ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಹೆಚ್ಚುವರಿ ರುದ್ರಭೂಮಿ
ಮೈಸೂರು

ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಹೆಚ್ಚುವರಿ ರುದ್ರಭೂಮಿ

May 4, 2021

ಎಂ.ಟಿ.ಯೋಗೇಶ್‍ಕುಮಾರ್
ಮೈಸೂರು, ಮೇ.3- ಕೊರೊನಾ ಎರಡನೇ ಅಲೆಯ ತೀವ್ರತೆಯಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲಾಡಳಿತ ಮೂರು ಧರ್ಮಕ್ಕೂ ಪ್ರತ್ಯೇಕ ವ್ಯವಸ್ಥೆ ಸೇರಿದಂತೆ 9 ರುದ್ರಭೂಮಿಗಳಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡಿದೆ. ಕೊರೊನಾ ಮೊದಲ ಅಲೆಯಲ್ಲಿ ಸತ್ತÀವರ ಅಂತ್ಯಕ್ರಿಯೆ ಮೂರು ರುದ್ರಭೂಮಿಗಳಲ್ಲಿ ನಡೆಯು ತ್ತಿತ್ತು. ಆದರೆ ಎರಡನೇ ಅಲೆಯ ಭೀಕ ರತೆಗೆ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದÀ ಅಂತ್ಯಕ್ರಿಯೆಗೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಉದ್ಭವಿ ಸದಂತೆ ಹೆಚ್ಚುವರಿ ರುದ್ರಭೂಮಿ ಕಲ್ಪಿಸಲು ಪ್ರತ್ಯೇಕ ವ್ಯವಸ್ಥೆಗೆ ತೀರ್ಮಾನಿಸಲಾಗಿದೆ.

ಹಿಂದು, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಕ್ಕೆ ಸೇರಿದವರು, ಆಯಾ ಧರ್ಮದ ಸಂಪ್ರದಾಯದಂತೆ ಗೌರವ ಯುತವಾಗಿ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಸಿರಾಜ್ ಅಹ ಮದ್, ಪಾಲಿಕೆ ಜನನ ಮತ್ತು ಮರಣ ವಿಭಾಗದ ಸಾಂಖಿಕ ಅಧಿಕಾರಿ ಡಾ. ಅನಿಲ್ ಕ್ರಿಸ್ಟಿ ಹಾಗೂ ಪಾಲಿಕೆ ಆರೋ ಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್, ನೋಡಲ್ ಅಧಿಕಾರಿಯಾಗಿ ನಿಯೋ ಜಿತರಾಗಿದ್ದು, ಈ ಮೂವರ ನೇತೃತ್ವದಲ್ಲಿ ಪಾಲಿಕೆ ಸಿಬ್ಬಂದಿಯ ತಂಡ ನಿರ್ವಹಣೆ ಮಾಡುತ್ತಿದೆ. ಕೋವಿಡ್ ಪ್ರೊಟೋಕಾಲ್ ನಂತೆ ಈಗ ಅಂತಿಮ ದರ್ಶನ ಪಡೆ ಯಲು ಅವಕಾಶ ನೀಡಲಾಗುತ್ತಿದೆ. ಪಿಪಿಇ ಕಿಟ್ ಧರಿಸಿ ಕೆಲ ಮೀಟರ್ ದೂರ ದಿಂದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಮಾನವೀ ಯತೆಯನ್ನು ಎತ್ತಿ ಹಿಡಿಯುತ್ತಿದ್ದಾರೆ.

ಹೆಚ್ಚುವರಿ ರುದ್ರಭೂಮಿ: ಅಲ್ಪಸಂಖ್ಯಾ ತರು ಗುಂಡೂರಾವ್ ನಗರದಲ್ಲಿರುವ ಕಬರ್‍ಸ್ತಾನ್‍ನಲ್ಲಿ ಅಂತ್ಯಕ್ರಿಯೆ ನೆರವೇರಿಸ ಬಹುದಾಗಿದೆ. ಈ ಸ್ಥಳದಲ್ಲಿ 60 ಮಂದಿ ಅಂತ್ಯಕ್ರಿಯೆಗೆ ಅವಕಾಶವಿದ್ದು, ಇದು ಸಾಕಾದಿದ್ದಲ್ಲಿ ನಂತರ ರಮ್ಮನಹಳ್ಳಿ ಬಳಿ ಇರುವ 5.9 ಎಕರೆ ಸ್ಥಳದಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ.
ಹಿಂದೂ ಧರ್ಮಕ್ಕೆ ಸೇರಿದ ಸೋಂಕಿಗೆ ತುತ್ತಾದವರ ಅಂತ್ಯಕ್ರಿಯೆಗೆ ಈಗ ಜಯ ನಗರದಲ್ಲಿರುವ ವಿದ್ಯುತ್ ಚಿತಾಗಾರ ಮೀಸಲಿಡಲಾಗಿದೆ. ಅಗತ್ಯ ಕಂಡು ಬಂದರೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ರುವ ಅನಿಲ ಚಿತಾಗಾರ, ಬನ್ನಿಮಂಟ ಪದ ಜೋಡಿ ತೆಂಗಿನಮರದ ರಸ್ತೆ ಯಲ್ಲಿರುವ ರುದ್ರಭೂಮಿ(ಸೌದೆಯಿಂದ ಸುಡುವುದು)ಯನ್ನು ಗುರುತಿಸಲಾಗಿದೆ. ಅಲ್ಲದೆ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು ಸಿಎಸ್‍ಐ ಚರ್ಚ್ ಬಳಿಯ ರುದ್ರಭೂಮಿ ಹಾಗೂ ರಮ್ಮನಹಳ್ಳಿ ಬಳಿ ಇರುವ ರುದ್ರಭೂಮಿಯಲ್ಲಿ ನೆರವೇರಿಸ ಬಹುದು.

ಖಾಸಗಿ ಆಂಬುಲೆನ್ಸ್ ಸುಲಿಗೆಗೆ ಬ್ರೇಕ್: ಬೆಂಗಳೂರು ಸೇರಿದಂತೆ ಇತರೆÉ ನಗರ ಗಳಲ್ಲಿ ಸೋಂಕಿಗೆ ಬಲಿಯಾದವರ ಶವ ಸಾಗಿಸಲು ಖಾಸಗಿ ಆಂಬುಲೆನ್ಸ್‍ಗಳ ಮಾಲೀಕರು, ಚಾಲಕರು ಹೆಚ್ಚು ಹಣ ವಸೂಲಿ ಮಾಡುವ ದಂಧೆಯಾಗಿಸಿ ಕೊಂಡಿದ್ದಾರೆ. ಇದಕ್ಕೆ ಮೈಸೂರಲ್ಲಿ ಬ್ರೇಕ್ ಹಾಕಲಾಗಿದ್ದು, ಯಾವುದೇ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿ ನಿಧನರಾದರೆ ಆಸ್ಪತ್ರೆ ಸಿಬ್ಬಂದಿಯೇ ಪಾಲಿಕೆ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಂಟ್ರೋಲ್ ರೂಮ್‍ಗೆ ಮಾಹಿತಿ ನೀಡಬೇಕು. ಆಗ ನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ವತಿಯಿಂದ ಶವ ಸಾಗಿಸಲು ವಾಹನದ ವ್ಯವಸ್ಥೆ ಕಲ್ಪಿಸ ಲಾಗುತ್ತದೆ. ಇದಕ್ಕಾಗಿ ನಾಲ್ಕು ವಾಹನ ಗಳನ್ನು ಮೀಸಲಿಡಲಾಗಿದೆ.

Translate »