ಲಂಡನ್‍ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ  ಫೆಲೋ ಆಗಿ ಪ್ರೊ.ಎಸ್.ಶ್ರೀಕಂಠಸ್ವಾಮಿ ಆಯ್ಕೆ
ಮೈಸೂರು

ಲಂಡನ್‍ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಫೆಲೋ ಆಗಿ ಪ್ರೊ.ಎಸ್.ಶ್ರೀಕಂಠಸ್ವಾಮಿ ಆಯ್ಕೆ

January 26, 2022

ಮೈಸೂರು,ಜ.25(ಪಿಎಂ)- ರಾಸಾಯನಿಕ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಶೈಕ್ಷಣಿಕ ಕೊಡುಗೆ ಪರಿಗಣಿಸಿ ಮೈಸೂರು ವಿವಿಯ ವಸ್ತು ವಿಜ್ಞಾನ ಸ್ನಾತಕೋತ್ತರ ವಿಭಾಗದ (ಎಂ.ಟೆಕ್ ಇನ್ ಮೆಟೀರಿಯಲ್ ಸೈನ್ಸ್) ಸಂಯೋ ಜಕ ಪ್ರೊ.ಎಸ್.ಶ್ರೀಕಂಠಸ್ವಾಮಿ ಅವರನ್ನು ಯುಕೆ ಲಂಡನ್‍ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಫೆಲೋ (ಎಫ್‍ಆರ್‍ಎಸ್‍ಸಿ) ಆಗಿ ಆಯ್ಕೆ ಮಾಡಲಾಗಿದೆ.

ರಾಸಾಯನಿಕ ವಿಜ್ಞಾನ ಕ್ಷೇತ್ರದಲ್ಲಿ ವೃತ್ತಿಪರ ಸಂಶೋಧಕರಾಗಿ ಉನ್ನತ ಮಟ್ಟದ ಸಾಧನೆ ಗುರು ತಿಸಿ ಪ್ರೊ.ಎಸ್.ಶ್ರೀಕಂಠಸ್ವಾಮಿ ಅವರಿಗೆ ಈ ಸ್ಥಾನ ನೀಡಲಾಗಿದೆ. 1841ರಲ್ಲಿ ಸ್ಥಾಪಿತವಾದ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (ಲಂಡನ್) ರಾಸಾಯನಿಕ ವಿಜ್ಞಾನಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವದ ಅತಿದೊಡ್ಡ ಸಂಸ್ಥೆಯಾಗಿದೆ. ರಾಸಾಯನಿಕ ವಿಜ್ಞಾನಿಗಳ ಗಮ ನಾರ್ಹ ಕೊಡುಗೆ ಪರಿಗಣಿಸಿ ಈ ಫೆಲೋ (ಫೆಲೋ ಆಫ್ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ) ನೀಡಲಾಗುತ್ತದೆ.

ಪ್ರೊ.ಶ್ರೀಕಂಠಸ್ವಾಮಿ ಅವರು ಮೆಟೀರಿಯಲ್ಸ್ ಸೈನ್ಸ್, ಪರಿಸರ ವಿಜ್ಞಾನ ಮಾತ್ರವಲ್ಲದೆ, ಕಾರ್ಬನ್ ನ್ಯಾನೋಟ್ಯೂಬ್ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಜೊತೆಗೆ ಗಣನೀಯ ಪ್ರಮಾ ಣದ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ, ಕಾರ್ಬನ್ ಆಧಾರಿತ ವಸ್ತುಗಳ ಮೇಲಿನ ಸಂಶೋಧನೆಯನ್ನೂ ಕೈಗೊಂಡಿದ್ದಾರೆ.

ತ್ಯಾಜ್ಯ ಸಂಸ್ಕರಣೆ, ಫೋಟೋಕ್ಯಾಟಲಿಕ್, ಬಯೋಲಾಜಿಕಲ್, ಎಲೆಕ್ಟ್ರಿಕಲ್, ಆಫ್ಟಿಕಲ್ ಸೇರಿದಂತೆ ಮೊದಲಾದ ಹೊಸ ವಸ್ತುಗಳ ಸಂಶ್ಲೇಷಣೆಗೆ ಇವರು ಪ್ರಮುಖ ಕೊಡುಗೆಗಳನ್ನು ನೀಡಿದ್ದು, ಪರಿಸರದಲ್ಲಿರುವ ಲೋಹಗಳ ನಿವಾರಣೆ ಬಗ್ಗೆಯೂ ವ್ಯಾಪಕ ಕೆಲಸ ಮಾಡಿದ್ದಾರೆ.

ಜಪಾನ್‍ನ `ಟೋಕಿಯೋ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾ ಲಜಿ ಮತ್ತು ರಿಸರ್ಚ್ ಇನ್ಸ್‍ಟಿಟ್ಯೂಟ್ ಆಫ್ ಸೋಲ್ವೋ ಥರ್ಮಲ್ ಟೆಕ್ನಾಲಜಿಯಲ್ಲಿ 2 ವರ್ಷಗಳ ಕಾಲ ಸಂದ ರ್ಶಕ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಲೂ ಇವರನ್ನು ಆಹ್ವಾನಿಸಲಾಗಿತ್ತು. ಇವರು ಅನೇಕ ದೇಶಗಳಿಗೆ ಭೇಟಿ ನೀಡಿದ್ದು, ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕಾರ್ಯಗಳನ್ನು ನಡೆಸಿದ್ದಾರೆ.

2019ರ ಜ.3ರಿಂದ 7ರವರೆಗೆ ಜಲಂಧರ್ ವಿಶ್ವವಿದ್ಯಾ ನಿಲಯದಲ್ಲಿ ನಡೆದ 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‍ನಲ್ಲಿ ಪ್ರೊ.ಡಬ್ಲ್ಯೂ.ಡಿ.ವೆಸ್ಟ್ ಸ್ಮಾರಕ ಪ್ರಶಸ್ತಿ ಪಡೆದಿರುವ ಇವರು, ಮಂಡ್ಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 160ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿರುವ ಇವರು, ಪರಿಸರ ವಿಜ್ಞಾನ ಕ್ಷೇತ್ರದಲ್ಲಿ ನಾಲ್ಕು ಪುಸ್ತಕಗಳನ್ನು ರಚಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ 18 ಸಂಶೋಧನಾ ವಿದ್ಯಾರ್ಥಿಗಳು ಪಿ.ಹೆಚ್‍ಡಿ ಪದವಿ ಪಡೆದಿದ್ದರೆ, ಪ್ರಸ್ತುತ ಎಂಟು ಸಂಶೋಧನಾ ವಿದ್ಯಾರ್ಥಿಗಳು ಪಿ.ಹೆಚ್‍ಡಿ ಕಾರ್ಯದಲ್ಲಿ ತೊಡಗಿಸಿ ಕೊಂಡಿ ದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »