ಇಂದು ರೈತ ಸಂಘದ ಪದಾಧಿಕಾರಿಗಳ ಪ್ರತಿಭಟನೆ
ಮೈಸೂರು

ಇಂದು ರೈತ ಸಂಘದ ಪದಾಧಿಕಾರಿಗಳ ಪ್ರತಿಭಟನೆ

April 20, 2020

ಮೈಸೂರು,ಏ.19(ಆರ್‍ಕೆಬಿ)-ಲಾಕ್‍ಡೌನ್ ಜಾರಿ ನಂತರ ಕೃಷಿ ಕ್ಷೇತ್ರದ ಮೇಲೆ ಭಾರೀ ಪರಿಣಾಮ ಉಂಟಾಗಿದೆ. ಎಲ್ಲಾ ವರ್ಗದ ಜನರು ಸಮಸ್ಯೆಗೆ ಸಿಲುಕಿ ದ್ದಾರೆ. ಆದರೆ, ರೈತರು, ಕೃಷಿ ಕಾರ್ಮಿಕರು ಹೆಚ್ಚು ಸಂಕಷ್ಟಕ್ಕೀಡಾಗಿದ್ದಾರೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಸರಕಾರ ದೊಡ್ಡ ಸುಳ್ಳು ಹೇಳುತ್ತಿದೆ. ರೈತರ ಸಮಸ್ಯೆಗೆ ಯಾರೂ ಸ್ಪಂದಿ ಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾ ಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.

ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಲಾಕ್‍ಡೌನ್ ಪರಿಣಾಮ ರಾಜ್ಯದ ರೈತರಿಗೆ 50,000 ಕೋಟಿ ನಷ್ಟವಾಗಿದೆ. ಈಗಾಗಲೇ ಮಾರುಕಟ್ಟೆ ಇಲ್ಲ ಎಂದು ನಾಲ್ಕು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ, ಏ.20ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ `ಜೀವ ಉಳಿಯಲಿ, ಜೀವನವು ನಡೆ ಯಲಿ, ಬೆಳೆಗಳಿಗೆ ಬೆಲೆ ಸಿಗಲಿ’ ಘೋಷಣೆಯೊಂ ದಿಗೆ ರಾಜ್ಯಾದ್ಯಂತ ರೈತ ಸಂಘದ ಪದಾಧಿಕಾರಿಗಳು ಎಲ್ಲೆಲ್ಲಿ ಇರುತ್ತಾರೋ ಅಲ್ಲಿಯೇ ಸತ್ಯಾಗ್ರಹ ನಡೆ ಸಲಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಕಾಪಾಡಿ ಕೊಳ್ಳಲಿದ್ದೇವೆ ಎಂದು ತಿಳಿಸಿದರು.

ಕೊರೊನಾ ವೈರಸ್ ತಡೆಗಟ್ಟುವಲ್ಲಿ ಸರ್ಕಾರ ವಿಫಲ ವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏ.20ರಿಂದ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿ, ಮರು ಗಳಿಗೆಯಲ್ಲೇ ಆದೇಶ ವನ್ನು ವಾಪಸ್ ಪಡೆಯುತ್ತಾರೆ. ಇದು ಒಬ್ಬ ಜವಾ ಬ್ದಾರಿಯುತ ಮುಖ್ಯಮಂತ್ರಿಯಾದವರು ನಡೆದುಕೊಳ್ಳುವ ರೀತಿಯೇ? ಎಂದು ಖಾರವಾಗಿ ಪ್ರಶ್ನಿಸಿದರು.

ಲಾಕ್‍ಡೌನ್ ಸಂದರ್ಭದಲ್ಲಿ ರಾಜಕಾರಣಿಗಳು ನಿರಾಶ್ರಿತರು, ಕೂಲಿ ಕಾರ್ಮಿಕರಿಗೆ ಕೇವಲ ಫುಡ್ ಪ್ಯಾಕೆಟ್, ಕಿಟ್‍ಗÀಳನ್ನು ಕೊಟ್ಟು ಫೆÇೀಟೋ ತೆಗೆಸಿ ಪ್ರಚಾರ ಪಡೆಯುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಟೀಕಿಸಿದರು.

ಜುಬಿಲಂಟ್ ಕಾರ್ಖಾನೆ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ: ಮೈಸೂರಿನಲ್ಲಿ ಕೋವಿಡ್-19 ಹರಡಲು ಪ್ರಮುಖ ಕಾರಣವಾದ ಜುಬಿಲಂಟ್ ಕಾರ್ಖಾನೆ ಸರಿ ಯಾದ ಮಾಹಿತಿ ನೀಡುತ್ತಿಲ್ಲ. ಅವರಿಗೆ ಯಾವುದೇ ಹಿನ್ನೆಲೆ ಇದ್ದರೂ ಕೂಡ ಕಾರ್ಖಾನೆಯನ್ನು ತೆರೆಯಲು ಬಿಡಬಾರದು. ಮೈಸೂರಿನಲ್ಲಿ ವೈರಸ್ ಹರಡಿ ಇಷ್ಟೆಲ್ಲಾ ಭೀಕರತೆಗೆ ಕಾರಣರಾದ ಕಾರ್ಖಾನೆ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿ ಯಲ್ಲಿ ರೈತಸಂಘದ ಪದಾಧಿಕಾರಿಗಳಾದ ಪಿ.ಮರಂ ಕಯ್ಯ, ಚಂದ್ರೇಗೌಡ, ಮಹೇಶ್ ಉಪಸ್ಥಿತರಿದ್ದರು.

Translate »