ಕುಡಿದ ನಶೆಯಲ್ಲಿ ಯುವತಿಯರ ರಂಪಾಟ: ಇನ್‍ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನ
ಮೈಸೂರು

ಕುಡಿದ ನಶೆಯಲ್ಲಿ ಯುವತಿಯರ ರಂಪಾಟ: ಇನ್‍ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನ

April 20, 2020

ಬೆಂಗಳೂರು,ಏ.19-ಕೊರೊನಾ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಅದರಲ್ಲೂ ಸಿಲಿಕಾನ್ ಸಿಟಿ ಯಲ್ಲಿ ಕೆಲವು ಕಡೆ ಕಟ್ಟುನಿಟ್ಟಿನ ರೀತಿಯಲ್ಲಿ ಸೀಲ್‍ಡೌನ್ ಕೂಡ ಮಾಡಲಾಗಿದೆ. ಆದರೆ ಈ ಮಧ್ಯೆ ಯುವತಿಯರಿಬ್ಬರು ಕುಡಿದ ನಶೆ ಯಲ್ಲಿ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ತಡೆಯಲು ಬಂದ ಇನ್ ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿ ಸಲು ಯತ್ನಿಸಿ ನಂತರ ಪರಾರಿ ಯಾದರೂ, ಹರಸಾಹಸ ಮಾಡಿ ಪೊಲೀಸರು ಯುವತಿಯರನ್ನು ಬಂಧಿಸಿದ್ದಾರೆ. ಬಂಧಿತ ಯುವತಿಯರನ್ನು ಶಕ್ತಿ ನಾಯರ್, ಮಧುಮಿತ ಎಂದು ಗುರುತಿಸಲಾಗಿದೆ. ಈ ಇಬ್ಬರು ಬೆಂಗಳೂರಿನ ಬಳ್ಳಾರಿ ರಸ್ತೆಯ ಲೀಲಾ ಪ್ಯಾಲೇಸ್ ಚೆಕ್‍ಪೆÇೀಸ್ಟ್ ಬಳಿ ಇಂದು ಮಧ್ಯಾಹ್ನ ರಂಪಾಟ ಮಾಡಿದ್ದರು. ಪೆÇಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದಾಗ, ನಶೆ ಯಲ್ಲಿದ್ದ ಈ ಯುವತಿಯರು ಕಾರನ್ನು ವೇಗವಾಗಿ ಡ್ರೈವಿಂಗ್ ಮಾಡಿಕೊಂಡು ಬಂದಿದ್ದಾರೆ. ಈ ವೇಳೆ ಇನ್ಸ್‍ಪೆಕ್ಟರ್ ಕಾರನ್ನು ಅಡ್ಡ ಹಾಕಿದ್ದಾರೆ. ಆದರೆ ಯುವತಿಯರು ನಿಲ್ಲಿಸದೆ ಇನ್ಸ್‍ಪೆಕ್ಟರ್ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದು, ನಂತರ ಅಲ್ಲಿಂದ ಪರಾರಿ ಯಾಗಿದ್ದರು. ಚೆಕ್‍ಪೆÇೀಸ್ಟ್‍ನಲ್ಲಿ ಯುವತಿಯರ ರಂಪಾಟ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ನಂತರ ಜೆ.ಬಿ.ನಗರ ಪೆÇಲೀಸರು ಯುವತಿ ಯರ ಕಾರನ್ನು ಸುಮಾರು 1 ಕಿ.