ಶಿವಕುಮಾರ ಸ್ವಾಮಿಗಳ ಮಾರ್ಗದಲ್ಲಿ ಮೋದಿ
ಮೈಸೂರು

ಶಿವಕುಮಾರ ಸ್ವಾಮಿಗಳ ಮಾರ್ಗದಲ್ಲಿ ಮೋದಿ

April 3, 2022

ಗೃಹ ಸಚಿವ ಅಮಿತ್ ಷಾ ಪ್ರತಿಪಾದನೆ

ದೇಶಾದ್ಯಂತ ಶ್ರೀಗಳ ಸೇವಾ ಶ್ರೇಷ್ಠತೆಗಳಾದ ಅನ್ನ, ಅಕ್ಷರ, ವಸತಿ ವಿಸ್ತರಣೆಗೆ ನರೇಂದ್ರ ಮೋದಿ ಅವಿರತ ಪ್ರಯತ್ನ

ಸಿದ್ದಗಂಗೆಯಲ್ಲಿ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ ಮಹಾಚೇತನಕ್ಕೆ ಅಮಿತ್ ಷಾ ನಮನ

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶುಕ್ರವಾರ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳ ೧೧೫ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು.

ತುಮಕೂರು, ಏ. ೧- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರು ತೋರಿಸಿದ ಹಾದಿ ಯಲ್ಲಿ ಸಾಗುತ್ತಿದ್ದು, ಉಚಿತ ಅನ್ನ, ಶಿಕ್ಷಣ ಮತ್ತು ವಸತಿ ಸೌಲಭ್ಯವನ್ನು ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳ ೧೧೫ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ೮೮ ವರ್ಷಗಳ ಕಾಲ ಅವಿರತ ಸೇವೆ ಸಲ್ಲಿಸಿ ೧೧೧ನೇ ವಯಸ್ಸಿನಲ್ಲಿ, ೨೦೧೯ರಲ್ಲಿ ಲಿಂಗೈಕ್ಯರಾದ ಶ್ರೀಗಳ ಸೇವೆಯನ್ನು ಶ್ಲಾಘಿಸಿದರು.
ಪ್ರತಿದಿನ ೧೦ ಸಾವಿರ ಮಕ್ಕಳಿಗೆ ಆಹಾರ ನೀಡು ವುದು, ಅವರಿಗೆ ಉಚಿತ ಶಿಕ್ಷಣ ಮತ್ತು ಆಶ್ರಯ ನೀಡುವುದು ‘ಕರ್ಮಯೋಗಿ’ಯಿಂದ ಮಾತ್ರ ಸಾಧ್ಯ ಎಂದ ಅವರು, ೧೨ನೇ ಶತಮಾನದ ಸಮಾಜ ಸುಧಾ ರಕ ಬಸವೇಶ್ವರರ ಬೋಧನೆಯನ್ನು ಶ್ರೀಗಳು ಜಾರಿಗೆ ತಂದರು. ಅಲ್ಲದೆ ಮಠವನ್ನು ಜನರ ಉನ್ನತಿಯ ಕೇಂದ್ರವನ್ನಾಗಿ ಮಾಡಿದರು ಎಂದು ಹೇಳಿದರು. ಈ ಮಠದಲ್ಲಿ ಯಾರೂ ಹಸಿವಿನಿಂದ ಇರುವುದಿಲ್ಲ. ಸಮಾಜದ ಜಾತಿ-ಮತ ಭೇದವಿಲ್ಲದೇ ೧೦ ಸಾವಿರ ಮಕ್ಕಳು ಪ್ರತಿದಿನ ಆಹಾರ, ಶಿಕ್ಷಣ ಮತ್ತು ವಸತಿ ಪಡೆಯುತ್ತಿದ್ದಾರೆ. ಅದೇ ರೀತಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವೂ ಶಿವಕುಮಾರ ಸ್ವಾಮೀಜಿಯವರ ತತ್ವಗಳನ್ನು ದೇಶಾದ್ಯಂತ ಜಾರಿಗೆ ತಂದಿದೆ. ಬಡವರಿಗೆ ಉಚಿತವಾಗಿ ಐದು ಕೆಜಿ ಅಕ್ಕಿ ನೀಡುತ್ತಿದ್ದೇವೆ. ಹೊಸ ರಾಷ್ಟಿçÃಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣಕ್ಕೆ ಹೊಸ ಆಯಾಮವನ್ನು ನೀಡಿ ದ್ದೇವೆ. ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ವನ್ನು ಯಾರು ಬೇಕಾದರೂ ಅವರದೇ ಭಾಷೆಯಲ್ಲಿ ಪಡೆಯಬಹುದು. ಕಳೆದ ಏಳು ವರ್ಷಗಳಲ್ಲಿ ಮೂರು ಕೋಟಿ ಜನರಿಗೆ ಸೂರು ಕಲ್ಪಿಸಿ ಕೊಡಲಾಗಿದೆ ಎಂದು ಶಾ ಹೇಳಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ೮೦ ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡಲಾಗಿದೆ. ಸಮಾಜದ ಪ್ರತಿಯೊಂದು ವರ್ಗವೂ ಪ್ರಗತಿ ಹೊಂದಲು ಕೇಂದ್ರವು ಶ್ರಮಿಸುತ್ತಿದೆ ಎಂದ ಅಮಿತ್ ಷಾ, ಭಾರತವು ಪ್ರಾಚೀನ ರಾಷ್ಟçವಾಗಿದ್ದು, ಭೌಗೋಳಿಕ ಸ್ಥಳಗಳು ಮತ್ತು ಗುಣ ಮಟ್ಟವನ್ನು ಆಧರಿಸಿ ಅನೇಕ ಯಾತ್ರಾ ಕೇಂದ್ರಗಳು ಹುಟ್ಟಿಕೊಂಡಿವೆ. ಆದಾಗ್ಯೂ, ಕೆಲವು ಸಂತರ ಉತ್ತಮ ಕಾರ್ಯದಿಂದ ಹೊಸ ಯಾತ್ರಾ ಕೇಂದ್ರಗಳು ಸಹ ಬಂದಿವೆ. ಅಂತಹ ಒಂದು ಕೇಂದ್ರವು ಸಿದ್ದಗಂಗಾ ಮಠವಾಗಿದ್ದು, ಅಲ್ಲಿ ಶಿವ ಕುಮಾರ ಸ್ವಾಮೀಜಿ ಅವರು ಬಸವೇಶ್ವರರ ಉಪದೇಶ ವನ್ನು ಜಾರಿಗೆ ತಂದಿದ್ದಾರೆ ಎಂದರು. ಇದಕ್ಕೂ ಮುನ್ನ ಷಾ ಅವರು ಶಿವಕುಮಾರಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು.

Translate »