ಮುಕ್ತ ವಿವಿಗೆ ಯುಜಿಸಿಯಿಂದ ಅತ್ಯುತ್ತಮ ಶ್ರೇಯಾಂಕ
ಮೈಸೂರು

ಮುಕ್ತ ವಿವಿಗೆ ಯುಜಿಸಿಯಿಂದ ಅತ್ಯುತ್ತಮ ಶ್ರೇಯಾಂಕ

January 26, 2022

ಮೈಸೂರು,ಜ.25(ಆರ್‍ಕೆ)-ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾ ನಿಲಯಕ್ಕೆ `ವಿಶ್ವ ವಿದ್ಯಾ ನಿಲಯಗಳ ಅನುದಾನ ಆಯೋಗ (ಯುಜಿಸಿ)’ವು ದೂರ ಶಿಕ್ಷಣದ ಮೌಲ್ಯ ಮಾಪನದಲ್ಲಿ ಅತ್ಯುನ್ನತ ಶ್ರೇಯಾಂಕ ಪ್ರಕಟಿಸಿದೆ.

2018-19ನೇ ಸಾಲಿ ನಲ್ಲಿ ಯುಜಿಸಿ ದೂರ ಶಿಕ್ಷಣ ಸಂಸ್ಥೆಯವರು ದೇಶದಲ್ಲಿರುವ ದೂರ ಶಿಕ್ಷಣ ವಿಶ್ವ ವಿದ್ಯಾನಿಲಯಗಳ ಮೌಲ್ಯಮಾಪನ ನಡೆಸಿದ್ದರ ಫಲಿತಾಂಶ ಪ್ರಕಟವಾಗಿದ್ದು, ಆ ಪೈಕಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯವು ನಡೆಸುತ್ತಿರುವ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ವೇಳೆ ಪ್ರೊ.ಡಿ.ಶಿವಲಿಂಗಯ್ಯ ಕುಲಪತಿಯಾಗಿದ್ದರು. ನಿಗದಿಯಾಗಿದ್ದ 400 ಅಂಕಗಳ ಪೈಕಿ ಮುಕ್ತ ವಿಶ್ವವಿದ್ಯಾಲಯಕ್ಕೆ 300 ಅಂಕ ಲಭಿಸಿದ್ದು, ಅದರಲ್ಲಿ ಅಧ್ಯಾ ಪಕರ ಶ್ರೇಣಿಯಲ್ಲಿ 20ಕ್ಕೆ ಶೇ.19.5, ಆಂತರಿಕ ಗುಣಮಟ್ಟಕ್ಕೆ 10ಕ್ಕೆ 9 ಅಂಕ ಲಭಿಸಿದೆ. ದಾಖಲಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ 20ಕ್ಕೆ 20 ಅಂಕ ನೀಡಿರುವ ಯುಜಿಸಿಯು ಅತ್ಯುನ್ನತ ಶ್ರೇಯಾಂಕ ನೀಡಿದೆ. ಶೈಕ್ಷಣಿಕ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಕಾರ್ಯ ಗಳ ಪರಿಗಣಿಸಿ ಯುಜಿಸಿಯು ವಿಶ್ವವಿದ್ಯಾನಿಲಯಕ್ಕೆ ಅತ್ಯುತ್ತಮ ಶ್ರೇಯಾಂಕ ನೀಡಿದೆ ಎಂದು ಸಿಐಕ್ಯೂಎ ನಿರ್ದೇಶಕ ಡಾ.ಎಸ್.ನಿರಂಜನರಾಜೇ ಅರಸ್ ತಿಳಿಸಿದ್ದಾರೆ. ಪ್ರೊ.ಡಿ. ಶಿವಲಿಂಗಯ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ತಂದುಕೊಡಲು ಸಾಕಷ್ಟು ಶ್ರಮಿಸಿದ್ದರು.

Translate »