ಕೊರೊನಾ ಭೀತಿ: ಅಂಬಾರಿಯಲ್ಲಿ ನಗರ ಪ್ರದಕ್ಷಿಣೆಗೆ ನೀರಸ ಪ್ರತಿಕ್ರಿಯೆ
ಮೈಸೂರು

ಕೊರೊನಾ ಭೀತಿ: ಅಂಬಾರಿಯಲ್ಲಿ ನಗರ ಪ್ರದಕ್ಷಿಣೆಗೆ ನೀರಸ ಪ್ರತಿಕ್ರಿಯೆ

January 26, 2022

ಮೈಸೂರು, ಜ.25(ಆರ್‍ಕೆ)- ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಅಂಬಾರಿ ಡಬ್ಬಲ್ ಡೆಕ್ಕರ್ ಬಸ್ಸಿನಲ್ಲಿ ಮೈಸೂರು ನಗರ ಪ್ರದಕ್ಷಿಣೆಗೆ ನೀರಸ ಪ್ರತಿ ಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿದಿನ ಕೊರೊನಾ ಸೋಂಕಿ ತರ ಸಂಖ್ಯೆ ಹೆಚ್ಚಳ ವಾಗುತ್ತಿರುವುದಲ್ಲದೇ ಬಹಳಷ್ಟು ಮಂದಿ ಜ್ವರ, ನೆಗಡಿ, ಶೀತಕ್ಕೆ ಚಿಕಿತ್ಸೆ ಪಡೆದು ಮನೆ ಯಲ್ಲೇ ಉಳಿದಿದ್ದಾರೆ. ಇನ್ನು ಜನರು ಮನೆಯಿಂದ ಹೊರಗೆ ಬರುತ್ತಿರುವುದೂ ವಿರಳವಾಗಿದೆ.

ವೀಕೆಂಡ್ ಕಫ್ರ್ಯೂ ಜಾರಿಯಲ್ಲಿದ್ದಾಗ ಕಡಿಮೆ ಇದ್ದ ಪ್ರವಾಸಿಗರು ನಿರ್ಬಂಧ ತೆರವುಗೊಂಡರೂ ಅಂಬಾರಿ ಬಸ್ ಹತ್ತಲು ಆಸಕ್ತಿ ತೋರುತ್ತಿಲ್ಲ.
ಮೈಸೂರಿನಲ್ಲಿ ಒಟ್ಟು 6 ಅಂಬಾರಿ ಬಸ್‍ಗಳಿವೆ ಯಾದರೂ ಈಗ ಸದ್ಯಕ್ಕೆ ಕೇವಲ ಒಂದು ಬಸ್ ಸಂಚರಿಸುತ್ತಿದೆ. ಅದೂ ದಿನಕ್ಕೆ ಒಂದು ಟ್ರಿಪ್ ಮಾತ್ರ. ಕೇವಲ 6ರಿಂದ 10 ಮಂದಿ ಸವಾರಿ ಮಾಡಿ ನಗರದ ಪ್ರಮುಖ ರಸ್ತೆ, ಪಾರಂಪರಿಕ ಕಟ್ಟಡಗಳನ್ನು ಕುಟುಂ ಬದ ಸದಸ್ಯರೊಂದಿಗೆ ವೀಕ್ಷಿಸುತ್ತಿದ್ದಾರೆ.

ದಾಸಪ್ಪ ಸರ್ಕಲ್ ಬಳಿ ಜೆಎಲ್‍ಬಿ ರಸ್ತೆ ಯಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋ ದ್ಯಮ ಅಭಿವೃದ್ಧಿ ನಿಗಮ (ಕೆಎಸ್‍ಟಿಡಿಸಿ) ಕಚೇರಿ ಆವರಣದಿಂದ ಒಂದೇ ಒಂದು ಬಸ್ ಮಾತ್ರ ಕಾರ್ಯಾಚರಿಸುತ್ತಿದ್ದು, ಉಳಿದ 5 ಬಸ್‍ಗಳನ್ನು ಬನ್ನಿಮಂಟಪ ಕೆಎಸ್ ಆರ್‍ಟಿಸಿ ಡಿಪೋದಲ್ಲಿ ನಿಲ್ಲಿಸಲಾಗಿದೆ.

ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬಂದರೆ ಮಾತ್ರ ಹೆಚ್ಚುವರಿ ಬಸ್ ತರಿಸಿ ಟ್ರಿಪ್ ಮಾಡ ಲಾಗುವುದು. ಲೋಯರ್ ಡೆಕ್‍ನಲ್ಲಿ 40 ಆಸನ ಗಳಿವೆಯಾದರೂ ಓಪನ್ ರೂಫ್‍ನ ಆಸನಗಳನ್ನು ಮಾತ್ರ ಜನರು ಆಯ್ಕೆ ಮಾಡಿಕೊಂಡು ಸಂಜೆ ಅಥವಾ ಬೆಳಗ್ಗೆ ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ.

ಒಂದು ಟ್ರಿಪ್ ಪೂರ್ಣಗೊಳಿಸಲು 2 ತಾಸು ಬೇಕಾಗಿದ್ದು, ಹೆಚ್ಚು ಒತ್ತಡವಿಲ್ಲದೇ ಇರುವುದರಿಂದ ನಿಧಾನವಾಗಿ ಚಲಿಸುವ ಅಂಬಾರಿ ಬಸ್‍ನಲ್ಲಿ ಪ್ರಯಾ ಣಿಕರು ಪಾರಂಪರಿಕ ಕಟ್ಟಡ, ಸ್ಮಾರಕಗಳನ್ನು ನೋಡಿ, ಮಾಹಿತಿ ಪಡೆದು ಆನಂದಿಸುತ್ತಿದ್ದಾರೆ. ಪ್ರತಿ ಟ್ರಿಪ್ ಮುಗಿಯುತ್ತಿದ್ದಂತೆ ಬಸ್ ಸ್ವಚ್ಛಗೊಳಿಸಿ ಅದನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ಸವಾರಿ ಮಾಡುವವರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡು ವುದೂ ಸೇರಿದಂತೆ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಬಸ್ ಡ್ರೈವರ್ ನಿಗಾ ವಹಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಕೊರೊನಾ ಪ್ರಖರತೆ ಕಡಿಮೆ ಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿನತ್ತ ಮುಖಮಾಡಿ ದಾಗ ಮಾತ್ರ ಅಂಬಾರಿಗೆ ಮತ್ತೆ ಹೆಚ್ಚಿನ ಬೇಡಿಕೆ ಬರಬಹು ದೆಂಬ ನಿರೀಕ್ಷೆಯಲ್ಲಿದ್ದಾರೆ ಕೆಎಸ್‍ಟಿಡಿಸಿ ಅಧಿಕಾರಿಗಳು.

ದಸರಾ ವೇಳೆ ವಿದ್ಯುತ್ ದೀಪಾಲಂಕಾರವಿದ್ದು, ಅಂಬಾರಿ ಬಸ್‍ನಲ್ಲಿ ನಗರ ಸುತ್ತಲು ಭಾರೀ ಬೇಡಿಕೆ ಇತ್ತು. 6 ಬಸ್‍ಗಳೂ ಪ್ರತಿನಿತ್ಯ ಕನಿಷ್ಠ 3 ಟ್ರಿಪ್ ಮಾಡುತ್ತಿದ್ದವು. ಕೆಲವೊಮ್ಮೆ ಆಸನಗಳು ಸಿಗದೇ ಪ್ರವಾಸಿಗರು ಈ ಬಸ್ಸಿ ನಲ್ಲಿ ನಿಂತುಕೊಂಡೇ ವಿಹÀರಿಸುತ್ತಿದ್ದುದನ್ನು ಸ್ಮರಿಸಬಹುದು.

Translate »