ಮಕ್ಕಳ ದಿನಾಚರಣೆ ಪ್ರಯುಕ್ತ `ಮುದ್ದು  ಕಂದ 2021’ ಮಕ್ಕಳ ಭಾವಚಿತ್ರ ಸ್ಪರ್ಧೆ
ಮೈಸೂರು

ಮಕ್ಕಳ ದಿನಾಚರಣೆ ಪ್ರಯುಕ್ತ `ಮುದ್ದು ಕಂದ 2021’ ಮಕ್ಕಳ ಭಾವಚಿತ್ರ ಸ್ಪರ್ಧೆ

November 11, 2021

ಮೈಸೂರು, ನ.10(ಆರ್‍ಕೆಬಿ)- ಮಕ್ಕಳ ದಿನಾಚರಣೆ ಅಂಗ ವಾಗಿ ಜೀವಧಾರ ಚಾರಿಟಬಲ್ ಟ್ರಸ್ಟ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ `ಮುದ್ದು ಕಂದ 2021’ ಫೋಟೋ ಸ್ಪರ್ಧೆ ಆಯೋಜಿಸಿದೆ. 5ರಿಂದ 10 ವರ್ಷದೊಳಗಿನ ಮಕ್ಕಳು ಸ್ಪರ್ಧೆ ಯಲ್ಲಿ ಭಾಗವಹಿಸಬಹುದಾಗಿದೆ. ಭಾರತದ ಯಾವುದೇ ಪ್ರಾಂತ್ಯದ ಸಂಸ್ಕøತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಉಡುಪು ಧರಿಸಿರುವ ಫೋಟೋ ಕಳಿಸಬಹುದಾಗಿದೆ. ಫೋಟೋ ಕಳುಹಿಸಲು ನ.15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ 9880752727, 9844613407 ಸಂಪರ್ಕಿಸಬಹುದು.

ಪ್ರಚಾರ ಸಾಮಗ್ರಿ ಬಿಡುಗಡೆ: `ಮುದ್ದು ಕಂದ 2021’ ಫೋಟೋ ಸ್ಪರ್ಧೆಯ ಪ್ರಚಾರ ಸಾಮಗ್ರಿಗಳನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ಕೌಟಿಲ್ಯ ರಘು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ನಮ್ಮ ಸಂಸ್ಕøತಿ ಹಿಂದೂ ಧರ್ಮದ ಹಿರಿಮೆಯನ್ನು ಹೆಚ್ಚಿಸಿದೆ. ಪೋಷಕರು ತಮ್ಮ ಮಕ್ಕಳನ್ನು ದೇಶದ ಭವಿಷ್ಯದ ಆಸ್ತಿಯಾಗಿ ರೂಪಿಸಬೇಕು. ಕಳೆದ 10 ವರ್ಷದ ಹಿಂದೆ ಶಿಕ್ಷಣ ಪಡೆದ ಮಕ್ಕಳು ಹೊರದೇಶಕ್ಕೆ ಉದ್ಯೋಗಕ್ಕೆ ಹೋಗುತ್ತಿದ್ದರು. ಆದರೆ ಇಂದು ದೇಶದ ಸಂಸ್ಕøತಿಯ ಜವಾಬ್ದಾರಿ ಅರಿತು ಇಲ್ಲಿಯೇ ವಿದೇಶಿಗರಿಗೆ ಕೆಲಸ ಕೊಡಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಹೀಗಾಗಿ ಭಾರತ ವಿಶ್ವಮಟ್ಟದಲ್ಲಿ ಬೆಳೆಯುತ್ತಿದೆ ಎಂದರು. ಈ ವೇಳೆ ಅಂಕಣಕಾರ ಡಾ.ರಂಗನಾಥ್, ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಜೋಗಿ ಮಂಜು, ಮುಡಾ ಸದಸ್ಯರಾದ ಲಕ್ಷ್ಮೀದೇವಿ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೇಬಲ್ ಮಹೇಶ್, ಅಜಯ್‍ಶಾಸ್ತ್ರಿ, ಯೋಗೇಶ್ ಉಪಸ್ಥಿತರಿದ್ದರು.

Translate »