`ಮೈಸೂರು ರಫ್ತು ಕೇಂದ್ರ’ ಶೀಘ್ರದಲ್ಲಿ ಕಾರ್ಯಾರಂಭ
ಮೈಸೂರು

`ಮೈಸೂರು ರಫ್ತು ಕೇಂದ್ರ’ ಶೀಘ್ರದಲ್ಲಿ ಕಾರ್ಯಾರಂಭ

September 24, 2021

ಮೈಸೂರು,ಸೆ.23(ಪಿಎಂ)- ಉತ್ಪನ್ನ ಗಳ ರಫ್ತು ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸುವ ಮೈಸೂರು ರಫ್ತು ಕೇಂದ್ರದ (ಎಕ್ಸ್‍ಪೋರ್ಟ್ ಹೌಸ್) ಕಾಮ ಗಾರಿ ಪ್ರಗತಿಯಲ್ಲಿದ್ದು, ಇದು ಆದಷ್ಟು ಶೀಘ್ರ ದಲ್ಲಿ ಕಾರ್ಯಾರಂಭವಾಗಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು ತಿಳಿಸಿದರು.

ಮೈಸೂರು ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ರಫ್ತುದಾರರ ಸಮಾ ವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮೈಸೂರಿನ ಹೆಬ್ಬಾಳದ ರಿಂಗ್ ರಸ್ತೆ ಬಳಿಯಲ್ಲಿ ಈ ರಫ್ತು ಕೇಂದ್ರದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದ ಕಾಮ ಗಾರಿ ಪೂರ್ಣಗೊಂಡಿದೆ. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸ ಲಾಗುತ್ತಿದೆ ಎಂದು ಹೇಳಿದರು.

ವಿಶ್ವದಲ್ಲಿ ದೇಶವು ಉತ್ಪಾದಿತ ಉತ್ಪನ್ನ ಗಳ ರಫ್ತಿನಲ್ಲಿ 14ನೇ ಸ್ಥಾನ ಹೊಂದಿದ್ದರೆ, ಸೇವಾ ವಲಯದಲ್ಲಿ 5ನೇ ಸ್ಥಾನ ಗಳಿ ಸಿದೆ. ಸೇವಾ ವಲಯದಲ್ಲಿ ಯುಎಸ್‍ಎ, ಜರ್ಮನಿ, ಇಟಲಿ ಮತ್ತು ಚೀನಾ ರಾಷ್ಟ್ರ ಗಳು ಕ್ರಮವಾಗಿ 1ರಿಂದ 4ರವರೆಗಿನ ಸ್ಥಾನ ಗಳನ್ನು ಪಡೆದಿದ್ದು, ಇದರ ನಂತರದ 5ನೇ ಸ್ಥಾನದಲ್ಲಿ ಭಾರತ ಇದೆ. ಉತ್ಪಾದಿತ ಉತ್ಪನ್ನಗಳ ರಫ್ತಿನಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ 5ನೇ ಸ್ಥಾನ ಹೊಂದಿದೆ. ಅದೇ ರೀತಿ ಸೇವಾ ವಲಯದಲ್ಲಿ ರಾಜ್ಯವೂ ದೇಶ ದಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದರು.

ಮೈಸೂರಲ್ಲಿ 2,914 ಕೋಟಿ ವಹಿವಾಟು: 2020ರ ಸೆಪ್ಟೆಂಬರ್‍ನಿಂದ 2021ರ ಮಾರ್ಚ್ ವರೆಗೆ ಮೈಸೂರು ಜಿಲ್ಲೆಯಲ್ಲಿ 2,914 ಕೋಟಿ ರೂ. ವಹಿವಾಟು ನಡೆದಿದ್ದು, ಆ ಮೂಲಕ ಮೈಸೂರು ಜಿಲ್ಲೆಯು ಉತ್ಪಾದಿತ ಉತ್ಪನ್ನ ಗಳ ರಫ್ತಿನಲ್ಲಿ 4ನೇ ಸ್ಥಾನ ಗಳಿಸಿಕೊಂಡಿದೆ. ಅದೇ ರೀತಿ ಐಟಿ ಸೇರಿದಂತೆ ಸೇವಾ ವಲಯದಲ್ಲಿ ಮೈಸೂರು ಜಿಲ್ಲೆಯು ದ್ವಿತೀಯ ಸ್ಥಾನ ಪಡೆದಿದೆ. ಮೈಸೂರು ಜಿಲ್ಲೆಯಲ್ಲಿ 157 ಉದ್ಯಮಗಳು 64 ದೇಶಗಳಿಗೆ ವಿವಿಧ ಉತ್ಪನ್ನಗಳನ್ನು ಪ್ರಸ್ತುತ ರಫ್ತು ಮಾಡುತ್ತಿವೆ. ಈ ಪೈಕಿ ವೈದ್ಯಕೀಯ ಉಪಕರಣಗಳ ರಫ್ತು ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ರಾಜ್ಯ ದಲ್ಲಿ 48 ಉತ್ಪನ್ನಗಳಿಗೆ ಜಿಐ (ಭೌಗೋ ಳಿಕ ಸೂಚ್ಯಂಕ) ಟ್ಯಾಗ್ ದೊರೆತಿದೆ. ಈ ಪೈಕಿ 9 ಉತ್ಪನ್ನಗಳು ಮೈಸೂರು ಜಿಲ್ಲೆಯ ದ್ದಾಗಿವೆ ಎಂದು ತಿಳಿಸಿದರು.

Translate »