ಮೈಸೂರು, ಮೇ 3(ಎಂಕೆ)- ಕರ್ನಾ ಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರ ಕಂಠಸಿರಿಯನ್ನೇ ಕಿತ್ತುಕೊಂಡ ಹೆಮ್ಮಾರಿ ಕೊರೊನಾ, ಸಾವಿರಾರು ವಿದ್ಯಾರ್ಥಿಗಳಿಗೆ ಗುರುವಿಲ್ಲದಂತೆ ಮಾಡಿದೆ…!
ಕಳೆದ 50 ವರ್ಷಗಳಿಂದ ಸಂಗೀತ ಸಂಸ್ಥೆಯೊಂದನ್ನು ಕಟ್ಟಿ, ಮನೆಯನ್ನೇ ಸಂಗೀತ ಶಾಲೆಯನ್ನಾಗಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ದಾಸೋಹ ನೀಡಿದ್ದ ಸಂಗೀತ ವಿದ್ವಾನ್ ಅಂದಗ ಶ್ರೀನಿ ವಾಸ್(73) ಕೊರೊನಾ ಸೋಂಕಿಗೆ ಏ.23 ರಂದು ಬಲಿಯಾಗಿದ್ದು, ದೇಶ-ವಿದೇಶಗಳಲ್ಲಿರುವ ಅವರ ಅಪಾರ ಶಿಷ್ಯವೃಂದ ಹಾಗೂ ಕುಟುಂಬಸ್ಥರಿಗೆ ಅತೀವ ನೋವುಂಟು ಮಾಡಿದೆ.
ಮೈಸೂರು ಹೆಬ್ಬಾಳಿನ ನಿವಾಸಿಯಾಗಿದ್ದ ಅವರು, ಪತ್ನಿ ವಿದುಷಿ ಉಮಾ ಶ್ರೀನಿ ವಾಸ್ ಅವರೊಂದಿಗೆ ಮನೆಯಲ್ಲಿಯೇ ಸಾವಿರಾರು ಮಕ್ಕಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಹೇಳಿಕೊಡುವ ಮೂಲಕ ಆದರ್ಶ ದಂಪತಿಗಳೆನಿಸಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಉಮಾ ಶ್ರೀನಿ ವಾಸ್ ನಿಧನರಾದ ಹತ್ತು ದಿನಗಳ ಬಳಿಕ ಪತ್ನಿ ಇಲ್ಲದ ಕೊರಗಿನಲ್ಲಿದ್ದ ವಿದ್ವಾನ್ ಅಂದಗ ಶ್ರೀನಿವಾಸ್ ಅವರು ಕೊರೊನಾ ಸೋಂಕಿನಿಂದ ಅಸುನೀಗಿದ್ದಾರೆ.
ಕೊರೊನಾ ಸೋಂಕು ಸಂಗೀತ ಕಲಿಕೆಗೂ ವಿರಾಮವಿಟ್ಟಿದ್ದು, ಸಂಗೀತದ ನಾದ-ನಿನಾದ ಮೊಳಗುತ್ತಿದ್ದ ಅಂದಗ ಶ್ರೀನಿವಾಸ್ ಅವರ ಮನೆಯಲ್ಲಿ ಮೌನವೇ ಆವರಿಸಿದೆ. ಅವರಿಂದ ಸಂಗೀತ ಕಲಿ ಯುತ್ತಿದ್ದ ವಿದ್ಯಾರ್ಥಿಗಳು ಗುರುವಿಲ್ಲದೆ ಕಣ್ಣೀ ರಿಡುವಂತಾಗಿದೆ. ಅಪ್ಪ-ಅಮ್ಮನೇ ನನ್ನ ಮಾರ್ಗದರ್ಶಕರಾಗಿದ್ದು, ನನಗೂ ಅವರು ಗಳೇ ಸಂಗೀತದ ಗುರುವಾಗಿದ್ದರು. ಹತ್ತು ದಿನಗಳ ಅವಧಿಯಲ್ಲಿ ಇಬ್ಬರನ್ನ ಕಳೆದು ಕೊಂಡಿದ್ದೇವೆ ಎಂದು ವಿದ್ವಾನ್ ಅಂದಗ ಶ್ರೀನಿವಾಸ್ ಅವರ ಪುತ್ರ ‘ಮೈಸೂರು ಮಿತ್ರ’ ನೊಂದಿಗೆ ತಮಗೆ ಆದರ್ಶ ವ್ಯಕ್ತಿಗಳಾಗಿದ್ದ ತಂದೆ-ತಾಯಿಗಳ ನೆನೆದು ಕಣ್ಣೀರಾದರು.
