ಕೊಡಗು

ಕೌಟುಂಬಿಕ ಕಲಹ: ವ್ಯಕ್ತಿ ಆತ್ಮಹತ್ಯೆ

October 27, 2020

ವಿರಾಜಪೇಟೆ,ಅ.26-ಕೌಟುಂಬಿಕ ಕಲಹದಿಂದ ಕೂಲಿ ಕಾರ್ಮಿಕನೋರ್ವ ನೇಣಿಗೆ ಶರಣಾಗಿರುವ ಘಟನೆ ಇಲ್ಲಿನ ಮಲೆತಿರಿಕೆ ಬೆಟ್ಟದಲ್ಲಿ ನಡೆದಿದೆ. ಬೆಟ್ಟದ ನಿವಾಸಿ ಮಂಜು(36) ನೇಣಿಗೆ ಶರಣಾದವರು. ಮೃತರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆÉ. ಭಾನುವಾರ ಸ್ನೇಹಿತ ರೊಂದಿಗೆ ಮದ್ಯ ಸೇವೆಸಿ ಮನೆಗೆ ಬಂದಿದ್ದ. ಈ ವೇಳೆ ಪತ್ನಿ ಯೊಂದಿಗೆ ಗಲಾಟೆ ನಡೆದಿದೆ ಎನ್ನಲಾಗಿದೆ. ತಡರಾತ್ರಿ ಮನೆಯ ಕೊಣೆಯೊಂದರಲ್ಲಿ ನೇಣಿಗೆ ಶರಣಾಗಿ, ಅಸ್ವಸ್ಥರಾಗಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೃತನ ಪತ್ನಿ ಕೆ.ಮಮತಾ ನಗರ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಪೋಟೊ:05

 

Translate »