ಮೈಸೂರಿನ ೬ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಆರಂಭ
ಮೈಸೂರು

ಮೈಸೂರಿನ ೬ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಆರಂಭ

October 3, 2021

ಹೊಸ ಸಿನಿಮಾಗಾಗಿ ಕಾದಿರುವ ಮತ್ತೆರಡು ಟಾಕೀಸ್
ಮೈಸೂರು, ಅ.೨(ಆರ್‌ಕೆ)-ಮೈಸೂರಿನಲ್ಲಿ ಉಳಿದಿರುವ ೬ ಚಿತ್ರಮಂದಿರಗಳಲ್ಲಿ ಶುಕ್ರವಾರದಿಂದ ಸಿನೆಮಾ ಪ್ರದರ್ಶನ ಪುನಾ ರಂಭಗೊAಡಿದೆ. ಶೇ.೧೦೦ರಷ್ಟು ಆಸನಗ ಳೊಂದಿಗೆ ಸಿನಿಮಾ ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿರುವುದರಿಂದ ಮೈಸೂರಿನ ೬ ಟಾಕೀಸ್‌ಗಳಲ್ಲಿ ಅಕ್ಟೋಬರ್ ೧ ರಿಂದ ಚಿತ್ರ ಪ್ರದರ್ಶನ ಆರಂಭಗೊAಡಿದೆ.

ಉಳಿದ ಎರಡು ಟಾಕೀಸ್‌ಗಳ ಮಾಲೀಕರು ಹೊಸ ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ ಎಂದು ಚಲನಚಿತ್ರ ಪ್ರದರ್ಶಕರ ಸಂಘದ ಉಪಾಧ್ಯಕ್ಷ ರಾಜಾರಾಂ ಅವರು ತಿಳಿಸಿದ್ದಾರೆ. ಮೈಸೂರಿನಲ್ಲಿ ಒಟ್ಟು ೨೧ ಸಿನಿಮಾ ಮಂದಿರಗಳಿದ್ದವು. ಕೋವಿಡ್-೧೯ ಲಾಕ್‌ಡೌನ್ ನಿರ್ಬಂಧ ಹಾಗೂ ಇನ್ನಿತರ ಕಾರಣಗಳಿಗಾಗಿ ಈವರೆಗೆ ೧೩ ಚಿತ್ರಮಂದಿರಗಳು ಶಾಶ್ವತವಾಗಿ ಬಂದ್ ಆಗಿವೆ. ಉಳಿದಿರುವ ೮ರ ಪೈಕಿ ೬ ಟಾಕೀಸ್‌ಗಳಲ್ಲಿ ಮಾತ್ರ ಪ್ರದರ್ಶನ ಆರಂಭವಾಗಿದೆ ಎಂದು ವಿವರಿಸಿದರು.

ಹೊಸ ಗುಣಾತ್ಮಕ ಸಿನಿಮಾ ನಿರ್ಮಾಣವಾಗದೇ ಇರುವುದು, ಪ್ರೇಕ್ಷಕರು ಅವು ಗಳನ್ನು ಸ್ವೀಕರಿಸದೆ ಇರುವುದು, ಈ ತೆರಿಗೆ ಹೊರೆ, ಇನ್ನಿತರ ದುಬಾರಿ ವೆಚ್ಚದ ಕಾರಣ ಚಿತ್ರಮಂದಿರ ನಡೆಸುವುದು ದುಸ್ತರವಾಗುತ್ತದೆ. ಮುಂದೆ ಭವಿಷ್ಯ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಅದರಲ್ಲಿ ಮಾಲೀಕರು, ಸಿಬ್ಬಂದಿ ಭವಿಷ್ಯ ಅಡಗಿದೆ ಎಂದು ರಾಜಾರಾಂ ತಿಳಿಸಿದ್ದಾರೆ. ಶುಕ್ರವಾರದಿಂದ ಆರಂಭವಾಗಿರುವ ಪ್ರದರ್ಶನಗಳಿಗೆ ಸಮಾಧಾನಕರವಾಗಿ ಪ್ರೇಕ್ಷಕರಿಂದ ಪ್ರತಿಕ್ರಿಯೆ ಬರುತ್ತಿದೆ. ಮುಂದೆ ಏನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

Translate »