ಅಭಿವೃದ್ಧಿ ವಿಚಾರ ಬಿಟ್ಟು ಜಾತಿ ಬಗ್ಗೆ ಚರ್ಚೆ ವಿಪಕ್ಷಗಳ ವಿರುದ್ಧ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ವಾಗ್ದಾಳಿ
ಮೈಸೂರು

ಅಭಿವೃದ್ಧಿ ವಿಚಾರ ಬಿಟ್ಟು ಜಾತಿ ಬಗ್ಗೆ ಚರ್ಚೆ ವಿಪಕ್ಷಗಳ ವಿರುದ್ಧ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ವಾಗ್ದಾಳಿ

October 3, 2021

ಮೈಸೂರು, ಅ.೨-(ಎಸ್‌ಪಿಎನ್)- ಬಿಜೆಪಿಯನ್ನು ಜಾತಿವಾದಿ ಪಕ್ಷ ಎಂದು ಸಭೆ-ಸಮಾರಂಭಗಳಲ್ಲಿ ಟೀಕಿಸುವ ವಿಪಕ್ಷದ ನಾಯಕರೇ ದೇಶದ ಉದ್ದ ಗಲಕ್ಕೂ ಜಾತಿ ಕುರಿತು ಚರ್ಚೆ ಮಾಡು ತ್ತಿರುವುದು ಏಕೆ ಎಂದು ಗ್ರಾಮೀಣಾಭಿ ವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಒಬಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಯಾವುದೇ ರಾಜ್ಯದಲ್ಲೂ ವಿಪಕ್ಷಗಳು, ಅಲ್ಲಿನ ಅಭಿ ವೃದ್ಧಿ ಕುರಿತು ಚರ್ಚೆ ಮಾಡಲ್ಲ. ರಾಷ್ಟಿçÃಯ ವಿಚಾರಗಳ ಬಗ್ಗೆಯೂ ಚರ್ಚೆ ಮಾಡಲ್ಲ. ಹೋಗಲಿ ಅವರ ಪಕ್ಷದ ಸಿದ್ಧಾಂತದ ಆಧಾರದ ಮೇಲೂ ಚರ್ಚೆ ಮಾಡುತ್ತಿಲ್ಲ. ಬದಲಾಗಿ ಎಲ್ಲರೂ

ಜಾತಿವಾರು ಸಭೆ ಗಳನ್ನು ಆಯೋಜಿಸಿ ವಿಷಬೀಜ ಬಿತ್ತುತ್ತಿ ದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜಾತಿ ಸಮಾವೇಶಗಳಲ್ಲಿ ಬಿಜೆಪಿಯನ್ನು ಜಾತಿವಾದಿ ಎಂದು ಟೀಕೆ ಮಾಡುತ್ತಾರೆ. ಅವರಿಗೆ ನಮ್ಮ ಬಗ್ಗೆ ಮಾತನಾಡಲು ನೈತಿ ಕತೆ ಇದೆಯೇ ಎಂದು ಪ್ರಶ್ನಿಸಿದರಲ್ಲದೆ, ಬಿಜೆಪಿಯಲ್ಲಿರುವ ಒಬಿಸಿ ಮೋರ್ಚಾ ಕೂಡ ಹಿಂದುತ್ವ ಆಧಾರದ ಮೇಲೆ ಸಂಘ ಟನೆ ಮಾಡಲಾಗುತ್ತಿದೆ. ನಮ್ಮ ಪಕ್ಷದಲ್ಲಿ ೩ ವರ್ಷಕ್ಕೊಮ್ಮೆ ರಾಷ್ಟಿçÃಯ ಅಧ್ಯಕ್ಷರು ಬದಲಾವಣೆಯಾಗುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಇಲ್ಲಿಯವರೆಗೂ ತಾತ್ಕಾಲಿಕ ಅಧ್ಯ ಕ್ಷರ ನೇತೃತ್ವದಲ್ಲೇ ಪಕ್ಷ ಮುನ್ನಡೆಯುತ್ತಿದೆ. ಆದರೂ ನಮ್ಮನ್ನೇ ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ಅರ್ಥವಿದೆಯೇ ಎಂದು ಪ್ರಶ್ನಿಸಿ ದರು. ಈ ಕುರಿತು ಚರ್ಚಿಸಲು ಕಾಂಗ್ರೆಸ್‌ನ ೨೩ ಹಿರಿಯ ನಾಯಕರು ಪತ್ರ ಬರೆದರೆ, ಆ ಪತ್ರಕ್ಕೆ ಮೂರು ಕಾಸು ಬೆಲೆ ಕೊಡಲಿಲ್ಲ. ಇದು ಎಲ್ಲರಿಗೂ ಗೊತ್ತಿರುವÀ ವಿಚಾರ ಎಂದರು.
ಕಳೆದ ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಡಿದಾಗ ೨೭ ಮಂದಿ ಒಬಿಸಿ, ೨೦ ದಲಿತರು ಸೇರಿ ದಂತೆ ಒಟ್ಟು ೪೭ ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಕಾಂಗ್ರೆಸ್ ಎಂದಾದರು ಹಿಂದುಳಿದ, ದಲಿತರಿಗೆ ಮಂತ್ರಿ ಸ್ಥಾನ ನೀಡಿತ್ತೆ ಎಂದು ಪ್ರಶ್ನಿಸಿದರಲ್ಲದೆ, ಆಯಾಯ ರಾಜ್ಯಗಳ ಬೇಡಿಕೆಯಂತೆ ಒಬಿಸಿ ಪಟ್ಟಿಗೆ ಸೇರಿಸಲು ಅನುವಾಗುವಂತೆ ಸಂವಿಧಾನಕ್ಕೆ ತಿದ್ದು ಪಡಿ ತರಲಾಗಿದೆ. ಒಬಿಸಿ ವರ್ಗದವರಿಗೆ ಮೆಡಿಕಲ್ ಸೀಟ್‌ಗಳಲ್ಲಿ ಶೇ.೨೭ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇದು ಕಾಂಗ್ರೆಸ್ ನಿಂದ ಸಾಧ್ಯವಿತ್ತೆ ಎಂದು ಪ್ರಶ್ನಿಸಿದರು.

ಈ ವೇಳೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ, ಮೈಸೂರು ವಿಭಾಗದ ಪ್ರಭಾರಿ ಮೈ.ವಿ. ರವಿಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಮೈಸೂರು ನಗರ ಒಬಿಸಿ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಮಾಜಿ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ಬಿ.ಎಂ.ರಘು, ಬಿಜೆಪಿ ಗ್ರಾಮಾಂ ತರ ಒಬಿಸಿ ಅಧ್ಯಕ್ಷ ಪರಶುರಾಮಪ್ಪ, ನಗರ ಪಾಲಿಕೆ ಸದಸ್ಯರಾದ ಕೆ.ಜೆ.ರಮೇಶ್, ಆಶಾ ನಾಗಭೂಷಣ್, ರೂಪಾ ಯೋಗೇಶ್, ಮುಖಂಡರಾದ ಮಹೇಶ್ ಮಳಲವಾಡಿ, ಹರ್ಷ, ಗೋಪಾಲ್, ಮಣ ರತ್ನಂ, ಪಾಪಣ್ಣ, ಹೆಮ್ಮರಗಾಲ ಸೋಮಣ್ಣ ಸೇರಿದಂತೆ ಇತರೆ ಮುಖಂಡರಿದ್ದರು.

Translate »