ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಸಾಫ್ಟ್ ವೇರ್ ಉದ್ಯಮಿಗಳ ಕಣ್ಣು
ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಸಾಫ್ಟ್ ವೇರ್ ಉದ್ಯಮಿಗಳ ಕಣ್ಣು

July 3, 2018

ಮಂಡ್ಯ: ಲೋಕಸಭಾ ಕ್ಷೇತ್ರದ ಮೇಲೆ ಐಟಿ ಉದ್ಯಮಿಗಳ ಕಣ್ಣು ಬಿದ್ದಿದೆ. ಕ್ಷೇತ್ರದ ಮೇಲೆ ಒಬ್ಬೊಬ್ಬರೇ ಒಲವು ತೋರುತ್ತಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣ ವಾಗಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲು ಅನುಭವಿಸಿರೋ ಉದ್ಯಮಿ, ರೈತ ನಾಯಕ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧೆಗೆ ರೈತ ಸಂಘದ ಕೆಲ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ತಮ್ಮ ಅಮೆರಿಕಾ ಕಂಪನಿಯನ್ನು ಮಾರಾಟ ಮಾಡಿ, ಮೈಸೂರಿನಲ್ಲಿ ವ್ಯವಹಾರ ಮಾಡೋ ಜೊತೆಗೆ ರೈತ ಹೋರಾಟ ಮತ್ತು ರಾಜಕೀಯಕ್ಕೆ ಧುಮುಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ಪುಟ್ಟಣ್ಣಯ್ಯರಂತೆ ಮತ್ತೊಬ್ಬ ಐಟಿ ಉದ್ಯಮಿ ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿಕೊಪ್ಪಲು

ಗ್ರಾ,ಮದ ಬಿಇ ಎಂಟೆಕ್ ಪದವೀಧರ ವಿಜಯ್ ಕುಮಾರ್. ಬೆಂಗಳೂರಿ ನಲ್ಲಿ ತಮ್ಮದೇಯಾದ Qsync ಸಾಫ್ಟ್ ವೇರ್ ಕಂಪನಿಯನ್ನು ಹೊಂದಿರುವ ವಿಜಯ್ ಕುಮಾರ್, ಬಿಜೆಪಿ ಟಿಕೆಟ್‍ನ ಪ್ರಬಲ ಆಕಾಂಕ್ಷಿ ಯಾಗಿದ್ದಾರೆ. ಈಗಾಗಲೇ ಬಿಜೆಪಿ ನಾಯಕರ ಜೊತೆಗೆ ಮಾತುಕತೆ ನಡೆಸಿರೋ ವಿಜಯ್ ಕುಮಾರ್, ಮಂಡ್ಯದಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ.

ಮತ್ತೊಂದು ವಿಚಾರ ಅಂದರೆ ವಿಜಯ್ ಕುಮಾರ್, ಜೆಡಿಎಸ್ ಪ್ರಬಲ ಆಕಾಂಕ್ಷಿಯಾಗಿರೋ ಡಾ. ಲಕ್ಷ್ಮಿ ಅಶ್ವಿನ್ ಗೌಡರ ಸೋದರ ಸಂಬಂಧಿಯೂ ಆಗಿದ್ದಾರೆ. ತಮ್ಮ ಕಂಪನಿಯಲ್ಲಿ 350ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದು, ಇದರ ಜೊತೆಗೆ ಮಂಡ್ಯದಲ್ಲೂ ಕಂಪನಿ ತೆರೆಯಲು ಮುಂದಾಗಿದ್ದಾರೆ ಅಂತ ಹೇಳಲಾಗಿದೆ. ಇದರ ಜೊತೆಗೆ ಬಿಜೆಪಿ ಸ್ಥಳೀಯ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದ್ದು, ಜೊತೆಗೆ ಜಾತಿಯಲ್ಲಿ ಒಕ್ಕಲಿಗ ಎಂಬ ಶಕ್ತಿಯೂ ಇದೆ.

Translate »