ಚಾಮುಂಡಿಬೆಟ್ಟಕ್ಕೆ ರೋಪ್‍ವೇ, ರೈಲಿಂಗ್ ಅಳವಡಿಕೆಗೆ ತೀವ್ರ ವಿರೋಧ
ಮೈಸೂರು

ಚಾಮುಂಡಿಬೆಟ್ಟಕ್ಕೆ ರೋಪ್‍ವೇ, ರೈಲಿಂಗ್ ಅಳವಡಿಕೆಗೆ ತೀವ್ರ ವಿರೋಧ

March 16, 2022

ಮೈಸೂರು, ಮಾ.15 (ಆರ್‍ಕೆಬಿ)- ಚಾಮುಂಡಿ ಬೆಟ್ಟದ ರೋಪ್‍ವೇ ಯೋಜನೆ ಮತ್ತು ಮೆಟ್ಟಿಲುಗಳಿಗೆ ರೈಲಿಂಗ್ ನಿರ್ಮಿಸುವ ಸರ್ಕಾರದ ನಿರ್ಧಾರಕ್ಕೆ ಮೈಸೂರಿನ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಮೈಸೂರಿನ ರಾಮಕೃಷ್ಣ ಪರಮಹಂಸ ವೃತ್ತದ ಬಳಿಯ ರಾಮಕೃಷ್ಣ ಉದ್ಯಾನವನದಲ್ಲಿ ಮಂಗಳವಾರ ನಡೆದ ಚಾಮುಂಡಿಬೆಟ್ಟ ಉಳಿಸಿ ಸಮಿತಿಯ ತುರ್ತು ಸಭೆಯಲ್ಲಿ ಇದಕ್ಕೆ ಭಾರೀ ವಿರೋಧ ಕೇಳಿಬಂದಿತು.

ಸಮಿತಿಯ ಸಂಚಾಲಕ ಪರಶುರಾಮೇಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿ ಸಿದ್ದ ಪಾರಂ¥ರಿಕ ತಜ್ಞರು, ಪರಿಸರವಾದಿ ಗಳೂ, ವಿದ್ವಾಂಸರು, ನಿಸರ್ಗ ಪ್ರೇಮಿ ಗಳು, ಸಾರ್ವಜನಿಕರು ಚಾಮುಂಡಿಬೆಟ್ಟಕ್ಕೆ ರೋಪ್‍ವೇ ನಿರ್ಮಿಸುವುದನ್ನು ವಿರೋಧಿ ಸಿದರು. ಅಭಿವೃದ್ಧಿ ಹೆಸರಿನಲ್ಲಿ ರೋಪ್‍ವೇ ನಿರ್ಮಿಸುವುದಾಗಲೀ, ಮೆಟ್ಟಿಲುಗಳಿಗೆ ರೈಲಿಂಗ್ ನಿರ್ಮಿಸುವುದಾಗಲೀ ಅಥವಾ ಕಟ್ಟಡಗಳನ್ನು ನಿರ್ಮಿಸುವುದಾಗಲೀ ಕೂಡದು. ಬೆಟ್ಟದ ಸಂರಕ್ಷಣೆ ದೃಷ್ಟಿಯಿಂದ ಇದಕ್ಕಾಗಿ ತಮ್ಮ ಹೋರಾಟ ನಿರಂತರವಾಗಿ ಇರಲಿದೆ ಎಂದು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.

