ಮೈಸೂರಲ್ಲಿ ರಫ್ತುದಾರರ ಸಮಾವೇಶ
ಮೈಸೂರು

ಮೈಸೂರಲ್ಲಿ ರಫ್ತುದಾರರ ಸಮಾವೇಶ

September 24, 2021

ಮೈಸೂರು,ಸೆ.23(ಪಿಎಂ)-ಮಾಹಿತಿ ತಂತ್ರಜ್ಞಾನ (ಐಟಿ) ರಫ್ತಿನಲ್ಲಿ ಮೈಸೂರು ರಾಜ್ಯ ದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಮುಂದಿನ 10 ವರ್ಷಗಳಲ್ಲಿ ಇಡೀ ಜಗತ್ತು ಮಾಹಿತಿ ತಂತ್ರಜ್ಞಾನದಿಂದ (ಐಟಿ) ಡಿಜಿಟಲ್ ಯುಗ ದತ್ತ ಪರಿವರ್ತನೆ ಆಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಡಿಜಿಟಲ್ ಎಕಾನಮಿಗೆ ಹೆಚ್ಚು ಉತ್ತೇಜನ ನೀಡಲು ಈಗಾಗಲೇ ಕರ್ನಾ ಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿ ಇಎಂ) ಕಚೇರಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.

ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇ ಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ (ವಿಟಿ ಪಿಸಿ) ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಗುರುವಾರ ಹಮ್ಮಿ ಕೊಂಡಿದ್ದ ಜಿಲ್ಲೆಯ ರಫ್ತುದಾರರ ಸಮಾ ವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ದೇಶದ ಆರ್ಥಿಕ ಪ್ರಗತಿಗೆ ರಫ್ತು ಮಹತ್ವ ಪಾತ್ರ ವಹಿಸಲಿದೆ. ಈ ನಿಟ್ಟಿ ನಲ್ಲಿ ಜಿಲ್ಲೆಯಲ್ಲಿಯೂ ರಫ್ತಿಗೆ ಹೆಚ್ಚು ಉತ್ತೇ ಜನ ನೀಡಲಾಗುವುದು. ಡಿಜಿಟಲ್ ವ್ಯವ ಸ್ಥೆಯ ಪ್ರಗತಿಯು ವೇಗ ಪಡೆದುಕೊಳ್ಳುತ್ತಿದ್ದು, ಭಾರತದ ಕಂಪನಿಗಳು ಈ ಪ್ರಕ್ರಿಯೆಯ ನೇತೃತ್ವ ವಹಿಸಲಿವೆ. ಹಾಗಾಗಿ ಜಗತ್ತಿನಲ್ಲಿ ಆಗುತ್ತಿರುವ ಡಿಜಿಟಲ್ ಕ್ರಾಂತಿ ಮುನ್ನಡೆ ಸುವ ಸಾಮಥ್ರ್ಯ ನಮ್ಮ ದೇಶಕ್ಕೆ ಇದ್ದು, ಈ ಹಿನ್ನೆಲೆಯಲ್ಲಿ ಇತರ ರಾಷ್ಟ್ರಗಳು ಭಾರತ ದತ್ತ ನೋಡುತ್ತಿವೆ ಎಂದು ತಿಳಿಸಿದರು.

