ಖ್ಯಾತ ‘ಆರ್‍ಜೆ ರಚನಾ’  ಹೃದಯಾಘಾತದಿಂದ ಸಾವು
News

ಖ್ಯಾತ ‘ಆರ್‍ಜೆ ರಚನಾ’ ಹೃದಯಾಘಾತದಿಂದ ಸಾವು

February 23, 2022

ಬೆಂಗಳೂರು,ಫೆ.22-ಖ್ಯಾತ ರೇಡಿಯೋ ಜಾಕಿ ಆರ್‍ಜೆ ರಚನಾ ಅವರು ಹೃದಯಾ ಘಾತದಿಂದ ನಿಧನರಾಗಿದ್ದಾರೆ. ರೇಡಿಯೋ ಸಂಸ್ಥೆಯಲ್ಲಿ ಆರ್ ಜೆಯಾಗಿ ಕಾರ್ಯನಿರ್ವಹಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದ ಆರ್‍ಜೆ ರಚನಾ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂಲಗಳ ಪ್ರಕಾರ ಜೆ.ಪಿ.ನಗರದ ಅಪಾರ್ಟ್‍ಮೆಂಟ್‍ವೊಂದ ರಲ್ಲಿ ವಾಸವಾಗಿದ್ದ ಅವರಿಗೆ ಕಾರ್ಡಿಯಾಕ್ ಅರೆಸ್ಟ್ (ಹೃದಯಾ ಘಾತ)ಆಗಿದೆ ಎನ್ನಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಅವರು ನಿಧನರಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾ ಗಿತ್ತು. ಈ ಹಿಂದೆ ರಕ್ಷಿತ್ ಶೆಟ್ಟಿಯವರ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ ಚಿತ್ರದಲ್ಲಿ ಸಹೋದರಿ ಪಾತ್ರದ ಮೂಲಕ ರಚನಾ ಖ್ಯಾತಿಯಾಗಿದ್ದರು. 3 ವರ್ಷಗಳಿಂದ ರೇಡಿಯೋ ಜಾಕಿ ಕೆಲಸ ಬಿಟ್ಟಿದ್ದರು. ರೇಡಿಯೋ ಮಿರ್ಚಿಯಲ್ಲಿ ಅಪಾರ ಕೇಳುಗರನ್ನು ತನ್ನ ಮಾತಿನ ಮೂಲಕ ರಂಜಿಸಿದ ರಚನಾ ಅವರ ಹಠಾತ್ ನಿಧನ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ರಚನಾ ಅವರ ಪೆÇೀಷಕರು ಚಾಮರಾಜಪೇಟೆ ಯಲ್ಲಿ ವಾಸವಿದ್ದು, ಮೃತದೇಹವನ್ನು ಪೆÇೀಷಕರ ನಿವಾಸಕ್ಕೆ ಕೊಂಡೊಯ್ಯಲಾಗಿದೆ ಎನ್ನಲಾಗಿದೆ.
ಸಾವಿನಲ್ಲೂ ಸಾರ್ಥಕತೆ: ಇನ್ನು ಆರ್‍ಜೆ ರಚನಾ ಅವರ ಆಸೆಯಂತೆ ಅವರ ಕುಟುಂಬ ಸ್ಥರು ಆಕೆಯ ದೇಹದ ಅಂಗಾಂಗ ದಾನಕ್ಕೆ ಮುಂದಾಗಿದ್ದು, ಆ ಮೂಲಕ ರಚನಾ ಸಾವಿ ನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕುಟುಂಬಸ್ಥರು ರಚನಾ ಅವರ ಅಂಗಾಂಗವನ್ನು ದಾನ ಮಾಡಿದ್ದಾರೆ. ಮುಂಜಾನೆ ಹೃದಯಘಾತವಾಗಿದ್ದ ಕಾರಣ ಅಪೆÇೀಲೊ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. 12 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ರಚನಾ ಅವರ ನಿಧನಕ್ಕೆ ಚಿತ್ರರಂಗ, ಸಹದ್ಯೋಗಿಗಳು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

Translate »