ಪಾಂಡವಪುರದಲ್ಲಿ ರೈತ ಸಂಘದ ಪ್ರತಿಭಟನೆ
ಮಂಡ್ಯ

ಪಾಂಡವಪುರದಲ್ಲಿ ರೈತ ಸಂಘದ ಪ್ರತಿಭಟನೆ

September 28, 2021

ಪಾಂಡವಪುರ, ಸೆ.27- ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಐದು ದೀಪ ವೃತ್ತದಲ್ಲಿ ಸುನೀತ ಪುಟ್ಟಣ್ಣಯ್ಯ, ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್ ನೇತೃತ್ವದಲ್ಲಿ ಜಮಾಯಿಸಿದ ರೈತಸಂಘದ ಕಾರ್ಯ ಕರ್ತರು ಭಾರತ್ ಬಂದ್ ಬೆಂಬಲಿಸಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಬಳಿಕ ಪಟ್ಟಣದ ಮಂಡ್ಯ ಸರ್ಕಲ್ ಹಾಗೂ ಐದು ದೀಪ ವೃತ್ತದಲ್ಲಿ ಪಾಂಡವಪುರ-ಮೈಸೂರು ಹೆದ್ದಾರಿ ತಡೆದು, ಮಾನವ ಸರಪಳಿ ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ದರು. ಭಾರತ್ ಬಂದ್‍ಗೆ ವರ್ತಕರು ಅಂಗಡಿ ಗಳನ್ನು ಬಾಗಿಲು ಮುಚ್ಚುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸ ಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯಿಂದ ರೈತರ ಬದುಕು ಸಂಕ ಷ್ಟಕ್ಕೆ ಸಿಲುಕಿದೆ. ಈ ಕಾಯ್ದೆಗಳು ರೈತ ವಿರೋಧಿ ಯಾಗಿದೆ. ಆದ್ದರಿಂದ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸಹ ಕೇಂದ್ರ ಸರಕಾರ ರೈತರೊಂದಿಗೆ ಮಾತನಾ ಡುವ ಸೌಜನ್ಯವನ್ನು ತೋರದಿರುವುದು ಈ ಸರಕಾರ ರೈತ ವಿರೋಧಿ ಸರಕಾರ ಎಂಬುದನ್ನು ಸಾಬೀತು ಮಾಡಿದೆ. ಆದ್ದರಿಂದ ರೈತರು ಈಗಲಾದರೂ ಎಚ್ಚೆತ್ತುಕೊಂಡು ತಮ್ಮ ಬದುಕು ರೂಪಿಸಿಕೊಳ್ಳುವುದಕ್ಕೆ ಇಂತಹ ಕೆಟ್ಟ ಸರಕಾರಗಳ ವಿರುದ್ದ ಹೋರಾಟ ನಡೆಸಬೇಕಾಗಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೆನ್ನಾಳು ನಾಗರಾಜು, ವಿಜಿಕುಮಾರ್, ಗೌಡೇಗೌಡ, ರವಿಕುಮಾರ್, ರಘು, ಮಂಜುನಾಥ್, ಸಿಐಟಿಯು ಶಿವ ಕುಮಾರ್ ಸೇರಿದಂತೆ ಹಲವರು ಇದ್ದರು.

Translate »