ಯುವ ಜನತೆ ಮಾನವೀಯತೆ ಮೌಲ್ಯ ಅಳವಡಿಸಿಕೊಂಡರೆ ಭ್ರಷ್ಟ ವ್ಯವಸ್ಥೆ ಬದಲಿಸಬಹುದು
ಮೈಸೂರು

ಯುವ ಜನತೆ ಮಾನವೀಯತೆ ಮೌಲ್ಯ ಅಳವಡಿಸಿಕೊಂಡರೆ ಭ್ರಷ್ಟ ವ್ಯವಸ್ಥೆ ಬದಲಿಸಬಹುದು

October 3, 2021

ಮೈಸೂರು,ಅ.೨(ಪಿಎಂ)-ಭ್ರಷ್ಟ ವ್ಯವಸ್ಥೆ ಬದಲಾಯಿಸ ಬೇಕಾದರೆ ನಮ್ಮ ಯುವ ಜನತೆಯಲ್ಲಿ ತೃಪ್ತಿ ಮತ್ತು ಮಾನ ವೀಯತೆ ಎಂಬ ಎರಡು ಮೌಲ್ಯಗಳನ್ನು ಅಳವಡಿಸಬೇಕಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣ ದಲ್ಲಿ ವೈದ್ಯ ವಾರ್ತಾ ಪ್ರಕಾಶನದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ನಟರಾಜ್ ಜೋಯಿಸ್ ಅವರು ಸಂಪಾದಿಸಿರುವ `ಗಾಂಧಿನಗರದಲ್ಲಿ ಕೋಳಿ ಸಾಂಬಾರ್ (ನಿವೃತ್ತ ನ್ಯಾಯಮೂರ್ತಿ ಡಾ.ಜಿನದತ್ತ ದೇಸಾಯಿ ಅವರ ಆಯ್ದ ೯೦ ಚುಟುಕು ಕವಿತೆಗಳ ಸಂಕಲನ) ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನತೆಯಲ್ಲಿ ತೃಪ್ತಿ ಮತ್ತು ಮಾನವೀಯತೆ ಎಂಬ ಎರಡು ಮೌಲ್ಯ ಅಳವಡಿಸಿಕೊಂಡರೆ ಈ ಸಮಾಜದಲ್ಲಿ ಬಹ ಳಷ್ಟು ಬದಲಾವಣೆ ತರಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ನಾನು ೧,೬೦೦ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಈ ಮೌಲ್ಯ ಅಳವಡಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಅಭಿಪ್ರಾಯ ದಲ್ಲಿ ನನ್ನ ವಯೋಮಾನದವರನ್ನು ಬದಲಾಯಿಸಲು ಸಾಧ್ಯ ವಿಲ್ಲ ಎಂದರು. ನಮ್ಮ ಕಾಲದಲ್ಲಿ ಪೋಷಕರು ಇರುವುದರಲ್ಲಿ ತೃಪ್ತಿಯಿಂದಿರಬೇಕು ಎಂದು ಹೇಳುತ್ತಿದ್ದರು. ಬದಲಾವಣೆ ನನ್ನ ಕಾಲದಲ್ಲೇ ಆಗುವುದಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಪ್ರಸ್ತುತದಲ್ಲಿ ಭ್ರಷ್ಟರನ್ನು ದೂರುವುದು ಬಹಳ ಕಡಿಮೆ. ಜೈಲಿನಿಂದ ಜಾಮೀನು ತೆಗೆದುಕೊಂಡು ಹೊರ ಬರುವವರಿಗೆ ಹಾರ ಹಾಕಿ ಸ್ವಾಗತ ಮಾಡುವಂತಹ ಸನ್ನಿವೇಶ ಇಂದು ಸೃಷ್ಟಿಯಾಗಿದೆ. ಪ್ರಾಮಾಣ ಕರ ಬಗ್ಗೆ ಇಂದು `ಅವನು ಹುಚ್ಚ. ತಾನೂ ತಿನ್ನಲ್ಲಾ ನಮಗೂ ತಿನ್ನಲು ಬಿಡಲ್ಲಾ’ ಎನ್ನುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಲೋಕಾಯುಕ್ತ ನ್ಯಾಯಮೂರ್ತಿ ಆಗಿದ್ದ ಸಂದರ್ಭ ದಲ್ಲಿ ಸಾಕಷ್ಟು ಅನ್ಯಾಯ ಕಂಡಿದ್ದೇನೆ. ಆಡಳಿತದಿಂದ ಜನತೆಗೆ ಆಗುವ ಅನ್ಯಾಯವೂ ಸೇರಿದಂತೆ ಹಲವು ರೀತಿ ಅನ್ಯಾಯಗಳನ್ನು ನೋಡಿದ್ದೇನೆ. ನಾನು ಚಿಕ್ಕವನಾಗಿದ್ದಾಗ ಸಮಾಜಘಾತುಕ ವ್ಯಕ್ತಿಗಳನ್ನು ಖಂಡಿಸಿ, ಬಹಿಷ್ಕರಿಸುತ್ತಿದ್ದರು. ಆದರೆ ಇಂದು ಏನೇ ಮಾಡಿದರೂ ಆತ ಶ್ರೀಮಂತ ಅಥವಾ ಅಧಿಕಾರದಲ್ಲಿದ್ದರೆ ಸಾಕು ಅವರಿಗೆ ಸಲಾಂ ಹೊಡೆಯುವ ಪರಿಸ್ಥಿತಿ ಇದೆ. ಒಬ್ಬರು ದೊಡ್ಡ ರಾಜಕಾರಣ ನನ್ನ ವಿಚಾರಕ್ಕೆ ಮಧ್ಯ ಪ್ರವೇಶಿಸಿದ್ದರು. ನಾನು ಅವರಿಗೆ `ಸ್ವಾಮಿ ನನಗೆ ಇರುವುದು ಒಬ್ಬಳೇ ಹೆಂಡತಿ’ ಎಂದು ಒಂದು ಜವಾಬು ಕೊಟ್ಟೆ. ಅವರು ಮರು ಮಾತನಾಡಲಿಲ್ಲ ಎಂದರು.
ನಾನು ಚಿಕ್ಕವನಾಗಿದ್ದಾಗ ನಮ್ಮ ಮನೆಯಲ್ಲಿ ಗಾಂಧಿ ಸೇರಿದಂತೆ ಹಲವು ಮಹನೀಯರ ಫೋಟೋಗಳಿದ್ದವು. ಈ ಫೋಟೋಗಳಿಗೆ ನಮಸ್ಕಾರ ಮಾಡುವಂತೆ ನಮ್ಮ ಹಿರಿಯರು ಹೇಳಿಕೊಡುತ್ತಿದ್ದರು. ಆ ಮಹನೀಯರಂತೆ ಆಗಬೇಕೆಂದು ಉತ್ತೇಜನ ನೀಡುತ್ತಿದ್ದರು. ಕೆಲ ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ನೋಡುತ್ತಿದ್ದವರು ಮತ್ತೆ ಮಂತ್ರಿಗಳಾದರು. ಅವರ ಫೋಟೋ ಹಾಕಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಕೃತಿ ಬಿಡುಗಡೆ ಮಾಡಿದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಪ್ರಧಾನ ಗುರುದತ್, ಕೃತಿ ಸಂಪಾದಕ ಮತ್ತು ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಆರ್.ನಟರಾಜ್‌ಜೋಯಿಸ್, ಕೇಂದ್ರ ಸರ್ಕಾರದ ರಾಜ್ಯ ಉಗ್ರಾಣ ನಿಗಮದ ನಿರ್ದೇಶಕ ಜಿ.ರವಿ, ವೈದ್ಯ ವಾರ್ತಾ ಪ್ರಕಾಶನದ ಪ್ರಕಾಶಕ ಡಾ.ಎಂ.ಜಿ.ಆರ್.ಅರಸ್, ನಿರ್ದೇಶಕ ಹೆಚ್.ಎಂ.ಟಿ.ಲಿAಗರಾಜೇಅರಸ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮತ್ತಿತರರು ಹಾಜರಿದ್ದರು.

Translate »