ಸಾರಿಗೆ ವಿಭಾಗಗಳ ವಿಲೀನ ಕೈಬಿಡದಿದ್ದರೆ ಪ್ರತಿಭಟನೆ ಅನಿವಾರ್ಯ
ಮೈಸೂರು

ಸಾರಿಗೆ ವಿಭಾಗಗಳ ವಿಲೀನ ಕೈಬಿಡದಿದ್ದರೆ ಪ್ರತಿಭಟನೆ ಅನಿವಾರ್ಯ

January 26, 2022

ಮೈಸೂರು, ಜ.25(ಆರ್‍ಕೆಬಿ)- ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮೈಸೂ ರಿನಲ್ಲಿರುವ ಮೈಸೂರು ನಗರ ಸಾರಿಗೆ ವಿಭಾಗ ಮತ್ತು ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗಗಳನ್ನು ವಿಲೀನಗೊಳಿಸಿ, ಒಂದೇ ವಿಭಾಗವನ್ನಾಗಿ ಮಾಡಲು ತೀರ್ಮಾನ ಕೈಗೊಂಡಿರುವುದನ್ನು ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಲಸ ಗಾರರ ಸಂಘದ ಮೈಸೂರು ವಿಭಾಗದ ಪದಾಧಿಕಾರಿಗಳು ತೀವ್ರವಾಗಿ ವಿರೋಧಿ ಸಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಸಂಘದ ವಿಭಾಗೀಯ ಅಧ್ಯಕ್ಷ ಎಂ. ಮಲ್ಲಯ್ಯ ಮಂಗಳವಾರ ಮೈಸೂರು ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ನಿಗಮ ಇತ್ತೀಚೆಗೆ ಮೈಸೂರು ನಗರ ಸಾರಿಗೆ ಮತ್ತು ಮೈಸೂರು ಗ್ರಾಮಾಂತರ ವಿಭಾಗಗಳನ್ನು ವಿಲೀನಗೊಳಿಸುವ ಬಗ್ಗೆ ನಿರ್ಧರಿಸಿದೆ. ವಿಲೀ ನದ ಜೊತೆಗೆ ಬನ್ನಿಮಂಟಪ ಘಟಕ ಹಾಗೂ ಮೈಸೂರು ಗ್ರಾಮಾಂತರ ವಿಭಾಗದ ಘಟಕ -2ನ್ನು ಮುಚ್ಚುವುದು. ಘಟಕ ಹಾಗೂ ವಿಭಾಗಗಳ ವಿಲೀನದಿಂದಾಗಿ ಹೆಚ್ಚುವರಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು 4 ನಿಗಮ ಗಳಲ್ಲಿ ಖಾಲಿ ಇರುವ ಸ್ಥಳಗಳಿಗೆ ವರ್ಗಾ ಯಿಸುವುದು. ಮೈಸೂರು ನಗರ ಸಾರಿಗೆ ವಿಭಾಗ ಹಾಗೂ ಮೈಸೂರು ಗ್ರಾಮಾಂತರ ವಿಭಾಗದ ವಿಲೀನದಿಂದ ಬನ್ನಿಮಂಟಪ ಘಟಕ, ಮೈಸೂರು ಗ್ರಾಮಾಂತರ ಘಟಕ-2, ಮೈಸೂರು ನಗರ ಸಾರಿಗೆ ವಿಭಾಗ ಕಚೇರಿ, ವಿಭಾಗೀಯ ಕಾರ್ಯಾಗಾರವನ್ನು ಮುಚ್ಚು ವುದರಿಂದ ತೆರವಾಗುವ ಸ್ಥಳವನ್ನು ವಾಣಿಜ್ಯ ಉದ್ದೇಶಗಳಿಗೆ ಉಪಯೋಗಿಸುವ ಮೂಲಕ ಸಾರಿಗೇಯೇತರ ಆದಾಯ ಹೆಚ್ಚಿಸಿಕೊಳ್ಳುವುದಾಗಿ ತಿಳಿಸಿದೆ. ಆದರೆ ಈ ನಿರ್ಧಾರವನ್ನು ಕೆಎಸ್ ಆರ್‍ಟಿಸಿ ಕೆಲಸಗಾರರ ಸಂಘ ಒಪ್ಪುವು ದಿಲ್ಲ ಎಂದು ತಿಳಿಸಿದರು.

ಎರಡೂ ವಿಭಾಗಗಳನ್ನು ಮುಚ್ಚುವುದ ರಿಂದ ಅಲ್ಲಿನ 20 ಎಕರೆಯಷ್ಟು ಜಾಗ ವನ್ನು ವಾಣಿಜ್ಯ ಉದ್ದೇಶಕ್ಕೆ ಉಪಯೋಗಿ ಸಿಕೊಂಡು ಸಂಸ್ಥೆಗೆ ಆದಾಯ ಪಡೆಯ ಬೇಕೆಂಬ ಅಭಿಲಾಷೆಯನ್ನು ಸಂಸ್ಥೆ ಹೊಂದಿದೆ. ಈ 20 ಎಕರೆ ಜಮೀನನ್ನು ಖಾಸಗಿಯವ ರಿಗೆ ಪರಭಾರೆ ಮಾಡುವ ಹುನ್ನಾರ ಇದ ರಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಎರಡೂ ವಿಭಾಗಗಳನ್ನು ಮುಚ್ಚುವುದ ರಿಂದ ನಗರದಲ್ಲಿನ ಬಸ್ಸುಗಳ ಕಾರ್ಯಾ ಚರಣೆಯಲ್ಲಿ ವ್ಯತ್ಯಯವಾಗುವುದರ ಜೊತೆಗೆ ಸಾರ್ವಜನಿಕರು ಸಾರಿಗೆ ಸೌಲಭ್ಯ ದಿಂದ ವಂಚಿತರಾಗಲಿದ್ದಾರೆ. ಈ ಉದ್ದೇಶ ನೋಡಿದರೆ ಸಾರಿಗೆ ನಿಗಮವೇ ಖಾಸಗಿ ಬಸ್‍ಗಳ ಮಾಲೀಕರಿಗೆ ಅನುಕೂಲ ಕಲ್ಪಿಸಿ ಕೊಡುವಂತಿದೆ ಎಂದು ಆರೋಪಿಸಿದರು.

ಇದರ ವಿರುದ್ಧ ಮುಂದಿನ ದಿನಗಳಲ್ಲಿ ಸಂಘವು ಹೋರಾಟ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಪಾರ್ಥಸಾರಥಿ, ಸಿ.ಎಸ್. ರಾಮಕೃಷ್ಣ, ಶೇಖರ್ ರೈ ಉಪಸ್ಥಿತರಿದ್ದರು.

Translate »