ಕೊರೊನಾ ವೈರಾಣು ವುಹಾನ್ ಲ್ಯಾಬ್‍ನಲ್ಲಿ ಮನುಷ್ಯ ಸೃಷ್ಟಿಸಿದ್ದು
ಮೈಸೂರು

ಕೊರೊನಾ ವೈರಾಣು ವುಹಾನ್ ಲ್ಯಾಬ್‍ನಲ್ಲಿ ಮನುಷ್ಯ ಸೃಷ್ಟಿಸಿದ್ದು

April 20, 2020

ಪ್ಯಾರಿಸ್: ಕೊರೊನಾ ವೈರಸ್ ಮನು ಷ್ಯನ ಸೃಷ್ಟಿ ಎಂಬ ಆರೋಪವನ್ನು ಫ್ರೆಂಚ್ ವೈರಾಲ ಜಿಸ್ಟ್ ಮಾಡಿದ್ದಾರೆ. ಏಡ್ಸ್ ವೈರಸ್‍ಗೆ ಸಂಬಂಧಿಸಿದಂತೆ ನಡೆದ ಸಂಶೋಧನೆಯಲ್ಲಿ ಸಹ-ಸಂಶೋಧಕರಾಗಿದ್ದ ಫ್ರೆಂಚ್ ವೈರಾಲ ಜಿಸ್ಟ್ ಲುಕ್ ಮೊಂಟಾಗ್ನಿಯರ್ ಈ ಆರೋಪ ಮಾಡಿದ್ದಾರೆ. 2008ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರ ವಿಸಲಾಗಿತ್ತು. ಈಗ ಕೊರೊನಾ ವೈರಸ್ ಬಗ್ಗೆ ಮಾತನಾಡಿರುವ ಮೊಂಟಾಗ್ನಿ ಯರ್, ಚೀನಾದ ಪ್ರಯೋಗಾಲಯ ದಲ್ಲಿ ಏಡ್ಸ್ ವೈರಸ್‍ಗೆ ಲಸಿಕೆ ಕಂಡು ಹಿಡಿ ಯುವ ಪ್ರಯತ್ನದಲ್ಲಿ ಈ ವೈರಸ್‍ನ್ನು ಮನುಷ್ಯನೇ ಸೃಷ್ಟಿಸಿದ್ದಾನೆ. ಇದು ನೈಸ ರ್ಗಿಕವಾಗಿ ಉತ್ಪತ್ತಿಯಾಗಿರುವ ವೈರಸ್ ಅಲ್ಲ. ಮಾನವ ಸೃಷ್ಟಿ ವೈರಸ್ ಎಂದು ಹೇಳಿದ್ದಾರೆ. ಫ್ರೆಂಚ್‍ನ ಸುದ್ದಿವಾಹಿನಿ ಯೊಂದು ನಡೆಸಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಲ್ಯೂಕ್ ಮೊಂಟಾಗ್ನಿಯರ್, ಕೊರೊನಾ ವೈರಸ್‍ನ ಜೀನೋಮ್ (ಜೀವಕೋಶಗಳ ಗುಚ್ಛ) ದಲ್ಲಿ ಹೆಚ್‍ಐವಿ ಅಂಶಗಳು, ಮಲೇ ರಿಯಾ ವೈರಾಣು ಇರುವುದು ಪತ್ತೆಯಾಗಿದೆ. ಇದು ಸ್ವಾಭಾವಿಕವಾಗಿ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಕೊರೊನಾ ಜೀನೋಮ್ ಅತ್ಯಂತ ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ. 2000 ರಿಂದಲೂ ಚೀನಾದ ವುಹಾನ್ ರಾಷ್ಟ್ರೀಯ ಬಯೋ ಸೇಫ್ಟಿ ಲ್ಯಾಬೊರೇಟರಿಯಲ್ಲಿ ಇಂತಹ ಕೊರೊನಾ ವೈರಸ್‍ಗಳಲ್ಲಿ ಪರಿಣತಿ ಪಡೆದಿದೆ. ಇಲ್ಲಿಂದಲೇ ಆಕಸ್ಮಿಕವಾಗಿ ಬಂದಿರಬೇಕು ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಸೋರಿಕೆಯಾಗಿರುವುದು ಹೇಗೆ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಮೆರಿಕ ಹೇಳಿತ್ತು. ಇದಾದ ಬೆನ್ನಲ್ಲೇ ಫ್ರೆಂಚ್‍ನ ವೈರಾಲಜಿಸ್ಟ್ ಈ ಹೇಳಿಕೆ ನೀಡಿದ್ದಾರೆ. ಏಡ್ಸ್ ಹಾಗೂ ಪಾರ್ಕಿನ್ಸನ್ ಸಮಸ್ಯೆಗಳಿಗೆ ಪಪಾಯದಿಂದ ಉಂಟಾ ಗುವ ಉಪಯೋಗಗಳು, ಡಿಎನ್‍ಎಯಿಂದ ವಿದ್ಯುತ್ಕಾಂತೀಯ ಅಲೆಗಳು ಹೊರಹೊಮ್ಮು ವುದು ಹೀಗೆ ಲ್ಯೂಕ್ ಮೊಂಟಾಗ್ನಿಯರ್ ಅವರ ಹಲವು ಸಂಶೋಧನಾ ಕೃತಿಗಳು ವಿವಾದ ಗಳಿಗೆ ಗುರಿಯಾಗಿತ್ತು. ವೈಜ್ಞಾನಿಕ ಸಮುದಾಯವೂ ಈ ಬಗ್ಗೆ ಟೀಕಿಸಿತ್ತು. ಫ್ರೆಂಚ್ ವೈರಾಲ ಜಿಸ್ಟ್ ಎಟಿಯೆನ್ ಸೈಮನ್-ಲೋರಿಯೆರ್ ಮೊಂಟಾಗ್ನಿಯರ್ ಅವರ ಹೇಳಿಕೆಗಳನ್ನು ಅಲ್ಲಗಳೆದಿದ್ದು, ಕೊರೊನಾ ವೈರಸ್‍ನ ಸಮುದಾಯದ ಬೇರೆ ವೈರಾಣುಗಳಲ್ಲಿಯೂ ಮೊಂಟಾಗ್ನಿಯರ್ ಅವರು ಹೇಳಿರುವ ಅಂಶಗಳಿರುತ್ತವೆ ಎಂದು ಹೇಳಿದ್ದಾರೆ.

Translate »