ಅಂಧತ್ವ ಮೆಟ್ಟಿನಿಂತ ನಂದಿನಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೇರು ಸಾಧನೆ
ಮೈಸೂರು

ಅಂಧತ್ವ ಮೆಟ್ಟಿನಿಂತ ನಂದಿನಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೇರು ಸಾಧನೆ

August 12, 2020

ಮೈಸೂರು, ಆ.11(ಆರ್‍ಕೆಬಿ)- ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬು ದಕ್ಕೆ ಮೈಸೂರಿನ ಗ್ರಾಮೀಣ ಪ್ರತಿಭೆಯೊಬ್ಬಳು ಸಾಕ್ಷಿಯಾಗಿದ್ದಾಳೆ. ಅಂಧತ್ವದಲ್ಲಿಯೂ ಇಡೀ ಶಾಲೆಗೆ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ.

ಮೈಸೂರು ಜಿಲ್ಲೆಯ ಹುಣ ಸೂರು ತಾಲೂಕಿನ ಅರಸು ಕಲ್ಲಹಳ್ಳಿಯ ಪ್ರಕಾಶ್ ಮತ್ತು ಭಾಗ್ಯ ದಂಪತಿ ಪುತ್ರಿ ನಂದಿನಿ, ಹುಟ್ಟುವಾಗಲೇ ದೃಷ್ಟಿ ಕಳೆದುಕೊಂಡಿದ್ದಾಳೆ. ಆದರೂ ಛಲಬಿಡದೆ ಆತ್ಮವಿಶ್ವಾಸದಿಂದ ಮುನ್ನುಗ್ಗುವ ಮನ ಸ್ಥಿತಿ ಹೊಂದಿದ್ದಾಳೆ. ಈಕೆ ಒಂದರಿಂದ 3ನೇ ತರಗತಿವರೆಗೆ ಹುಟ್ಟೂ ರಿನಲ್ಲೇ ವ್ಯಾಸಂಗ ಮಾಡಿ ದ್ದಾಳೆ. ಈಕೆ ದೃಷ್ಟಿ ಹೀನತೆಯಿಂದ ಬಳಲು ತ್ತಿರುವುದನ್ನು ಕಂಡ ಮೈಸೂರಿನ ಮೇಟಗಳ್ಳಿಯ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯ ಸಿಬ್ಬಂದಿ, ಈಕೆಯನ್ನು ಶಾಲೆಗೆ ಕರೆದೊಯ್ದು ಬ್ರೈಲ್ ಲಿಪಿ ಕಲಿಕಾ ವಿಧಾನ ರೂಢಿಸಿದರು. ವಾಕ್ ಮತ್ತು ಶ್ರವಣ ಮಾಧ್ಯಮದಲ್ಲಿ ವ್ಯಾಸಂಗ ಪಡೆದ ನಂದಿನಿ ಇದೀಗ ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ 576 ಅಂಕ (ಶೇ.92.16) ಪಡೆಯುವ ಮೂಲಕ ಇಡೀ ರಂಗರಾವ್ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಅಲ್ಲದೆ ಕಳೆದ 7 ವರ್ಷಗಳ ಬಳಿಕ ಶಾಲೆಯಲ್ಲಿ ಅತ್ಯುನ್ನತ ಫಲಿತಾಂಶ ಪಡೆ ಯುವ ಮೂಲಕ ಇಡೀ ಶಾಲೆಗೆ ಮಾದರಿ ವಿದ್ಯಾರ್ಥಿನಿಯಾಗಿ ಹೊರ ಹೊಮ್ಮಿದ್ದಾಳೆ. ನಂದಿನಿಯ ತಂದೆ ತಾಯಿ ಕೃಷಿ ಕುಟುಂಬದ ಹಿನ್ನೆಲೆಯವರಾಗಿದ್ದು, ಮಗಳ ವಿದ್ಯಾಭ್ಯಾಸಕ್ಕೆ ಅಂಧತ್ವ ಅಡ್ಡಿ ಯಾಗಿಲ್ಲ. ಸದಾ ಲವಲವಿಕೆಯಿಂದಿರುವ ನನ್ನ ಮಗಳ ಸಾಧನೆಗೆ ರಂಗರಾವ್ ಅಂಗವಿಕಲರ ಶಾಲೆಯ ಶಿಕ್ಷಕರ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ ಈಕೆಯ ಪೋಷಕರು.

Translate »