ಪ್ರತಿಯೊಬ್ಬರೂ ಜನನ-ಮರಣ  ಪ್ರಮಾಣ ಪತ್ರ ಪಡೆಯುವುದು ಅವಶ್ಯ
ಮೈಸೂರು

ಪ್ರತಿಯೊಬ್ಬರೂ ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಅವಶ್ಯ

November 11, 2021

ಮೈಸೂರು,ನ.10(ಆರ್‍ಕೆ)- ಪ್ರತಿ ಯೊಬ್ಬರೂ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವುದು ಅವಶ್ಯವೆಂದು ಮೈಸೂರು ನ್ಯಾಯಾಲಯದ ನ್ಯಾಯಾಧೀಶೆ ಕೆ.ವಿದ್ಯಾ ಅವರು ಸಲಹೆ ನೀಡಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ವಕೀಲರ ಸಂಘ, ಮೈಸೂರು ನಗರ ಪೊಲೀಸ್ ಹಾಗೂ ಆಲನಹಳ್ಳಿ ಪೊಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಆಲನಹಳ್ಳಿಯಲ್ಲಿರುವ ವೈದ್ಯರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ‘ಕಾನೂನು ಅರಿವು-ನೆರವು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದು ಮನುಷ್ಯನ ಜೀವನದಲ್ಲಿ ಪ್ರತಿ ಯೊಂದು ವ್ಯವಹಾರಕ್ಕೂ ಜನನ ಮತ್ತು ಮರಣ ಪ್ರಮಾಣ ಪತ್ರ ಅತ್ಯಗತ್ಯವಾಗಿರುತ್ತದೆ, ಸರಿಯಾದ ಮಾಹಿತಿ ನೀಡಿ ನೋಂದಣಿ ಮಾಡಿಸಬೇಕು, ಹೆಸರು, ತಂದೆ ಹೆಸರು, ವಿಳಾಸ ಮತ್ತಿತರ ಮಾಹಿತಿಗಳಲ್ಲಿ ವ್ಯತ್ಯಾಸ ವಿದ್ದರೂ ಅದನ್ನು ಸರಿಪಡಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಬೇಕಾಗು ತ್ತದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿ ಹಲವು ವರ್ಷ ಗಳಿಂದ ಬಾಕಿ ಇರುವ, ರಾಜೀ ಮಾಡಿ ಕೊಳ್ಳಬಹುದಾದಂತಹ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಲೋಕ ಅದಾಲತ್‍ನಲ್ಲಿ ಅವಕಾಶವಿರುವುದರಿಂದ ಈ ಅವಕಾಶ ವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಹಾಗೂ ಉಚಿತ ಕಾನೂನು ನೆರವನ್ನೂ ನೀಡ ಲಾಗುತ್ತಿದೆ. ಕೌಟುಂಬಿಕ ಕಲಹ, ಕಾರ್ಮಿಕ ರಿಗೆ ತೊಂದರೆಯಾದಲ್ಲಿ, ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ, ಎಸ್ಸಿ-ಎಸ್ಟಿ ಸಮುದಾಯಗಳಿಗೆ ಸಂಬಂಧಿಸಿದ ವ್ಯಾಜ್ಯ ಗಳನ್ನು ಸುಲಭವಾಗಿ ಇತ್ಯರ್ಥಪಡಿಸಿಕೊಂಡು ಶಾಂತಿಯುತವಾಗಿ ಜೀವನ ನಡೆಸಬೇ ಕೆಂಬ ಸದುದ್ದೇಶದಿಂದ ಕಾನೂನು ಸೇವೆ ಗಳ ಪ್ರಾಧಿಕಾರವು ಹಲವು ಕಾರ್ಯಕ್ರಮ ಗಳನ್ನು ಆಯೋಜಿಸುತ್ತಿದೆ ಎಂದ ನ್ಯಾಯಾ ಧೀಶರು, ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲೆಂದೇ ಅಕ್ಟೋಬರ್ 2ರಿಂದ ನವೆಂಬರ್ 14ರವರೆಗೂ ಕಾನೂನು-ಅರಿವು ಕಾರ್ಯಕ್ರಮ ನಡೆಯಲಿದೆ ಎಂದರು. ವಕೀಲ ಎಸ್.ವಿ.ಸಂಗಮೇಶ್ವರನ್, ದೇವರಾಜ ಉಪ ವಿಭಾಗದ ಎಸಿಪಿ ಶಶಿಧರ್, ನಿವೃತ್ತ ಎಸಿಪಿ ಉಮೇಶ ಜಿ.ಸೇಟ್, ಆಲನಹಳ್ಳಿ ಠಾಣೆ ಇನ್‍ಸ್ಪೆಕ್ಟರ್ ರವಿಶಂಕರ್, ಸಬ್‍ಇನ್‍ಸ್ಪೆಕ್ಟರ್ ಅಂಬಮ್ಮ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »