ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳಿಗೆ ಕೊರೊನಾ  ವಾರಿಯರ್ಸ್ ನೇಮಿಸಲು ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳಿಗೆ ಕೊರೊನಾ ವಾರಿಯರ್ಸ್ ನೇಮಿಸಲು ಆಗ್ರಹಿಸಿ ಪ್ರತಿಭಟನೆ

April 5, 2022

ಚಾಮರಾಜನಗರ, ಏ.4- ಕೊರೊನಾ ವಾರಿಯರ್ಸ್‍ಗಳಾಗಿ ನೇಮಕವಾಗಿರುವ ಆರೋಗ್ಯ ಇಲಾಖೆಯ 6,463 ನೌಕರರನ್ನು ಇಲಾಖೆಯ ಖಾಲಿಯಿರುವ ಹುದ್ದೆಗಳಿಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘ ಹಾಗೂ ಎನ್‍ಎಸ್ ಯುಐ ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್‍ಗಳು ಪ್ರತಿಭಟನೆ ನಡೆಸಿದರು. ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸಮಾವೇಶ ಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ, ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿ ಯಿಂದ ಕೊರೊನಾ ವಾರಿಯರ್ಸ್‍ಗಳಾಗಿ ಕೆಲಸ ಮಾಡಿರುವ ನಮ್ಮನ್ನು ಇಲಾಖೆಯ ಖಾಲಿ ಇರುವ ಹುದ್ದೆಗಳಿಗೆ ನೇಮಿಸಿ, ಕೆಲಸದಲ್ಲಿ ಮುಂದು ವರಿಸಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು. ಹಲವು ಜಿಲ್ಲೆಗಳಲ್ಲಿ ಬಾಕಿ ಉಳಿಸಿ ಕೊಂಡಿರುವ ವೇತನ ಹಾಗೂ ಸರ್ಕಾರ ಘೋಷಿಸಿದ ಕೋವಿಡ್ ವಿಶೇಷ ಪ್ರೋತ್ಸಾಹ ಧನವನ್ನು ತಕ್ಷಣವೇ ಬಿಡುಗಡೆಗೊಳಿಸ ಬೇಕು ಎಂದು ಒತ್ತಾಯಿಸಿದರು.

ಕೋವಿಡ್-19 ಮಹಾಮಾರಿ ದೇಶ ವ್ಯಾಪಿ ಆವರಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಯಾದಂತಹ ಸಂದರ್ಭದಲ್ಲಿ ಸರ್ಕಾ ರವು ಮುತುವರ್ಜಿವಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಷಕರು, ಲ್ಯಾಬ್ ಟೆಕ್ನಿಷಿ ಯಲ್, ಅರವಳಿಕೆ ತಜ್ಞರು, ಫಾರ್ಮಾ ಸಿಸ್ಟ್, ಡೇಟಾ ಎಂಟ್ರಿ ಅಪರೇಟರ್, ಕಿರಿಯ ಮಹಿಳಾ/ ಪುರುಷ ಆರೋಗ್ಯ ಸಹಾಯಕರು ಮತ್ತು ‘ಡಿ’ ಗ್ರೂಪ್ ಹುದ್ದೆ ಗಳನ್ನು ನೇಮಕ ಮಾಡಲಾಗಿತ್ತು ಎಂದರು. ಇದರೊಂದಿಗೆ ಸರ್ಕಾರದ ವಿವಿಧ ಆದೇಶಗಳ ಮೂಲಕ ಹೆಚ್ಚುವರಿ ಹುದ್ದೆ ಗಳನ್ನು ಸೃಷ್ಟಿಸಿ ಮುಂದಿನ ಖಾಯಂ ನೇಮಕಾತಿ ಆಗುವವರೆಗೂ ನಮ್ಮನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇಲಾಖೆಗೆ ನೇಮಕಗೊಂಡ ನಾವು ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಬಳಿಕ, ನಮ್ಮ ಸಂಘದ ಮೂಲಕ ಮಾರ್ಚ್‍ನಲ್ಲಿ ನಮ್ಮನ್ನು ಮುಂದುವರಿಸಬೇಕು ಎಂದು ಮನವಿ ಸಲ್ಲಿಸಿದಾಗ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಇಲಾಖೆಯಿಂದ ಭರವಸೆ ನೀಡಲಾಗಿತ್ತು. ಆದರೆ, ಮಾ. 31ರಂದು ನಮ್ಮನ್ನು ಮುಂದುವರೆಸಲಾ ಗದು ಎಂಬ ಇಲಾಖೆ ಆದೇಶಿಸಿದ್ದು, ನಮಗೆ ಆಘಾತ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಾವು ಕೆಲಸದ ಮೇಲೆ ನಂಬಿಕೆಯಿಟ್ಟು ಕೊಂಡು ಬದುಕು ಕಟ್ಟಿಕೊಂಡಿದ್ದೇವೆ. ಇಡೀ ಕುಟುಂಬಗಳು ಇದರ ಮೇಲೆ ಅವಲಂಬಿ ತವಾಗಿವೆ. ಅಲ್ಲದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿಯಿದ್ದು, ನಮ್ಮ ಸೇವೆಗ ಳನ್ನು ಪರಿಗಣಿಸಿ ನಮ್ಮನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ಮೋಹನ್, ವಾರಿಯರ್ಸ್ ಗಳಾದ ವಿಕಾಸ್, ಜೀವನ್ ಅರುಣ್, ಶಿವು, ಜೀವಿತ, ದುಂಡುಶೆಟ್ಟಿ, ರಂಜನ್, ರಶ್ಮಿ, ರಾಧಿಕಾ, ಕನ್ಯಾಕುಮಾರಿ, ಜ್ಯೋತಿ, ಎಂ.ಸಿದ್ದರಾಜು, ಮಹದೇವಸ್ವಾಮಿ, ಅಶೋಕ್, ಸ್ವಾಮಿ, ಮಂಜುನಾಥ್ ಇತತರು ಪಾಲ್ಗೊಂಡಿದ್ದರು.

Translate »