ಮೈಸೂರು, ಅ.28 (ಆರ್‍ಕೆಬಿ)- ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ವಯೋಮಾನದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಂಡು ಬರುತ್ತಿದ್ದು, ಇದೀಗ ಮಧ್ಯಮ ವಯಸ್ಸಿನ ಯುವತಿಯರಲ್ಲೂ ಕಂಡು ಬರುತ್ತಿದೆ ಎಂದು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಇನ್ಸ್‍ಟಿ ಟ್ಯೂಟ್‍ನ ಆಂಕಾಲಜಿಸ್ಟ್ ಡಾ.ವೈ. ಎಸ್.ಮಾಧವಿ ಆತಂಕ ವ್ಯಕ್ತಪಡಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸ್ತನ ಕ್ಯಾನ್ಸರ್ ಮುಖ್ಯ ವಾಗಿ ಮಹಿಳೆಯರಲ್ಲಿ ಬರುವ ಕಾಯಿಲೆ ಯಾದರೂ, ಪುರುಷರಲ್ಲಿಯೂ ಕಾಣ ಬಹುದು. ಇಂತಹ ಸಂದರ್ಭದಲ್ಲಿ ಮಹಿಳೆ ಯರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಶಿಕ್ಷಣ ಹಾಗೂ ಮಾಹಿತಿ ನೀಡುವುದು ಮುಖ್ಯ ವಾಗುತ್ತದೆ ಎಂದು ಹೇಳಿದರು.
ಸ್ತನ ಕ್ಯಾನ್ಸರ್ ಅಂಶಗಳನ್ನು 3 ವರ್ಗ ಗಳಾಗಿ ವಿಂಗಡಿಸಬಹುದು. 11 ವರ್ಷಕ್ಕೆ ಮೊದಲೇ ಋತುಮತಿಯಾದವರಲ್ಲಿ, 55 ವರ್ಷ ಮೇಲ್ಟಟ್ಟವರಲ್ಲಿ, ಮಕ್ಕಳಿಲ್ಲದೆ ಹಾರ್ಮೊನ್ ರೀಪ್ಲೇಸ್‍ಮೆಂಟ್ ಥೆರಪಿಗೆ ಒಳಗಾದವರು, 35 ವರ್ಷದ ನಂತರ ಮೊದಲ ಮಗು ಪಡೆದವರಲ್ಲಿ ಸ್ತನ ಕ್ಯಾನ್ಸರ್ ತೊಂದರೆ ಸ್ವಲ್ಪ ಹೆಚ್ಚಾಗಿರುತ್ತದೆ. ಅದರಲ್ಲಿ ಎಲ್ಲವೂ ಗಂಟುಗಳಾಗಿರದೆ, ಕೆಲವು ಸೌಮ್ಯ ಗಂಟುಗಳೂ ಇರುತ್ತವೆ. ಯಾವ ಗಂಟು ಸ್ತನ ಕ್ಯಾನ್ಸರ್ ಆಗಿ ಪರಿ ವರ್ತನೆಗೊಳ್ಳುತ್ತದೆ ಎಂದರು.
ಹದಿಹರೆಯ ಮತ್ತು ಪ್ರೌಢಾವಸ್ಥೆ ಯಿಂದಲೇ ಉತ್ತಮ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಬೇಕು. ಸ್ಥಳೀಯವಾಗಿ ಹಣ್ಣು, ಹಸಿರು ತರಕಾರಿ ಹೆಚ್ಚು ಬಳಸ ಬೇಕು. ಮಾಂಸ ಬಳಕೆ ಕಡಿಮೆ ಮಾಡ ಬೇಕು. ದೈಹಿಕ ವ್ಯಾಯಾಮ ಅಗತ್ಯ. ತಂಬಾಕು, ಮದ್ಯಪಾನ ತಪ್ಪಿಸಿ, ಉತ್ತಮ ಜೀವನಶೈಲಿ ರೂಢಿಸಿಕೊಂಡರೆ ಸ್ತನ ಕ್ಯಾನ್ಸರ್ ಕಡಿಮೆ ಮಾಡಬಹುದು ಎಂದು ಹೇಳಿದರು.
ಸೂಕ್ತ ತಪಾಸಣೆ, ಚಿಕಿತ್ಸೆ, ಕಾಲ ಕಾಲಕ್ಕೆ ಸ್ಕ್ರೀನಿಂಗ್ ಮಾರ್ಗದರ್ಶನ ಪಡೆಯಬೇಕು. ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಪರಿಣಾಮಕಾರಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು. ಸಾವಿನ ಪ್ರಮಾಣ ಕಡಿಮೆ ಮಾಡಬಹುದು ಎಂದರು. ಆಸ್ಪತ್ರೆಯ ಸಿಒಒ ನಿರ್ಮಲಾ ಕೃಷ್ಣಮೂರ್ತಿ ಇದ್ದರು.