ಮಾನಸ ಸರೋವರ ಯಾತ್ರೆಗೆ ತೆರಳಿರುವ ಮೈಸೂರು, ಮಂಡ್ಯ, ಹಾಸನ ಯಾತ್ರಾರ್ಥಿಗಳಿಗೆ ಸಂಕಷ್ಟ
ಮೈಸೂರು

ಮಾನಸ ಸರೋವರ ಯಾತ್ರೆಗೆ ತೆರಳಿರುವ ಮೈಸೂರು, ಮಂಡ್ಯ, ಹಾಸನ ಯಾತ್ರಾರ್ಥಿಗಳಿಗೆ ಸಂಕಷ್ಟ

July 3, 2018

ಬೆಂಗಳೂರು: ಮೈಸೂರು ಸೇರಿದಂತೆ ರಾಜ್ಯದಿಂದ ಮಾನಸ ಸರೋವರ ಯಾತ್ರೆಗೆ ತೆರಳಿದ್ದ 300ಕ್ಕೂ ಹೆಚ್ಚು ಮಂದಿ, ನೇಪಾಳದಲ್ಲಿ ಸುರಿ ಯುತ್ತಿರುವ ಭಾರೀ ಮಳೆಯಲ್ಲಿ ಸಿಲುಕಿ, ಪರದಾಡುತ್ತಿದ್ದಾರೆ.

ಮೈಸೂರು, ಮಂಡ್ಯ, ರಾಮನಗರ, ಹಾಸನ ಸೇರಿದಂತೆ ಹಲ ವೆಡೆಯಿಂದ ಮಾನಸ ಸರೋವರ ಯಾತ್ರೆಗೆ ತೆರಳಿದ್ದು, ನೇಪಾಳದ ಸಿಮಿ ಕೋಟ್ ಮೂಲಕ ಸಂಚರಿಸಬೇಕಿತ್ತು. ಆದರೆ ಭಾರೀ ಮಳೆಯಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಯಾತ್ರಾರ್ಥಿಗಳು ನೀರು, ಊಟವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಏಷಿಯನ್ ಟ್ರಾವೆಲ್ಸ್ ಮೂಲಕ ತೆರಳಿದ್ದ ಮೈಸೂರಿನ ಮಾಲತೇಶ್, ವೆಂಕಟೇಶ್, ದಾಮೋದರ್, ಚನ್ನ ರಾಯಪಟ್ಟಣದ ರಾಮಶೆಟ್ಟಿ ಮತ್ತಿತರರು ಸುರಕ್ಷಿತವಾಗಿದ್ದಾರೆಂದು ಬೆಂಗಳೂರು ಕಂಟ್ರೋಲ್‍ಗೆ ಮಾಹಿತಿ ಬಂದಿರುವು ದಾಗಿ ಹೇಳಲಾಗಿದೆ. ಆದರೆ ಕೆಲವರು ನಮ್ಮೊಂದಿಗೆ ಪ್ರವಾಸಿ ಸಂಸ್ಥೆಯವರು ಸಂಪರ್ಕದಲ್ಲಿಲ್ಲ. ಮೂರು ದಿನಗಳಿಂದ ಒಂದೇ ಕಡೆ ಬಂಧಿಯಾಗಿದ್ದೇವೆ. ಇಲ್ಲಿ ರುವ ಮನೆಯವರು ಒಂದಿಷ್ಟು ಆಹಾರ ನೀಡಿದ್ದಾರೆ.

ಇನ್ನು ಮುಂದೆ ಹೇಗೆಂದು ಆತಂಕದಲ್ಲಿದ್ದೇವೆ. ದಯಮಾಡಿ ನಮ್ಮನ್ನು ಪಾರು ಮಾಡಿ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾಧಿಕಾರಿ ಅಭಿನವ್ ಜಿ.ಶಂಕರ್ ಅವರು, ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮೈಸೂರಿನಿಂದ ತೆರಳಿರುವ ಯಾತ್ರಾರ್ಥಿಗಳ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನದಲ್ಲಿದ್ದೇವೆ. ಮಳೆಯಲ್ಲಿ ಸಿಲುಕಿರುವವರಿಗೆ ನೀರು, ಊಟ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವುದರೊಂದಿಗೆ ರಕ್ಷಣಾ ಕಾರ್ಯ ನಡೆಯುತ್ತಿದೆ. ಯಾತ್ರೆಗೆ ತೆರಳಿರುವವರ ಕುಟುಂಬದವರು ಟೋಲ್‍ಫ್ರೀ ಸಂಖ್ಯೆ; 91801070, ದೂ.ಸಂ.8022340676, 977985-1107006 ಸಂಪರ್ಕಿಸಿ, ಮಾಹಿತಿ ಪಡೆಯಬಹುದೆಂದು ತಿಳಿಸಿದ್ದಾರೆ.

Translate »