ಮೀ ದೂರ ಚೇಸ್ ಮಾಡಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ನಮ್ಮ ಹತ್ತಿರ ಪಾಸ್ ಇದೆ. ನಮಗೆ ಮೇಲಾಧಿಕಾರಿಗಳು ಗೊತ್ತು ಎಂದು ಆವಾಜ್ ಹಾಕಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆ ಸ್ಥಳದಲ್ಲಿದ್ದ ಯುವಕರು, ಯುವತಿಯರನ್ನು ಪ್ರಶ್ನೆ ಮಾಡಿದ್ದಾರೆ. ಅವರೊಂದಿಗೂ ಯುವತಿಯರು ವಾಗ್ವಾದ ನಡೆಸಿದ್ದಾರೆ. ನಂತರ ಸಾಧ್ಯವಾದರೆ ನಮ್ಮನ್ನು ಹಿಡಿಯಿರಿ ಎಂದು ಚಾಲೆಂಜ್ ಹಾಕಿ ಮತ್ತೆ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದರು. ಆದರೆ ಪೆÇಲೀಸರ ತಂಡ ವೊಂದು ಯುವತಿಯರ ಕಾರನ್ನು ಬೆನ್ನಟ್ಟಿ ತಡೆದು ಅವರನ್ನು ಬಂಧಿಸಿದೆ. ಜೆ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ವರದಿ: ಮದ್ಯ ವ್ಯಸನಿಗಳು ಇನ್ನೊಂ ದೆಡೆ ಚಿಕ್ಕಮಗಳೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಶನಿವಾರ ರಾತ್ರಿ ಕನ್ನ ಹಾಕಿದ್ದಾರೆ. 26 ದಿನಗಳಿಂದ ಮದ್ಯ ಸಿಗದೇ ಕಂಗಾಲಾಗಿದ್ದ ಜನ ಇದೀಗ ಕಳ್ಳತನಕ್ಕೆ ಇಳಿದಿದ್ದಾರೆ. ರೆಸ್ಟೋರೆಂಟ್ ಕಿಟಕಿಯ ಗಾಜನ್ನು ಒಡೆದು, ಸರಳನ್ನು ಆಕ್ಸಲ್ ಬ್ಲೇಡಿನಿಂದ ಕೊಯ್ದು ಒಳ ನುಗ್ಗಿದ್ದಾರೆ. 7 ಬಾಕ್ಸ್ ಲೋಕಲ್ ಬ್ರಾಂಡ್ ಮದ್ಯದ ಬಾಟಲಿ ಹೊತ್ತೊಯ್ದಿದ್ದಾರೆ. ಹಿರೇಮಗಳೂರು ರಸ್ತೆಯ ಪಾರ್ಕ್ ಇನ್ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಕನ್ನ ಹಾಕಿರೋ ಚಟಗಾರರು, ಕೇವಲ ಲೋಕಲ್ ಬ್ರಾಂಡ್ ಮದ್ಯದ ಬಾಟಲಿಗಳನ್ನಷ್ಟೇ ಕದ್ದು ಕೊಂಡು ಹೋಗಿರುವುದು, ಜಾನಿ ವಾಕರ್‍ನಂತಹ ದುಬಾರಿ ಬೆಲೆಯ ಉತ್ತಮ ಬ್ರಾಂಡ್‍ನ ಮದ್ಯದ ಬಾಟಲಿಗಳನ್ನು ಅಂಗಡಿಯಲ್ಲೇ ಬಿಟ್ಟು ಹೋಗಿರುವುದು ಅಚ್ಚರಿಗೆ ಕಾರಣವಾಗಿದೆ. ಪುಕ್ಕಟೆ ಸಿಕ್ಕರೂ ನಾವು ನಮ್ಮ ಮದ್ಯದ ಬ್ರಾಂಡ್ ಬದಲಿಸಲ್ಲ ಎಂಬಂತಿದೆ ಈ ಕುಡುಕರ ಕಥೆ. ಘಟನಾ ಸ್ಥಳಕ್ಕೆ ಅಬಕಾರಿ ಅಧಿಕಾರಿಗಳು ಮತ್ತು ಪೆÇಲೀ ಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚೆನ್ನೈ ವರದಿ: ತಮಿಳುನಾಡಿದ ನಮಕ್ಕಲ್ ಗ್ರಾಮದಲ್ಲಿ ಮದ್ಯಕ್ಕಾಗಿ ಹಪಾಹಪಿಸುತ್ತಿದ್ದ ಇಬ್ಬರು ಯುವಕರು, ಮದ್ಯ ಕ್ಕಾಗಿ ಏನಾದರೂ ಉಪಾಯ ಮಾಡಲೇಬೇಕು ಎಂದು ಛಲ ತೊಟ್ಟಿದ್ದಾರೆ. ಅದರ ಫಲವೇ ಸ್ವಂತವಾಗಿ ಮದ್ಯ ತಯಾರಿಕೆ! ಇಂಟರ್‍ನೆಟ್‍ನಲ್ಲಿ ಮದ್ಯ ತಯಾರಿಕೆಯ ವಿಡಿಯೋ ಹುಡುಕಿ ವೀಕ್ಷಿಸಿದ ಈ ಯುವಕರು, ಅದೇ ಮಾದರಿಯಲ್ಲಿ ಮನೆಯಲ್ಲಿ ತಾವೇ ಮದ್ಯ ತಯಾರಿಸಿದ್ದಾರೆ. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಂಡಿದ್ದ ಯುವ ಕರು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೈಗೆ ಬಂದ ಬಾಟಲಿ ಬಾಯಿಗಿಲ್ಲವಾಯಿತೇ ಎಂದು ಈಗ ಪೊಲೀಸ್ ಠಾಣೆಯಲ್ಲಿ ಶೋಕಗೀತೆ ಹಾಡುತ್ತಿದ್ದಾರೆ! ಮನೆಯಲ್ಲಿ ನಾವೇ ಮದ್ಯ ತಯಾರಿಸಿದರೆ ಯಾರಿಗೂ ತಿಳಿಯುವುದಿಲ್ಲ ಎಂದುಕೊಂಡ ಯುವಕರು, ಮದ್ಯ ತಯಾರಿಕೆಗೆ ಬೇಕಿರುವ ಅಗತ್ಯ ವಸ್ತುಗಳನ್ನು ಆನ್‍ಲೈನ್ ಮೂಲಕವೇ ತರಿಸಿಕೊಂಡರು. ಬಳಿಕ ಮದ್ಯ ತಯಾರಿ ಸಲು ಆರಂಭಿಸಿ ಬಹುತೇಕ ಯಶಸ್ವಿಯೂ ಆದರು. ಇನ್ನೇನು ಅಂತಿಮ ಹಂತದ ತಯಾರಿಕೆ ನಡೆದಿತ್ತು. ಅಷ್ಟರಲ್ಲೇ ಬಾಗಿಲು ದಡದಡ ಬಡಿದ ಸದ್ದು. ಯಾರಪ್ಪ ಬಂದವರು ಎಂದು ಬಾಗಿಲು ತೆರೆದು ನೋಡಿದರೆ ಎದುರಿಗೆ ಪೆÇಲೀಸರು! ತಾವು ತಯಾರಿಸಿದ ಮದ್ಯದ ಬಾಟಲಿ ಬಾಯಿಗಿಟ್ಟು ಸವಿಯುವ ಕನಸು ಕಾಣುತ್ತಿದ್ದ ಯುವಕರಿಗೆ ಪೆÇಲೀಸರನ್ನು ಕಂಡು ಜಂಘಾಬಲವೇ ಉದುಗಿದಂತಾಗಿದೆ. ಇನ್ನೇನು ತಲೆಗೇರಲಿದ್ದ ನಶೆ ಥಟ್ಟನೆ ಇಳಿದಂತಾಗಿದೆ.

ಯುವಕರು ಮದ್ಯ ತಯಾರಿಕೆಗೆ ಬೇಕಾದ ಕಚ್ಚಾಪದಾರ್ಥಗಳನ್ನು ಆನ್‍ಲೈನ್‍ನಲ್ಲಿ ತರಿಸಿಕೊಂಡಿದ್ದು ನೋಡಿಯೇ ಪೆÇಲೀಸರಿಗೆ ಗುಮಾನಿ ಬಂದಿದೆ. ಅವರು ಮನೆ ಮೇಲೆ ದಾಳಿ ಮಾಡಿಯೇ ಬಿಟ್ಟಿದ್ದಾರೆ. ಅದೃಷ್ಟ ಕೈಕೊಟ್ಟು ಯುವಕರು ಸಿಕ್ಕಿಬಿದ್ದಿದ್ದಾರೆ. ಅಲ್ಲದೇ ಮದ್ಯ ತಯಾರಿಕಾ ವಸ್ತು ಮತ್ತು ಸ್ಥಳದಲ್ಲಿದ್ದ ಕಂಟೇನರ್ ಎಲ್ಲವನ್ನೂ ವಶಕ್ಕೆ ಪಡೆದು ಯುವಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

Translate »