ಪಾರಂಪರಿಕ ತಜ್ಞ ಪ್ರೊ.ರಂಗರಾಜು, ಕತೆಗಾರ ಪ್ರೊ.ಕಾಳೇಗೌಡ ನಾಗವಾರ, ಚಾಮುಂಡಿಬೆಟ್ಟ ಉಳಿಸಿ ಸಮಿತಿ ಸಂಚಾಲಕ ಪರಶುರಾಮೇಗೌಡ, ಕ್ಲೀನ್ ಮೈಸೂರು ಫೌಂಡೇಷನ್‍ನ ನಿರ್ದೇಶಕಿ ಲೀಲಾ ವೆಂಕಟೇಶ್, ಅಂಕಣಗಾರ್ತಿ ಕುಸುಮಾ ಆಯರಹಳ್ಳಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದ ಸಭೆಯಲ್ಲಿ, ನೈಸರ್ಗಿಕವಾಗಿ ರೂಪುಗೊಂಡ ಚಾಮುಂಡಿ ಬೆಟ್ಟವನ್ನು ಈಗ ಹೇಗಿದೆಯೋ ಹಾಗೇ ಇರಲಿ ಬಿಡಿ, ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟಕ್ಕೆ ಹಾನಿ ಮಾಡುವುದು ಬೇಡ. ಪ್ರಕೃತಿದತ್ತವಾದ ಬೆಟ್ಟವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟವನ್ನು ನಾಶಪಡಿಸುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮೈಸೂರು ಪಾರಂಪರಿಕ ಪ್ರದೇಶದ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಪರಿಣಿತ ಸಮಿತಿಯ ಸದಸ್ಯ ಮತ್ತು ಸಂಚಾಲಕ, ಕಲೆ ಮತ್ತು ಸಾಂಸ್ಕೃತಿಕ ಪರಂಪರೆಗಾಗಿ ಭಾರತೀಯ ರಾಷ್ಟ್ರೀಯ ಟ್ರಸ್ಟ್‍ನ ಪೆÇ್ರ.ಎನ್.ಎಸ್.ರಂಗರಾಜು ಮಾತನಾಡಿ, 2004ರಲ್ಲಿ ಮೈಸೂರು ಪಾರಂಪರಿಕ ನಗರ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಮೈಸೂರು, ಶ್ರೀರಂಗಪಟ್ಟಣ, ವಿಜಯಪುರ, ಕಲಬುರಗಿ ಇನ್ನಿತರೆ ಪ್ರದೇಶಗಳು ಸರ್ಕಾರದ ಆದೇಶದಂತೆ ಪಾರಂಪರಿಕ ಪ್ರದೇಶವಾಗಿವೆ. 2014ರಲ್ಲಿ ಬಾದಾಮಿ, ಬೇಲೂರು, ಹಳೇಬೀಡು ಸೇರಿದಂತೆ 14 ನಗರಗಳನ್ನು ಇದರ ವ್ಯಾಪ್ತಿಗೆ ಸೇರಿಸಲಾಗಿತ್ತು. ಅದೇ ವರ್ಷ, ಬೆಂಗಳೂರನ್ನು ಪಾರಂಪರಿಕ ನಗರಗಳ ಪಟ್ಟಿಗೆ ಸೇರಿಸಲಾಯಿತು. ಈಗ ಮೈಸೂರು ಮತ್ತು ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ತನ್ನದೇ ಆದ ಸಾಂಪ್ರದಾಯಿಕ ಮತ್ತು ಧಾರ್ಮಿಕ ಮಹತ್ವ ಹೊಂದಿರುವ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಅಗತ್ಯವಿಲ್ಲ. ಉದ್ಧೇಶಿತ ಯೋಜನೆ ಕೇವಲ ವ್ಯಾಪಾರೀ ದೃಷಿಯಿಂದ ಸರ್ಕಾರ ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಹೆಸರಿನಲ್ಲಾಗುವ ವಿನಾಶದಿಂದ ಬೆಟ್ಟವನ್ನು ಸಂರಕ್ಷಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಮಾತನಾಡಿ, ನಾನು ಇತಿಹಾಸ ತಜ್ಞನಲ್ಲದಿದ್ದರೂ ಚಾಮುಂಡಿ ಬೆಟ್ಟವನ್ನು ನೋಡುತ್ತಾ ಬೆಳೆದಿದ್ದೇನೆ. ಚಾಮುಂಡಿ ಬೆಟ್ಟವು ಸೂಕ್ಷ್ಮವಾದ ಬಂಡೆಗಳಿಂದ ಕೂಡಿದ್ದು, ಪಿಲ್ಲರ್‍ಗಳನ್ನು ನಿರ್ಮಿಸಲು ಕಂದಕ ಅಥವಾ ದೊಡ್ಡ ದೊಡ್ಡ ಗುಂಡಿಗಳನ್ನು ಅಗೆಯಬೇಕಾಗುತ್ತದೆ. ಇದು ಬೆಟ್ಟಕ್ಕೆ ತೀವ್ರ ಅಪಾಯಕಾರಿ. ರೋಪ್‍ವೇ ಯೋಜನೆಯು ಹಸಿರಿನ ನಾಶಕ್ಕೆ ಕಾರಣವಾಗುತ್ತದೆ. ಬೆಟ್ಟವು ಬರಡಾಗುವ ಅಪಾಯವಿದೆ. ಪ್ರಕೃತಿಯ ಕೊಡುಗೆ ಯಾದ ಚಾಮುಂಡಿಬೆಟ್ಟವನ್ನು ನಾಶಪಡಿಸಿದರೆ ಅದನ್ನು ಮರಳಿ ತರಲು ಸಾಧ್ಯವಾಗುವುದಿಲ್ಲ ಎಂಬ ಸತ್ಯವನ್ನು ಎಲ್ಲರೂ ಅರಿತುಕೊಳ್ಳಬೇಕು. ರೋಪ್‍ವೇ ಮತ್ತು ರೈಲಿಂಗ್ ನಿರ್ಮಾಣದ ಸರ್ಕಾರದ ಈ ಯೋಜನೆಯನ್ನು ಮೈಸೂರಿಗರು ಒಗ್ಗೂಡಿ ವಿರೋಧಿಸ ಬೇಕು ಎಂದು ಮನವಿ ಮಾಡಿದರು.

