ಕುಶಾಲನಗರದಲ್ಲಿ ಫೇಸ್‍ಶೀಲ್ಡ್ ತಯಾರಿಕೆ
ಕೊಡಗು

ಕುಶಾಲನಗರದಲ್ಲಿ ಫೇಸ್‍ಶೀಲ್ಡ್ ತಯಾರಿಕೆ

May 1, 2020

ಮಡಿಕೇರಿ, ಏ.30- ಸೇವಾ ಭಾರತಿ ಸಂಸ್ಥೆಯಿಂದ ಸಾವಿರಾರು ಸಂಖ್ಯೆಯ ಫೇಸ್ ಶೀಲ್ಡ್ ತಯಾರಿಕೆ ಕಾರ್ಯವನ್ನು ಕುಶಾಲನಗರದಲ್ಲಿ ಆರಂಭಿಸಲಾಗಿದೆ. ಜಿಲ್ಲಾಡಳಿತದ ಬೇಡಿಕೆಗೆ ಅನುಗುಣವಾಗಿ ಕಳೆದ 3 ದಿನಗಳಿಂದ ಹತ್ತಾರು ಸ್ವಯಂ ಸೇವಕರು ಫೇಸ್‍ಶೀಲ್ಡ್ ತಯಾರಿಕೆಯಲ್ಲಿ ತೊಡಗಿದ್ದು, ಇವರೊಂದಿಗೆ ಮಕ್ಕಳು ಕೂಡ ಕೈಜೋಡಿಸಿದ್ದಾರೆ. ವಿರಾಜಪೇಟೆಯ ಅನುರಾಧ ಸಂಸ್ಥೆಯ ಸಹಯೋಗದೊಂದಿಗೆ ದೊರೆತ ಕಚ್ಚಾವಸ್ತುಗಳನ್ನು ಬಳಸಿ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಶೀಲ್ಡ್ ನಿರ್ಮಾಣ ಕಾರ್ಯವನ್ನು ಮಾಡಲಾಗುತ್ತಿದ್ದು, ಈಗಾಗಲೆ 4 ಸಾವಿರ ಶೀಲ್ಡ್‍ಗಳು ತಯಾರಾಗಿವೆ.

ಇದೇ ಶೀಲ್ಡ್‍ಗಳಿಗೆ ಮಾರುಕಟ್ಟೆಯಲ್ಲಿ ಅಂದಾಜು 30ರಿಂದ 50ರೂ. ದರವಿದ್ದು, ಈ ಶೀಲ್ಡ್‍ಗಳನ್ನು ಸೇವಾ ಭಾರತಿ ಮೂಲಕ ಕೇವಲ 8ರಿಂದ 10ರೂ. ವೆಚ್ಚದಲ್ಲಿ ತಯಾರಿಸಲಾ ಗುತ್ತಿದೆ ಎಂದು ಸಂಸ್ಥೆಯ ಪ್ರಮುಖರಾದ ಕೆ.ಕೆ.ದಿನೇಶ್ ತಿಳಿಸಿದ್ದಾರೆ. ಶೀಲ್ಡ್ ತಯಾರಿಕೆ ಕಾರ್ಯದಲ್ಲಿ ಪುಟ್ಟ ಮಕ್ಕಳು ತೊಡಗಿಸಿಕೊಂಡಿದ್ದು ಕೋವಿಡ್-19 ವಿರುದ್ದ ಹೋರಾಡು ತ್ತಿರುವ ಕೊರೊನ ವಾರಿಯರ್ಸ್‍ಗಳಿಗೆ ಈ ಫೇಸ್ ಶೀಲ್ಡ್ ಅನುಕೂಲವಾಗಲಿದೆ.

Translate »