ಅಮ್ಮನಿಗೂ ಕೊರೊನಾ ಹಣೆಪಟ್ಟಿ!: ಬಹು ಅಂಗಾಂಗ ವೈಫಲ್ಯದಿಂದ ಬಳಲು ತ್ತಿದ್ದ ಅಮ್ಮನನ್ನು ಮೊದಲು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡುವಾಗಲೇ ಕೊರೊನಾ ಸೋಂಕು ಪರೀಕ್ಷೆ ಮಾಡ ಲಾಗಿತ್ತು. ಪರೀಕ್ಷಾ ವರದಿಯಲ್ಲಿ ಕೋವಿಡ್ ನೆಗೆಟಿವ್ ಎಂದು ಬಂದಿ ದ್ದರೂ ಅವರು ನಿಧನರಾಗಿದ್ದು ಕೊರೊನಾ ಸೋಂಕಿನಿಂದ ಎಂದು ಆಸ್ಪತ್ರೆಯವರು ಹೇಳತೊಡಗಿದರು. ನೆಗೆಟಿವ್ ವರದಿ ಯಿದ್ದರೂ ಹಣಕ್ಕಾಗಿ ಪಾಸಿಟಿವ್ ಎನ್ನು ತ್ತಿದ್ದಾರೆ ಎಂದು ದೂರಿದರು.
ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ಹಾತೊರೆಯುತ್ತಿವೆ. ಕನಿಷ್ಠ ಸೌಲಭ್ಯ ಗಳಿರುವ ಆಸ್ಪತ್ರೆಯಲ್ಲೂ ಬೆಡ್‍ಗೆ 35 ಸಾವಿರ ರೂ. ಕಟ್ಟಬೇಕು. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಅವಕಾಶವೇ ಇಲ್ಲ. ಅಲ್ಲದೆ ಕೊರೊನಾದಿಂದಾಗಿ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದರೂ ಜಿಲ್ಲಾಡಳಿತ ನೀಡು ತ್ತಿರುವ ಮೃತರ ಸಂಖ್ಯೆಯ ಮಾಹಿತಿ ನಿಖರವಾಗಿಲ್ಲ. ಯಾವ ಪಕ್ಷದ ವರು ಅಧಿಕಾರಕ್ಕೆ ಬಂದರೂ ಇದೇ ಪರಿಸ್ಥಿತಿಯ ಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು.
150 ವಿದ್ಯಾರ್ಥಿಗಳಿಗೆ ಸಂಗೀತ ಪಾಠ: ನಮ್ಮ ತಂದೆಯವರ ಬಳಿ ಸಂಗೀತ ಕಲಿ ಯಲು 150 ಮಂದಿ ವಿದ್ಯಾರ್ಥಿಗಳು ಬರುತ್ತಿದ್ದರು. 50 ವರ್ಷಗಳಿಂದ ಸಾವಿ ರಾರು ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿ ದ್ದಾರೆ. ಅವರ ಶಿಷ್ಯಂದಿರು ವಿದೇಶಗಳಲ್ಲಿ ತಮ್ಮದೇ ಸಂಗೀತ ಶಾಲೆಗಳು ತೆರೆದು ಅವರೂ ಕಲಿಸುವುದರಲ್ಲಿ ತೊಡಗಿ ಕೊಂಡಿದ್ದಾರೆ. ನನ್ನ ಸಂಗೀತದ ಗುರುಗಳೂ ಅವರೇ ಆಗಿದ್ದು, ಭರತನಾಟ್ಯ, ಸಂಗೀತ ತರಬೇತಿ ಶಾಲೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.