ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಳಸುತ್ತಿದ್ದ ಕಾರು ಕಡೆಗೂ ಜಮೀರ್ ವಶ
ಮೈಸೂರು

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಳಸುತ್ತಿದ್ದ ಕಾರು ಕಡೆಗೂ ಜಮೀರ್ ವಶ

July 3, 2018

ಬೆಂಗಳೂರು:ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಳಸುತ್ತಿದ್ದ ಫಾರ್ಚು ನರ್ ಕಾರೇ ತನಗೆ ಬೇಕು ಎಂದು ಹಠ ಹಿಡಿದಿದ್ದ ಸಚಿವ ಜಮೀರ್ ಅಹಮದ್ ಕೊನೆಗೂ ಅದನ್ನು ಗಿಟ್ಟಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಿದ್ದರಾಮಯ್ಯ ಸಿಎಂ ಆದ ಸಂದರ್ಭ ದಲ್ಲಿ ಕೆಎ 01, ಜಿ-5734 ಸಂಖ್ಯೆಯ ಫಾರ್ಚುನರ್ ಕಾರನ್ನು ಹೊಂದಿದ್ದರು. ಆದರೆ 2013ರಿಂದ ಅವರು ಓಡಾ ಡುತ್ತಿದ್ದ ಈ ಕಾರಿನ ಮೇಲೆ 2016 ಜೂನ್ ತಿಂಗಳ ಆರಂಭದ ದಿನವೇ ಕಾಗೆಯೊಂದು ಕೂತು ಬಿಟ್ಟಿತ್ತು. ಇದ ರಿಂದ ಈ ಕಾರು ಅಪಶಕುನ ಎಂದು ಅವರು ಅದನ್ನು ಬದಲಿಸಿದ್ದರು.

2016ರ ಜೂನ್ ತಿಂಗಳಿಂದ ಅವರು ಹೊಸ ಬಿಳಿ ಫಾರ್ಚೂನರ್ ಕಾರು ಸಂಖ್ಯೆ ಕೆಎ 01, ಜಿಎ 2016 ಕಾರನ್ನು ಬಳಸುತ್ತಿದ್ದರು. ಇದೀಗ ಅವರು ಸಿಎಂ ಸ್ಥಾನದಲ್ಲಿ ಉಳಿದಿಲ್ಲ. ಇದರಿಂದ ಅವರಿಗೆ ನೀಡಲಾಗಿದ್ದ ಸರ್ಕಾರಿ ಕಾರನ್ನು ತಮಗೆ ನೀಡುವಂತೆ
ಜಮೀರ್ ಸಾಕಷ್ಟು ಲಾಬಿ ನಡೆಸಿದ್ದರು. ಇದೀಗ ಕೊನೆಗೂ ಈ ಕಾರು ಅವರ ಪಾಲಾಗಿದೆ ಎಂಬ ವಿವರ ಸಿಕ್ಕಿದೆ. ಸಿಎಂ ಆಗಿದ್ದಾಗ ಅದರಲ್ಲೂ ಕಡೆಯ ಎರಡು ವರ್ಷ ಇದೇ ಕಾರಲ್ಲಿ ಸಂಚರಿಸಿದ್ದ ಸಿದ್ದರಾಮಯ್ಯ ಮತ್ತೆ ಸಿಎಂ ಆಗಿಲ್ಲ. ಆಗಿದ್ದರೂ ಈ ಕಾರನ್ನು ಬಳಸುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಇದೀಗ ಸಚಿವರಿಗೆ ನೀಡಲು ಕಾದಿದ್ದ ಈ ಕಾರನ್ನು ಜಮೀರ್ ಆಸೆ ಪಟ್ಟು ಪಡೆದುಕೊಂಡಿದ್ದಾರೆ. ಹಿಂದೆ ಒಮ್ಮೆ ಫಾರ್ಚುನರ್ ಕಾರೇ ಏಕೆ ಎಂದು ಕೇಳಿದ್ದಕ್ಕೆ ನಾವು ದೊಡ್ಡ ಕಾರಲ್ಲಿ ಓಡಾಡಬಾರದಾ? ನಾವು ಚಿಕ್ಕವರಿರಬಹುದು ಆದರೆ ದೊಡ್ಡ ಕಾರಲ್ಲಿ ಬಂದಾಗ ಗುರುತಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು.

Translate »