗಳ ನಡುವೆ ತಾಲೂಕಿನ ಹರಳಹಳ್ಳಿ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಮೈಸೂರು ಕಡೆಗೆ ತೆರಳುತ್ತಿದ್ದ ರವಿ ತೀವ್ರವಾಗಿ ಗಾಯ ಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಇತರೆ ಆರು ಯುವಕರು ತೀವ್ರವಾಗಿ ಗಾಯಗೊಂಡಿ ದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಚಿಂತಾ ಜನಕವಾಗಿದೆ ಎಂದು ತಿಳಿದು ಬಂದಿದೆ.

ಪಾಂಡವಪುರ ಪಟ್ಟಣದ ಉಪವಿಭಾ ಗೀಯ ಆಸ್ಪತ್ರೆಯಲ್ಲಿ ಮೃತ ಯುವಕನ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ಒಪ್ಪಿಸಲಾಗಿದೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಬುಲೆನ್ಸ್‍ಗಾಗಿ ಗಂಟೆಗಳ ಕಾಲ ಕಾಯ್ದರು: ಅಪಘಾತ ಸಂಭವಿಸಿ ಗಾಯಗೊಂಡ ಎಲ್ಲರಿಗೂ ಪಾಂಡವಪುರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಎಲ್ಲರೂ ಮೂಳೆ ಮುರಿತಕ್ಕೆ ಒಳಗಾಗಿ ಗಂಭೀರ ವಾಗಿ ಗಾಯಗೊಂಡಿದ್ದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲರನ್ನೂ ತಕ್ಷಣ ಮೈಸೂರಿಗೆ ರವಾನಿಸಬೇಕಾಗಿತ್ತು. ಈ ವೇಳೆ ಆಂಬುಲೆನ್ಸ್‍ಗೆ ಕರೆ ಮಾಡಿದರೂ ಸುಮಾರು 45 ನಿಮಿಷಗಳ ಕಾಲ ಯಾವುದೇ ಆಂಬುಲೆನ್ಸ್ ಲಭ್ಯವಿರಲಿಲ್ಲ. ಆಸ್ಪತ್ರೆ ಅವರಣದಲ್ಲಿ ಆಂಬುಲೆನ್ಸ್ ಲಭ್ಯವಿತ್ತಾದರೂ ಅದಕ್ಕೆ ಚಾಲಕ ಇರಲಿಲ್ಲ. ಹೀಗಾಗಿ ಸುಮಾರು 45 ನಿಮಿಷಗಳ ತಡವಾಗಿ ಆಗಮಿಸಿದ ಆಂಬುಲೆನ್ಸ್‍ಗಳಲ್ಲಿ ಗಾಯಾಳುಗಳನ್ನು ಮೈಸೂರಿಗೆ ರವಾನಿಸಲಾಯಿತು.

Translate »