ಚಾಮುಂಡಿ ಬೆಟ್ಟದ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ವಿನಾಶದ ಕುರಿತು ಚರ್ಚಿ ಸಲು ಧಾರ್ಮಿಕ ಮುಖಂಡರು, ವಿಜ್ಞಾನಿಗಳು, ಪರಂಪರೆ ತಜ್ಞರು, ರಾಜಕೀಯ ಮುಖಂಡರು, ಪರಿಸರವಾದಿಗಳು ಮತ್ತು ಇತರರನ್ನು ಒಳಗೊಂಡ ಒಂದು ದಿನದ ವಿಚಾರ ಸಂಕಿರಣ ವನ್ನು ನಡೆಸಲು ಸಭೆಯಲ್ಲಿ ನಿರ್ಧರಿಸಲಾ ಯಿತು. ಶೀಘ್ರದಲ್ಲೇ ಇದರ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಸಮಿತಿ ಸಂಚಾಲಕ ಪರಶುರಾಮೇಗೌಡ ಸಭೆಯಲ್ಲಿ ತಿಳಿಸಿದರು.

ಸ್ವಚ್ಛ ಮೈಸೂರು ಪ್ರತಿಷ್ಠಾನದ ನಿರ್ದೇಶಕಿ ಲೀಲಾ ವೆಂಕಟೇಶ್, ಲೀಲಾ ಶಿವಕುಮಾರ್, ಸುಗುಣ, ಸುಶೀಲಾ, ಪರಿಸರ ಬಳಗದ ಅಂಜನಾ, ರಾಮೇಗೌಡ, ಪ್ರಭಾ, ನಿವೃತ್ತ ಎಇಇ ಮಂಜುನಾಥ್, ಪಕ್ಷಿ ವೀಕ್ಷಕ ಶೈಲಜೇಶ್, ಡಿ.ಎಚ್.ತನುಜಾ, ಸಾದಿಕ್ ಪಾಷಾ, ಕುಸುಮಾ ಆಯರಹಳ್ಳಿ, ಹಿರಿಯಣ್ಣ, ಸಿದ್ದಲಿಂಗಪ್ಪ, ಗಂಟಯ್ಯ, ಎಂ.ವೆಂಕಟೇಶ್, ರಾಮೇಗೌಡ, ಗೀತಾ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »