ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ
ಮೈಸೂರು

ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ

June 23, 2020

ಮೈಸೂರು, ಜೂ.22(ಆರ್‍ಕೆಬಿ)- ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ತಮ್ಮ ಶಾಸಕರ ವಿವೇಚನಾ ಅನುದಾನದಲ್ಲಿ 50 ಲಕ್ಷ ರೂ. ಅಂದಾಜಿನಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

20ನೇ ವಾರ್ಡ್‍ನ ವಿಜಯನಗರ 2ನೇ ಹಂತದ ಮತ್ತು ಮಹಾಜನ ಬಡಾವಣೆಯ 6ನೇ ಮುಖ್ಯ ರಸ್ತೆಯಿಂದ 3ನೇ ಮುಖ್ಯರಸ್ತೆಯ ಮುಖಾಂತರ ಸಂಗಂ ವೃತ್ತದವರೆಗೆ ರಸ್ತೆ ಕಾಮಗಾರಿ (ರೂ.25 ಲಕ್ಷ), 5ನೇ ವಾರ್ಡ್‍ನ ಕುಂಬಾರ ಕೊಪ್ಪಲಿನಲ್ಲಿ 60 ಅಡಿ ರಸ್ತೆಯ ಅಭಿವೃದ್ಧಿ ಕಾಮಗಾರಿ (ರೂ.25 ಲಕ್ಷ)ಗಳಿಗೆ ಶಾಸಕ ನಾಗೇಂದ್ರ ಆಯಾ ವಾರ್ಡ್ ಗಳ ಪಾಲಿಕೆ ಸದಸ್ಯರಾದ ಸುಬ್ಬಯ್ಯ, ಪ್ರೇಮಾ ಶಂಕರೇ ಗೌಡ, ಉಷಾ ಶಿವಕುಮಾರ್, ಶ್ರೀಧರ್ ಸಮ್ಮುಖದಲ್ಲಿ ಗುದ್ದಲಿ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ ರಾಜು, ಉಪಾಧ್ಯಕ್ಷ ಕುಮಾರ ಗೌಡ, ಪ್ರಧಾನ ಕಾರ್ಯದರ್ಶಿ ಪುನೀತ್, ರಮೇಶ್, ಮಹಿಳಾ ಮೋರ್ಚಾ ಆಧ್ಯಕ್ಷೆ ತನುಜಾ ಮಹೇಶ್, ಮುಖಂಡರಾದ ಬಸವೇಗೌಡ ಸತೀಶ್, ದಶರಥ್, ಅವಿನಾಶ್, ಭೈರಪ್ಪ, ಮಂಜಪ್ಪ, ಅಶ್ವಥ್, ಶೋಭ, ಅನು, ಪದ್ಮ, ನಗರಪಾಲಿಕೆ ವಲಯ ಕಚೇರಿ-5ರ ಎಸಿ ವೀರೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »