ನ.23, ಕಲಾ ಬಳಗದಿಂದ  ಪುನೀತ್‍ಗೆ ಗಾನ ಶ್ರದ್ಧಾಂಜಲಿ
ಮೈಸೂರು

ನ.23, ಕಲಾ ಬಳಗದಿಂದ ಪುನೀತ್‍ಗೆ ಗಾನ ಶ್ರದ್ಧಾಂಜಲಿ

November 11, 2021

ಮೈಸೂರು, ನ.10(ಆರ್‍ಕೆಬಿ)- ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಮೈಸೂರಿನ ಗಾನಗಂಧರ್ವ ಕಲಾ ಬಳಗ ಟ್ರಸ್ಟ್ ವತಿಯಿಂದ ನ.23ರಂದು ಸಂಜೆ 4 ಗಂಟೆಗೆ ಗಾನ ಭಾರತಿ ವೀಣೆ ಶೇಷಣ್ಣ ಸಭಾ ಭವನದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಸೌಭಾಗ್ಯ ಪ್ರಭು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ, ನುಡಿ ನಮನ, ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ, ಕಲಾವಿದರಿಂದ ರಾಜ್‍ಕುಮಾರ್ ಕುಟುಂಬ ದವರು ನಟಿಸಿರುವ ಚಲನಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಅಗಲಿದ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಹಲವು ದಶಕಗಳ ಕಾಲ ಸತತವಾಗಿ ನಿರೂಪಣೆ ಮಾಡಿದ ಮೈಕ್ ಚಂದ್ರು ಅವರಿಗೂ ಶ್ರದ್ಧಾಂ ಜಲಿ ಸಲ್ಲಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಎಲ್.ಚಂದ್ರಶೇಖರ್, ಸ್ವಾಮಿ ಕುಮಾರ್, ಕುಮಾರಸ್ವಾಮಿ, ಚಂದ್ರಶೇಖರ್ ಉಪಸ್ಥಿತರಿದ್ದರು.

Translate »