ಸರ್ಕಾರ ನೀಡಿದ ವಸತಿ ಬೇಡ, ಮನೆಯಿಂದಲೇ ಕೆಲಸ ಮಾಡುವೆ ಎಂದ ಬಿಎಸ್‍ವೈ
ಮೈಸೂರು

ಸರ್ಕಾರ ನೀಡಿದ ವಸತಿ ಬೇಡ, ಮನೆಯಿಂದಲೇ ಕೆಲಸ ಮಾಡುವೆ ಎಂದ ಬಿಎಸ್‍ವೈ

July 3, 2018

ಬೆಂಗಳೂರು: ತಮ್ಮ ಪಾಲಿನ ಅದೃಷ್ಟದ ನಿವಾಸ ನೀಡುವ ಬದಲು ರಾಜ್ಯ ಸರ್ಕಾರವು ಬೇರೆ ನಿವಾಸ ನೀಡಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದು, ಹಂಚಿಕೆ ಮಾಡಿರುವ ಸರ್ಕಾರಿ ವಸತಿ ಯನ್ನು ತಿರಸ್ಕರಿಸಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ರೇಸ್ ವ್ಯೂ ಕಾಟೇಜ್ ನಂ.2 ನಿವಾಸದಲ್ಲಿ ತಂಗಿದ್ದರು. ಇದು ಅವರ ಅದೃಷ್ಟದ ಮನೆ ಎಂದೇ ಭಾವಿಸಲಾಗಿತ್ತು. ಹೀಗಾಗಿ ಮತ್ತೊಮ್ಮೆ ಅದೇ ನಿವಾಸ ನೀಡುವಂತೆ ಕೋರಿ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಆದರೆ, ಯಡಿಯೂರಪ್ಪ ಮನವಿಯನ್ನು ತಿರಸ್ಕರಿಸಿದ ರಾಜ್ಯ ಸರ್ಕಾರವು ರೇಸ್ ವ್ಯೂ ಕಾಟೇಜ್ ನಂ.4 ನಿವಾಸವನ್ನು ಹಂಚಿಕೆ ಮಾಡಿದೆ. ಯಡಿಯೂರಪ್ಪ ಅವರು ಬಯಸಿದ್ದ ರೇಸ್ ವ್ಯೂ ಕಾಟೇಜ್ ನಂ.2 ಸಂಖ್ಯೆಯ ನಿವಾಸವನ್ನು ಸಚಿವ ಸಾ.ರಾ.ಮಹೇಶ್ ಅವರಿಗೆ ನೀಡಲಾಗಿದೆ.

ಸರ್ಕಾರದ ಈ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಯಡಿಯೂರಪ್ಪರ ಅವರು, ಸರ್ಕಾರಿ ನಿವಾಸಕ್ಕೆ ತೆರಳದೆ ಸ್ವಂತ ಮನೆಯಲ್ಲಿಯೇ ಇರಲು ನಿರ್ಧರಿಸಿದ್ದಾರೆ. ನನಗೆ ನೀಡಿರುವ ರೇಸ್ ವ್ಯೂ ಕಾಟೇಜ್ ನಂ.4 ನಿವಾಸವನ್ನು ತಿರಸ್ಕರಿಸಿದ್ದೇನೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರೇಸ್ ವ್ಯೂ ಕಾಟೇಜ್ ನಂ.,2 ನಿವಾಸ ನೀಡುವಂತೆ ಮನವಿ ಮಾಡಿದ್ದೆ. ಆದರೆ, ಅವರು ನನ್ನ ಕೋರಿಕೆಯನ್ನು ಮನ್ನಿಸದ ಕಾರಣ ಅವರ ನಿರ್ಧಾರವನ್ನು ತಿರಸ್ಕರಿಸಿದ್ದೇನೆಂದು ಹೇಳಿದ್ದಾರೆ.

Translate »