2020ಕ್ಕೆ ಬೆಂಗಳೂರಿನಲ್ಲಿ ಐದನೇ ವಿಶ್ವ ಕಾಫಿ ಸಮ್ಮೇಳನ
ಕೊಡಗು

2020ಕ್ಕೆ ಬೆಂಗಳೂರಿನಲ್ಲಿ ಐದನೇ ವಿಶ್ವ ಕಾಫಿ ಸಮ್ಮೇಳನ

July 3, 2018
  • ಭಾರತದಲ್ಲಿ ಪ್ರಥಮ ಬಾರಿಗೆ ಆಯೋಜನೆ
  • ದೆಹಲಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ

ಮಡಿಕೇರಿ: ಭಾರತದಲ್ಲಿ ಇದೇ ಪ್ರಥಮ ಬಾರಿಗೆ ವಿಶ್ವ ಕಾಫಿ ಸಮ್ಮೇಳನವನ್ನು ಆಯೋ ಜಿಸುವ ಕುರಿತು ತೀರ್ಮಾನಿಸ ಲಾಗಿದೆ. ಕಾಫಿ ಉತ್ಪಾದಿಸುವ ವಿವಿಧ ದೇಶಗಳಲ್ಲಿ ಈ ತನಕ ನಾಲ್ಕು ವಿಶ್ವ ಕಾಫಿ ಸಮ್ಮೇಳನ ನಡೆದಿದ್ದು, ಐದನೇ ಸಮ್ಮೇಳನವನ್ನು ಭಾರತದಲ್ಲಿ ಏರ್ಪಡಿಸುವ ಕುರಿತು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ವಿವಿಧ ಕಾಫಿ ಬೆಳೆಗಾರರ ಸಂಘಟನೆಗಳು ಹಾಗೂ ವಾಣ ಜ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಹಿಂದೆ ಕಾಫಿ ಉತ್ಪಾದಿಸುವ ದೇಶ ಗಳಾದ ಬ್ರೆಜಿಲ್, ಜರ್ಮನಿ, ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಈ ಸಮ್ಮೇಳನ ನಾಲ್ಕು ಬಾರಿ ನಡೆದಿದೆ. ಇದೀಗ 2020ನೇ ಇಸವಿಯಲ್ಲಿ ಭಾರತದಲ್ಲಿ ಐದನೇ ಸಮ್ಮೇಳನವನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಇದಕ್ಕೆ ಬಹುತೇಕ ಒಪ್ಪಿಗೆಯಾಗಿದೆ. ಸಮ್ಮೇಳನ ಆಯೋ ಜನೆಯ ಕುರಿತಾಗಿ ಇದು ಪೂರ್ವಭಾವಿ ಯಾಗಿ ನಡೆದ ಪ್ರಥಮ ಸಭೆಯಾಗಿದ್ದು, ಈ ನಿಟ್ಟಿನಲ್ಲಿ ಇನ್ನಷ್ಟು ಸಭೆಗಳು ನಡೆಯಲಿವೆ. ಕರ್ನಾಟಕದ ರಾಜ ಧಾನಿ ಬೆಂಗಳೂರಿನಲ್ಲಿ ಈ ಕಾರ್ಯ ಕ್ರಮ ಏರ್ಪಡಿಸಲು ನಿರ್ಣಯ ಕೈಗೊಳ್ಳಲಾಗಿದೆ. 2020ರ ಸೆಪ್ಟೆಂ ಬರ್ ತಿಂಗಳಿನಲ್ಲಿ ಈ ಸಮ್ಮೇಳನ ಆಯೋಜಿಸುವ ಚಿಂತನೆ ನಡೆಸ ಲಾಗಿದ್ದು, ಬೆಂಗಳೂರಿನ ಪೀಣ್ಯದ ಕೈಗಾರಿಕಾ ಪ್ರದೇಶವನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಭಾರತ ಸರ್ಕಾರದ ವಾಣ ಜ್ಯ ಇಲಾಖೆಯ ಕಾರ್ಯದರ್ಶಿ ರೀಟಾ ಟಿಯಾಟಿ ಯ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದ್ದು, ಸಭೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್) ಇಂಡಿಯನ್ ಕಾಫಿ ಟ್ರಸ್ಟ್ (ಐಸಿಟಿ) ಉಪಾಸಿ, ಸಂಘಟನೆಗಳು ಸೇರಿದಂತೆ ನೆಸ್ಲೆ, ಟಾಟಾ, ಕೋಕ್ ಸೇರಿದಂತೆ ಇನ್ನಿತರ ಕಾಫಿ ಸಂಸ್ಥೆಗಳು ಪಾಲ್ಗೊಂಡಿದ್ದವು.

Translate »