ವಿವಿಧ ಉತ್ಪನ್ನಗಳನ್ನು ರಫ್ತು ಮಾಡು ತ್ತಿರುವ ಸಣ್ಣ ಸಣ್ಣ ಉದ್ದಿಮೆದಾರರನ್ನು ಉತ್ತೇಜಿಸಬೇಕಿದೆ. ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ರಫ್ತು ಮಾಡಲು ಮೈಸೂ ರಿನ ಹಲವರು ಪ್ರಯತ್ನಿಸುತ್ತಿದ್ದು, ಇದು ಆಶಾದಾಯಕ ಬೆಳವಣಿಗೆ. ಕೈಗಾರಿಕೆ, ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. 1990ರ ಅವಧಿಯಲ್ಲಿ ಮುಂಚೂಣಿಯಲ್ಲಿದ್ದ ಹಲವು ಕಂಪನಿ ಗಳು ಈಗ ಉಳಿದಿಲ್ಲ. ಅಂದು ಹೆಸರೇ ಕೇಳದಿದ್ದ ಎಷ್ಟೋ ಕಂಪನಿಗಳು ಈಗ ಮುಂಚೂಣಿಗೆ ಬಂದಿವೆ. ಇಂತಹ ಕಂಪನಿ ಗಳು ಭಾರತ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿವೆ. ಸಾಫ್ಟ್‍ವೇರ್ ರಫ್ತಿನಲ್ಲಿ ಪ್ರಗತಿ ಸಾಧಿಸಿದ್ದೇ ಇದಕ್ಕೆ ಕಾರಣ ಎಂದು ಹೇಳಿದರು.

ಉತ್ಪನ್ನ ಪ್ರದರ್ಶನ: ಸಭಾಂಗಣದ ಹೊರಾವರಣದಲ್ಲಿ ದೇಶ-ವಿದೇಶಗಳಿಗೆ ರಫ್ತು ಮಾಡುವ ಮೈಸೂರು ಜಿಲ್ಲೆಯ 25ಕ್ಕೂ ಹೆಚ್ಚು ಉದ್ದಿಮೆದಾರರ ಉತ್ಪನ್ನಗಳ ಪ್ರದ ರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸ ಲಾಗಿತ್ತು. ತಿಂಡಿ-ತಿನಿಸು, ವಿವಿಧ ಬಗೆಯ ಸಾಮಗ್ರಿ ಸೇರಿದಂತೆ ನಾನಾ ರೀತಿಯ ಉತ್ಪನ್ನಗಳು ಇಲ್ಲಿ ಕಂಡು ಬಂದವು. ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಗಳು ಪ್ರದರ್ಶನಕ್ಕಿಟ್ಟಿದ್ದ ಉತ್ಪನ್ನಗಳನ್ನು ವೀಕ್ಷಿಸಿ ಅವುಗಳ ವಿಶೇಷತೆಯನ್ನು ಕೇಳಿ ತಿಳಿ ದರು. ವಿದೇಶಿ ವ್ಯಾಪಾರ ಮಹಾ ನಿರ್ದೇ ಶಕರ ಕಚೇರಿ (ಡಿಜಿಎಫ್‍ಟಿ) ವಿದೇಶ ವ್ಯಾಪಾರ ಅಭಿವೃದ್ಧಿ ಅಧಿಕಾರಿ (ಎಫ್‍ಟಿಡಿಓ) ಮತ್ತು ಬೆಂಗಳೂರು ವಿಟಿಪಿಸಿ ರಫ್ತು ಸಂಯೋಜಕ ಸಿ.ಎಸ್.ಭಾಸ್ಕರ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರಫ್ತುದಾರರಿಗೆ ಸರ್ಕಾರದ ಸೌಲಭ್ಯಗಳು ಸೇರಿದಂತೆ ರಫ್ತಿಗೆ ಸಂಬಂ ಧಿಸಿದಂತೆ ವಿವಿಧ ವಿಷಯಗಳನ್ನು ತಿಳಿಸಿ ಕೊಟ್ಟರು. ಜಿಪಂ ಸಿಇಓ ಎ.ಎಂ. ಯೋಗೇಶ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪಿ.ಗೋಪಿನಾಥಶಾಸ್ತ್ರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇ ಶಕ ಡಿ.ಕೆ.ಲಿಂಗರಾಜು, ಉಪ ನಿರ್ದೇಶಕಿ ಎಲ್.ಮೇಘಲಾ ಮತ್ತಿತರರು ಹಾಜರಿದ್ದರು.

Translate »