ಇಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರ ಘೇರಾವ್
ಮೈಸೂರು

ಇಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರ ಘೇರಾವ್

June 23, 2020

ಮೈಸೂರು,ಜೂ.22(ಎಂಟಿವೈ)- ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರು ವುದನ್ನು ಖಂಡಿಸಿ ಜೂ.23ರಂದು ಕರ್ನಾ ಟಕ ರಾಜ್ಯ ರೈತ ವಿರೋಧಿ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ರಿಗೆ ಘೇರಾವ್ ಹಾಕಲು ತೀರ್ಮಾನಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

ಮೈಸೂರಿನ ಜನದರ್ಶಿನಿ ಸಭಾಂಗಣ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರ್ಕಾರ ಜನ ವಿರೋಧಿ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಕೃಷಿ ಕ್ಷೇತ್ರಕ್ಕೆ ಸರ್ಕಾರ ಹೊಡೆತ ನೀಡುತ್ತಿದೆ. ಅಲ್ಲದೆ, ಸಣ್ಣ ಹಿಡುವಳಿದಾರರಿಂದ ಭೂಮಿ ಕಸಿದು ಕೊಳ್ಳುವ ಸಂಚು ಈ ತಿದ್ದುಪಡಿಯಲ್ಲಿ ಅಡ ಗಿದೆ. ಇದರೊಂದಿಗೆ ಎಪಿಎಂಸಿ ಕಾಯ್ದೆ, ವಿದ್ಯುತ್ ಇಲಾಖೆ ಖಾಸಗಿಕರಣ ಮಾಡಿ ರೈತರ ಪಂಪ್‍ಸೆಟ್‍ಗಳಿಗೆ ಉಚಿತವಾಗಿ ನೀಡು ತ್ತಿದ್ದ ವಿದ್ಯುತ್ ಸ್ಥಗಿತಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸುವ ಉದ್ದೇಶದಿಂದ ವಿವಿಧ ರೈತ ಸಂಘಟನೆಗಳನ್ನು ಒಂದು ಗೂಡಿಸಿ ಕರ್ನಾಟಕ ರಾಜ್ಯ ರೈತ ವಿರೋಧಿ ಹೋರಾಟ ಸಮಿತಿ ರಚಿಸಲಾಗಿದೆ. ಈ ಸಮಿತಿ ಮೂಲಕ ನಿರಂತರ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ರೈತ ವಿರೋಧಿ ನೀತಿ ವಿರುದ್ಧ ಜೂ. 23ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲಾಗುತ್ತದೆ. ಜೂ.24ರಂದು ರಾಜ್ಯದ ಎಲ್ಲಾ ಶಾಸಕರ ಮನೆ ಅಥವಾ ಕಚೇರಿ ಎದುರು ಪ್ರತಿಭಟನೆ ನಡೆಸಿ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡ ದಂತೆ ಆಗ್ರಹಿಸಲಾಗುತ್ತದೆ. ಜೂ.29ರಂದು ರೈತರ ಬೃಹತ್ ರ್ಯಾಲಿ ಮೂಲಕ ಸಾಗಿ ವಿಭಾ ಗಾಧಿಕಾರಿ ಕಚೇರಿ ಎದುರು ಬಾರಿ ಕೋಲು ಚಳವಳಿ ಮೂಲಕ ಮುತ್ತಿಗೆ ಹಾಕಲಾಗುವುದು. ನಂತರ ರಾಜ್ಯದ ರೈತ ಮುಖಂಡರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ತಿಳಿಸಿದರು.

ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು. ಯಾರು ಬೇಕಾದರೂ ಕೃಷಿ ಮಾಡಬಹುದು ಎಂಬ ಕಾನೂನು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾ ಗಿದೆ. ಅಂತೆಯೇ ವೈದ್ಯ, ವಕೀಲ, ಇಂಜಿ ನಿಯರ್ ವೃತ್ತಿಗಳನ್ನು ಯಾರು ಬೇಕಾದರೂ ಮಾಡಬಹುದೆಂದು ಆದೇಶ ಹೊರಡಿ ಸಲಿ ಎಂದು ಸವಾಲು ಹಾಕಿದರು.

ಬಗರ್‍ಹುಕುಂ ಸಾಗುವಳಿ ಭೂಮಿಯನ್ನು ಸಕ್ರಮ ಮಾಡುವುದಾಗಿ ಕಂದಾಯ ಸಚಿ ವರು ಭರವಸೆ ನೀಡುತ್ತಿದ್ದಾರೆ. ಆದರೆ, ಅದನ್ನು ಕಾರ್ಯಗತ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸಂಕಷ್ಟದ ಕಾಲದಲ್ಲಿ ಸಾಲದ ಬಡ್ಡಿ ಮನ್ನಾ ಮಾಡಿರುವುದಾಗಿ ಸರ್ಕಾರ ಘೋಷಿಸಿದೆ. ಆದರೆ ಅಸಲು ಪಾವತಿಸು ವಂತೆ ಪಿಎಲ್‍ಡಿಬಿ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ನೀಡಿವೆ. ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಸಾಲ ಮರು ಪಾವತಿಸಲು ಹೇಗೆ ಸಾಧ್ಯ? ಇದನ್ನು ಅರಿತು ಸರ್ಕಾರ ಬಡ್ಡಿ ಮನ್ನಾಕ್ಕೆ ಆದೇಶವನ್ನು ಡಿಸೆಂಬರ್ 31ರ ವರೆಗೂ ಮುಂದೂಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕÀರ್ನಾ ಟಕ ರಾಜ್ಯ ರೈತ ವಿರೋಧಿ ಹೋರಾಟ ಸಮಿತಿ ಮುಖಂಡರಾದ ಹೊನ್ನೂರು ಪ್ರಕಾಶ್, ಡಾ.ಗುರುಪ್ರಸಾದ್, ವಿದ್ಯಾಸಾಗರ್, ಹತ್ತಳ್ಳಿ ದೇವರಾಜು, ಹಳ್ಳಿಕೆರೆಹುಂಡಿ ಭಾಗ್ಯ ರಾಜ್, ಮಂಜೇಶ್‍ಗೌಡ, ಸುಧೀರ್‍ಕುಮಾರ್, ಹೆಮ್ಮಿಗೆ ಚಂದ್ರಶೇಖರ್ ಇದ್ದರು.

Translate »